ಆ್ಯಪ್ನಗರ

19ರಂದು ಬೃಹತ್‌ ರಕ್ತದಾನ ಶಿಬಿರ

ಎಲ್ಲ ವಯೋಮಾನದ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನದಿಂದ ಆರೋಗ್ಯದ ಜತೆಗೆ ಪರರಿಗೂ ಉಪಯೋಗವಾಗಲಿದೆ ಎಂದು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ಮತು ಆಸ್ಪತ್ರೆಯ ಸೂಪರಿಂಡೆಂಟ್‌ ಡಾ.ಬಿ.ಶ್ರೀನಿವಾಸ್‌ ಹೇಳಿದರು.

Vijaya Karnataka 17 Jan 2019, 5:00 am
ಭದ್ರಾವತಿ: ಎಲ್ಲ ವಯೋಮಾನದ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನದಿಂದ ಆರೋಗ್ಯದ ಜತೆಗೆ ಪರರಿಗೂ ಉಪಯೋಗವಾಗಲಿದೆ ಎಂದು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜು ಮತು ಆಸ್ಪತ್ರೆಯ ಸೂಪರಿಂಡೆಂಟ್‌ ಡಾ.ಬಿ.ಶ್ರೀನಿವಾಸ್‌ ಹೇಳಿದರು.
Vijaya Karnataka Web blood donation camp on 19th
19ರಂದು ಬೃಹತ್‌ ರಕ್ತದಾನ ಶಿಬಿರ


ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನ್ಯೂಟೌನ್‌ ಮೇರಿ ಇಮ್ಮಾಕ್ಯುಲೇಟ್‌ ಚರ್ಚ್‌ ಸಹಯೋಗದಲ್ಲಿ ಜ.19ರಂದು ಚರ್ಚ್‌ ಆವರಣದಲ್ಲಿ ನುರಿತ ವೈದ್ಯರ ತಂಡದಿಂದ ಬೃಹತ್‌ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.

ಸುಬ್ಬಯ್ಯ ಕಾಲೇಜು ಆಸ್ಪತ್ರೆಯಲ್ಲಿ 24 ಗಂಟೆಗಳ ಸೇವೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕ, ಸಿಟಿ ಸ್ಕ್ಯಾ‌ನ್‌, ಬ್ಲಡ್‌ಬ್ಯಾಂಕ್‌ ಸೇರಿದಂತೆ ಎಲ್ಲ ಸೌಲಭ್ಯ ಇದೆ. ಬಿಎಸ್‌ಎನ್‌ಎಲ್‌, ಸ್ಟಾರ್‌ ಹೆಲ್ತ್‌ ಇನ್ಷುರೆನ್ಸ್‌, ಇಎಸ್‌ಐ, ಸಂಪೂರ್ಣ ಸುರಕ್ಷ ಯೋಜನೆ, ಆರೋಗ್ಯ ಕರ್ನಾಟಕ, ಅಯುಷ್ಮಾನ್‌ ಭಾರತ ಇತರ ಆರೋಗ್ಯ ವಿಮಾ ಸೌಲಭ್ಯ ಲಭ್ಯವಿದೆ ಎಂದರು.

ಅಂದಿನ ಶಿಬಿರದಲ್ಲಿ ಸಕ್ಕರೆ, ರಕ್ತದೊತ್ತಡ, ಹೃದ್ರೋಗ, ಸ್ತ್ರೀರೋಗ, ಕೀಲುಮೂಳೆ ಮರುಜೋಡಣೆ, ಕಿವಿ, ಮೂಗು, ಗಂಟಲು, ಮಕ್ಕಳು, ಕಣ್ಣಿನ ಶಸ್ತ್ರ ಚಿಕಿತ್ಸೆ, ನರರೋಗ ಮುಂತಾದ ಕಾಯಿಲೆಗಳಿಗೆ ಅನುಭವಿ ವೈದ್ಯರಿಂದ ತಪಾಸಣೆ ಮಾಡಲಾಗುವುದು. ರಕ್ತದಾನಿಗೆ ಸುಬ್ಬಯ್ಯ ಆರೋಗ್ಯ ಕಾರ್ಡ್‌ ನೀಡಲಾಗುವುದು. ಈ ಕಾರ್ಡಿನಿಂದ ಕುಟುಂಬದ ಎಲ್ಲ ಸದಸ್ಯರು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ಮೇರಿ ಇಮ್ಯಾಕ್ಯುಲೇಟ್‌ ಚರ್ಚಿನ ಧರ್ಮಗುರು ವಿಲಿಯಂ ವಿನ್ನಿಫ್ರೆಡ್‌ ಮಾತನಾಡಿ, ವಿಐಎಸ್‌ಎಲ್‌ ಭದ್ರತಾ ಅಧಿಕಾರಿ ಶೇಕಾವತ್‌ ಕಾರ್ಯಕ್ರಮ ಉದ್ಘಾಟಿಸುವರು. ಪೊಲೀಸ್‌ ಇಲಾಖೆಯ ಉಮೇಶ್‌ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡುವರು. ಬೆಳಗ್ಗೆ 9ರಿಂದ ಸಂಜೆ 3ರವರೆಗೂ ಶಿಬಿರ ನಡೆಯಲಿದೆ. ಆಸಕ್ತರು ರಕ್ತದಾನ ಮಾಡಬಹುದು ಎಂದು ಮನವಿ ಮಾಡಿದರು. ಪಾಲನ ಪರಿಷತ್‌ ಕಾರ್ಯದರ್ಶಿ ಅಂತೋಣಿ ವಿಲ್ಸನ್‌, ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ನಿರಂಜನ ಮೂರ್ತಿ, ಆರ್‌.ಎಸ್‌.ಪೀಟರ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ