ಆ್ಯಪ್ನಗರ

ಬನ್ನಿ ಮಹಾಂಕಾಳಿ ದೇವಿ ಜಾತ್ರಾ ಸಂಭ್ರಮ

ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀಬನ್ನಿ ಮಹಾಂಕಾಳಿ ದೇವಿಯ ಮಹಾ ರಥೋತ್ಸವವು ಜನಪದ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಗುರುವಾರ ನೆರವೇರಿತು.

Vijaya Karnataka 29 Mar 2019, 5:00 am
ಸೊರಬ: ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀಬನ್ನಿ ಮಹಾಂಕಾಳಿ ದೇವಿಯ ಮಹಾ ರಥೋತ್ಸವವು ಜನಪದ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಗುರುವಾರ ನೆರವೇರಿತು.
Vijaya Karnataka Web SMR-28SRBP1


ಶ್ರೀಕಾಳಿಕಾಂಬಾ ಸೇವಾ ಸಮಿತಿಯಿಂದ ಹುಲ್ತಿಕೊಪ್ಪ, ಕಡೇಗದ್ದೆ, ಕೋಣನಮನೆ ಗ್ರಾಮಸ್ಥರು ಪ್ರತೀ ವರ್ಷದ ಪದ್ದತಿಯಂತೆ ಈ ವರ್ಷವೂ ಜಾತ್ರೆ ಹಮ್ಮಿಕೊಂಡಿದ್ದರು.

ರಥೋತ್ಸವ ನಿಮಿತ್ತ ದೇವರಿಗೆ ಪಂಚಾಮೃತ ಅಭಿಷೇಕ, ರಥಪೂಜೆ, ರಥಬಲಿ, ರಥಾರೋಹಣ, ಹಣ್ಣು-ಕಾಯಿ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಭಕ್ತರು ಚೌಲ, ಬೇವು ಉಡಿಸುವ ಹರಕೆ ಒಪ್ಪಿಸಿದರು. ನೆರೆದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಜಾತ್ರೆ ನಿಮಿತ್ತ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಾ.29ರ ಸಂಜೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ