ಆ್ಯಪ್ನಗರ

ಮದುಮಗಳ ಮೇಲೆ ಕತ್ತಿಯಿಂದ ಹಲ್ಲೆ

ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಪ್ಟೆಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮದುವೆಯ ಮಂಟಪದಲ್ಲಿ ವಧು ಮತ್ತು ಆಕೆಯ ಸೋದರ ಮಾವನ ಮೇಲೆ ಯುವಕನೊಬ್ಬ ಕತ್ತಿಯಿಂದ ಹಲ್ಲೆ ಮಾಡಿದ ದಾರುಣ ಘಟನೆ ನಡೆದಿದೆ.

Vijaya Karnataka 3 Apr 2018, 5:00 am
ಸಾಗರ: ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಪ್ಟೆಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮದುವೆಯ ಮಂಟಪದಲ್ಲಿ ವಧು ಮತ್ತು ಆಕೆಯ ಸೋದರ ಮಾವನ ಮೇಲೆ ಯುವಕನೊಬ್ಬ ಕತ್ತಿಯಿಂದ ಹಲ್ಲೆ ಮಾಡಿದ ದಾರುಣ ಘಟನೆ ನಡೆದಿದೆ.
Vijaya Karnataka Web bride attacked by the sword
ಮದುಮಗಳ ಮೇಲೆ ಕತ್ತಿಯಿಂದ ಹಲ್ಲೆ


ಕಣಕಿ ಸಮೀಪದ ಕಾಪ್ಟೆಮನೆಯಲ್ಲಿ ರೇಖಾ, ಬಸವರಾಜ ಗೌಡ ಅವರ ಪ್ರಥಮ ಪುತ್ರ ಭರತ್‌ ಹಾಗೂ ಹೊಸನಗರ ತಾಲೂಕಿನ ಬಸವನಗುಂಡಿಯ ಪಾರ್ವತಮ್ಮ, ಕುಮಾರಸ್ವಾಮಿ ದಂಪತಿ ಪುತ್ರಿ ಗೀತಾ ಅವರ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ವರನ ಮನೆಯಲ್ಲಿ ಆಯೋಜನೆಗೊಂಡಿದ್ದ ಮದುವೆಗೆ ಬಂದಿದ್ದ ಶಿವಮೊಗ್ಗ ಹೊಸಮನೆ ಬಡಾವಣೆ ವಾಸಿ ನಂದನ್‌ ಎಂಬಾತ ಏಕಾಏಕಿ ಮದುವೆ ಮಂಟಪಕ್ಕೆ ನುಗ್ಗಿ, ಕೃಷಿ ಕೆಲಸಕ್ಕೆ ಬಳಸುವ ಕತ್ತಿಯಿಂದ ವಧು ಗೀತಾ ಅವರ ಕುತ್ತಿಗೆಯ ಎಡ ಭಾಗಕ್ಕೆ ಹೊಡೆದಿದ್ದಾನೆ. ಪರಿಣಾಮ ಯುವತಿ ಸ್ಥಳದಲ್ಲಿಯೆ ಕುಸಿದು ಬಿದ್ದಿದ್ದಾಳೆ. ಇದನ್ನು ತಪ್ಪಿಸಲು ಯತ್ನಿಸಿದ ಯುವತಿಯ ಸೋದರ ಮಾವ ಗಂಗಾಧರ ಎಂಬುವವರ ತಲೆಗೆ ಆರೋಪಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಗಂಭೀರವಾದ ಪೆಟ್ಟು ಬಿದ್ದಿದೆ.

ಆರೋಪಿ ನಂದನ್‌ ಶಿವಮೊಗ್ಗದಲ್ಲಿ ಆರ್‌ಟಿಒ ಇಲಾಖೆ ಕಚೇರಿಯಲ್ಲಿ ಬ್ರೋಕರ್‌ ಕೆಲಸ ಮಾಡುತ್ತಿದ್ದನು. ಕಚೇರಿ ಸಮೀಪದ ಹೊಟೇಲ್‌ನಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದ ಗೀತಾ ಅವರ ಪರಿಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ. ಗೀತಾ ಅವರು ತನ್ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗುತ್ತಿರುವುದಕ್ಕೆ ಹತಾಶೆಗೊಂಡು ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಮದುವೆಯ ಕ್ಷ ಣದ ವಿಡಿಯೊವನ್ನು ತನ್ನ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದ ನಂದನ್‌, ವಧೂವರರು ಸಪ್ತಪದಿ ತುಳಿಯುವ ಸಂದರ್ಭ ಏಕಾಏಕಿ ನುಗ್ಗಿ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ.

ತಕ್ಷ ಣ ಗೀತಾ ಮತ್ತು ಗಂಗಾಧರ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನಂದನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗ್ಗೆ 9.10ರಿಂದ 9.55ರ ವೇಳೆಗೆ ಈ ಮದುವೆ ನಡೆಯುವುದಿತ್ತು. ನಂತರ 10.15ರಿಂದ 10.45ರ ನಡುವಿನ ಮತ್ತೊಂದು ಮುಹೂರ್ತದಲ್ಲಿ ಭರತ್‌ ಅವರ ಕಿರಿಯ ಸೋದರ ಬೆನಕೇಶ್‌ ಅವರ ವಿವಾಹ ಸಮಾರಂಭ ನಿಗದಿಯಾಗಿತ್ತು. ಹಲ್ಲೆ ಪ್ರಕರಣದಿಂದಾಗಿ ಮದುವೆ ಮನೆಯಲ್ಲಿ ಆಘಾತಕರ ಆವರಣ ನಿರ್ಮಾಣವಾಗಿದ್ದು, ಎರಡೂ ಮದುವೆಗಳು ತಾತ್ಕಾಲಿಕ ನಿಲುಗಡೆಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ