ಆ್ಯಪ್ನಗರ

ಬದುಕು ಬೆಳಗುವ ರಕ್ತದಾನ: ಸ್ವಾಮೀಜಿ

ಪ್ರಸ್ತುತ ದಿನಮಾನದಲ್ಲಿ ಮನುಷ್ಯನಿಗೆ ಆರೋಗ್ಯವೇ ಮುಖ್ಯ ವೆನಿಸಿದೆ. ರಕ್ತದಾನ ಬೇರೆಯವರ ಬದುಕನ್ನು ಬೆಳಗುತ್ತದೆ ಎಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

Vijaya Karnataka 21 Jun 2019, 5:00 am
ಆನಂದಪುರಂ : ಪ್ರಸ್ತುತ ದಿನಮಾನದಲ್ಲಿ ಮನುಷ್ಯನಿಗೆ ಆರೋಗ್ಯವೇ ಮುಖ್ಯ ವೆನಿಸಿದೆ. ರಕ್ತದಾನ ಬೇರೆಯವರ ಬದುಕನ್ನು ಬೆಳಗುತ್ತದೆ ಎಂದು ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web blood donate gives life swamiji
ಬದುಕು ಬೆಳಗುವ ರಕ್ತದಾನ: ಸ್ವಾಮೀಜಿ


ಅವರು ಬುಧವಾರ ಇಲ್ಲಿನ ಕನಕಮ್ಮಾಳ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ರಕ್ತದಾನ ಶಿಬಿರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ದಿನದಲ್ಲಿ ಹಣ, ಆಸ್ತಿ, ಸಂಪತ್ತು ನೆಮ್ಮದಿ ನೀಡುತ್ತಿಲ್ಲ.ಆರೋಗ್ಯ ಇದ್ದರೆ ಎಲ್ಲವೂ ಇದ್ದಂತೆ ಎಂಬ ಸತ್ಯ ಅರಿವಾಗುತ್ತಿದೆ. ಈ ದೃಷ್ಟಿಯಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷ ಣೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ರಕ್ತದ ಕೊರತೆಯಿಂದ ಬಳಲುವ ಮತ್ತು ಸಾಯುವ ವ್ಯಕ್ತಿಗಳಿಗೆ ರಕ್ತದಾನ ಜೀವ ದಾನ ಎಂಬ ಸತ್ಯ ಎಲ್ಲರೂ ಅರಿಯಬೇಕು ಎಂದರು.

ಶಿವಮೊಗ್ಗದ ರೋಟರಿ ರೆಡ್‌ಕ್ರಾಸ್‌ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಎನ್‌.ಅನಿಲ್‌ ಕುಮಾರ್‌ ರಕ್ತದಾನದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದರು. ಆನಂದಪುರಂ ಸಮುದಾಯ ಆರೋಗ್ಯ ಕೇಂದ್ರದ ಡಾ. ಶ್ರೀಕಾಂತ್‌, ತಾವೇ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು, ಅಧ್ಯಕ್ಷ ಡಾ. ಎಚ್‌.ಎಂ.ಶಿವಕುಮಾರ್‌, ಡಾ. ಬಿ.ಜಿ .ಸಂಗಮ್‌, ಡಾ.ಪ್ರಕಾಶ ಬೋಂಸ್ಲೆ , ಮಲೆನಾಡು ಸೋಲ್ಜರ್ಸ್‌ ಕೋಚಿಂಗ್‌ ಸೆಂಟರ್‌ ಸಂಚಾಲಕ ಕಿಶೋರಕುಮಾರ ಭೈರಾಪುರ, ಕರ್ನಾಟಕ ಆಟೋ ಸಂಘ, ಆರ್ಮಿ ಕ್ಲಬ್‌, ಸುಲ್ತಾನ್‌ ಟ್ರಸ್ಟ್‌ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ