ಆ್ಯಪ್ನಗರ

ಅಧಿಕಾರದತ್ತ ಬಿಜೆಪಿ

ಪುರಸಭೆ ಚುನಾವಣೆ ಮುಗಿದು ವರ್ಷ ಕಳೆದಿದ್ದರೂ ಈವರೆಗೆ ಪುರಸಭೆ ಅಧ್ಯಕ್ಷ ಮೀಸಲು ಅಂತಿಮಗೊಂಡಿಲ್ಲ. ಆದರೂ ಯಾವ ಪಕ್ಷ ಅಧಿಕಾರಕ್ಕೇರುತ್ತದೆ ಎಂಬ ಕುರಿತು ವರ್ಷದಿಂದ ನಡೆಯುತ್ತಿರುವ ರಾಜಕೀಯ ಚರ್ಚೆ ಗುರುವಾರ ಮತ್ತೊಂದು ತಿರುವು ಪಡೆದಿದೆ.

Vijaya Karnataka 24 Jul 2020, 5:00 am
ಶಿಕಾರಿಪುರ: ಪುರಸಭೆ ಚುನಾವಣೆ ಮುಗಿದು ವರ್ಷ ಕಳೆದಿದ್ದರೂ ಈವರೆಗೆ ಪುರಸಭೆ ಅಧ್ಯಕ್ಷ ಮೀಸಲು ಅಂತಿಮಗೊಂಡಿಲ್ಲ. ಆದರೂ ಯಾವ ಪಕ್ಷ ಅಧಿಕಾರಕ್ಕೇರುತ್ತದೆ ಎಂಬ ಕುರಿತು ವರ್ಷದಿಂದ ನಡೆಯುತ್ತಿರುವ ರಾಜಕೀಯ ಚರ್ಚೆ ಗುರುವಾರ ಮತ್ತೊಂದು ತಿರುವು ಪಡೆದಿದೆ.
Vijaya Karnataka Web bjp towords power
ಅಧಿಕಾರದತ್ತ ಬಿಜೆಪಿ


ಗುರುವಾರ ಇಬ್ಬರು ಕಾಂಗ್ರೆಸ್‌ ಪಕ್ಷದ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಅಲ್ಲದೆ ಪಕ್ಷೇತರವಾಗಿ ಗೆಲುವು ಸಾಧಿಸಿದ್ದ ಮೂರೂ ಸದಸ್ಯರೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ತಮ್ಮ ನಿಷ್ಠೆ ಬಿಎಸ್‌ವೈ ಕಡೆಗೆ ಎನ್ನುವ ಹೇಳಿಕೆ ನೀಡುವ ಮೂಲಕ ಪುರಸಭೆ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ. ಚುನಾವಣೆ ನಂತರ ಸಹಜವಾಗಿ ಬಹುಮತ ಪಡೆದಿದ್ದ ಕಾಂಗ್ರೆಸ್‌ನ ಬಲ ಕುಸಿತಗೊಂಡಿದ್ದು, ಬಿಜೆಪಿ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡಿದೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ ಸದಸ್ಯರಲ್ಲಿನ ಪೈಪೋಟಿ ಮತ್ತು ಸಿಎಂ ಕ್ಷೇತ್ರದಲ್ಲಿಆಡಳಿತ ಹಿಡಿಯಲೇ ಬೇಕೆಂಬ ಬಿಜೆಪಿ ಜಿದ್ದಿಗೆ ಬಿದ್ದಿದ್ದು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದೆ ಎಂಬ ಚರ್ಚೆ ಸಾರ್ವಜನಿಕವಾಗಿ ನಡೆದಿದೆ.

ಯಾವುದೆ ಪಕ್ಷ ಅಧಿಕಾರಕ್ಕೆ ಏರುವ ಮುನ್ನವೆ ಕಾಂಗ್ರೆಸ್‌ನ ಇಬ್ಬರು ಸದಸ್ಯರಾದ ರಮೇಶ, ಉಮಾವತಿ ತಮ್ಮ ಪುರಸಭೆ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ತಾಲೂಕಿನ ರಾಜಕೀಯ ಬೆಳವಣಿಗೆಯಲ್ಲೊಂದು ವಿಭಿನ್ನ ದಾಖಲೆಗೆ ಕಾರಣರಾಗಿದ್ದಾರೆ. 25 ವರ್ಷಗಳ ನಂತರ ಮೊದಲ ಬಾರಿಗೆ ಪುರಸಭೆಯಲ್ಲಿಅಧಿಕಾರಕ್ಕೇರುವ ಉತ್ಸಾಹ ಹೊಂದಿದ್ದ ಕಾಂಗ್ರೆಸ್‌ನ ಆಸೆ ಭಗ್ನಗೊಂಡಿದೆ. ಬಿಜೆಪಿ ಸ್ಥಳೀಯ ಆಡಳಿತ ಪಡೆಯುವುದಕ್ಕಾಗಿ ಆಪರೇಷನ್‌ ಕಮಲ ನಡೆಸುವ ಮೂಲಕ ಕೊರೊನಾ ಸಂಕಷ್ಟದಲ್ಲೂರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

==
ಅಧಿಕಾರದತ್ತ ಕಮಲ :
ಪುರಸಭೆ ಒಟ್ಟು 23 ಸ್ಥಾನದಲ್ಲಿಕಾಂಗ್ರೆಸ್‌ 12, ಬಿಜೆಪಿ 8, ಪಕ್ಷೇತರರು 3 ಸ್ಥಾನ ಗೆದ್ದಿದ್ದರು. ಹೀಗಾಗಿ ಕಾಂಗ್ರೆಸ್‌ ಸಹಜ ಬಹುಮತ ಪಡೆದಿತ್ತು. ಅಧ್ಯಕ್ಷ ಚುನಾವಣೆಯಲ್ಲಿಬಿಜೆಪಿಯ ಶಾಸಕ, ಸಂಸದರಿಗೂ ಮತದಾನ ಅವಕಾಶ ಇದ್ದರೂ ಬಹುಮತ ಸಿಗುತ್ತಿರಲಿಲ್ಲ. ಹೀಗಾಗಿ ಪಕ್ಷೇತರ ಸದಸ್ಯರು ಯಾವ ಪಕ್ಷ ಬೆಂಬಲಿಸುತ್ತಾರೋ ಆ ಪಕ್ಷ ಪುರಸಭೆ ಅಧಿಕಾರ ನಡೆಸುತ್ತದೆ ಎನ್ನುವ ರಾಜಕೀಯ ಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ನಡೆದ ನಾಟಕೀಯ ಬೆಳವಣಿಗೆಯಲ್ಲಿಬಿಜೆಪಿ ಅಧಿಕಾರದತ್ತ ದಾಪುಗಾಲಿಟ್ಟಿದೆ.

===
ಮುಂದೇನು ?
ಸದ್ಯದ ಪರಿಸ್ಥಿತಿಯಲ್ಲಿಬಿಜೆಪಿ (ಶಾಸಕ,ಸಂಸದರ ಮತ ಸಹಿತ) ಮತ್ತು ಕಾಂಗ್ರೆಸ್‌ ಸಮಬಲ ಹೊಂದಿದೆ. ಉಪ ಚುನಾವಣೆ ಮುನ್ನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದರೆ, ಪಕ್ಷೇತರರ ನೆರವಿನೊಂದಿಗೆ ಬಿಜೆಪಿಯು ಶಾಸಕ, ಸಂಸದರ ಬೆಂಬಲವಿಲ್ಲದೆ ಪುರಸಭೆಯಲ್ಲಿಅಧಿಕಾರಕ್ಕೇರಲಿದೆ. ತೆರವಾದ ಎರಡು ವಾರ್ಡ್‌ಗಳಲ್ಲಿಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಮುನ್ನವೇ ಉಪಚುನಾವಣೆ ನಡೆದರೆ, ಬಿಜೆಪಿ ಎರಡೂ ಸ್ಥಾನ ಗೆದ್ದಲ್ಲಿನಿರಾಯಾಸವಾಗಿ ಅಧಿಕಾರಕ್ಕೇರಲಿದೆ. ಆಗ ಪಕ್ಷೇತರರ ಬೆಂಬಲದ ಅಗತ್ಯವೂ ಇಲ್ಲ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿಮತ್ತೆ ಕಾಂಗ್ರೆಸ್‌ ಗೆದ್ದರೆ ಬಹುಮತ ಪಡೆಯುವ ಕಾಂಗ್ರೆಸ್‌ ಅಧಿಕಾರಕ್ಕೇರುವ ಕನಸಿನೊಂದಿಗೆ ಪಕ್ಷೇತರರನ್ನು ಸೆಳೆಯುವ ಯತ್ನ ಮಾಡಬಹುದು. ಬಿಜೆಪಿ, ಕಾಂಗ್ರೆಸ್‌ ತಲಾ ಒಂದು ಸ್ಥಾನ ಗಳಿಸಿದರೂ ಪಕ್ಷೇತರರೇ ನಿರ್ಣಾಯವಾಗಲಿದ್ದಾರೆ. ಪಕ್ಷೇತರರು ಅಥವಾ ಜೆಡಿಎಸ್‌ ಜಯಗಳಿಸಿದರೆ ಮತ್ತೊಮ್ಮೆ ರಾಜಕೀಯ ಸಂಚಲನಕ್ಕೆ ಕಾರಣವಾಗಲಿದೆ.

==
ಸವಾಲುಗಳೇನು ?
ಬಿಜೆಪಿ : * ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳುವುದು * ಉಪ ಚುನಾವಣೆಯಲ್ಲಿಎರಡೂ ಸ್ಥಾನಗಳಿಸುವುದು

ಕಾಂಗ್ರೆಸ್‌ : * ಉಪ ಚುನಾವಣೆಯಲ್ಲಿಮತ್ತೊಮ್ಮೆ ಗೆಲುವು ಸಾಧಿಸುವುದು * ಪಕ್ಷದೊಳಗಿನ ಒಗ್ಗಟ್ಟು ಕಾಯ್ದುಕೊಳ್ಳುವುದು

==
ಪಕ್ಷಗಳ ಬಲಾಬಲ

ಹಿಂದೆ ಪ್ರಸ್ತುತ

ಬಿಜೆಪಿ ಕಾಂಗ್ರೆಸ್‌ ಇತರೆ ಬಿಜೆಪಿ ಕಾಂಗ್ರೆಸ್‌ ಇತರೆ

ಸದಸ್ಯರು 8 12 3 8 10 3

ಶಾಸಕ 1 0 0 1 0 0

ಸಂಸದ 1 0 0 1 0 0

ಒಟ್ಟು 10 12 3 10 10 3

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ