ಆ್ಯಪ್ನಗರ

‘ಶಿಬಿರದಿಂದ ಮಕ್ಕಳ ಮನೋ ವಿಕಾಸ’

ಮುಕ್ತವಾಗಿ ಕಲಿಯುವ ಮಕ್ಕಳ ಮನಸನ್ನು ಕಟ್ಟಿಹಾಕುವ ಮನೋಭಾವ ಸಲ್ಲದು ಎಂದು ಕಲಾ ಪೋಷಕ ಸುರೇಶ್‌ ಹೇಳಿದರು.

Vijaya Karnataka 16 Apr 2018, 5:00 am
ಸಾಗರ: ಮುಕ್ತವಾಗಿ ಕಲಿಯುವ ಮಕ್ಕಳ ಮನಸನ್ನು ಕಟ್ಟಿಹಾಕುವ ಮನೋಭಾವ ಸಲ್ಲದು ಎಂದು ಕಲಾ ಪೋಷಕ ಸುರೇಶ್‌ ಹೇಳಿದರು.
Vijaya Karnataka Web camp support to children mental capacity
‘ಶಿಬಿರದಿಂದ ಮಕ್ಕಳ ಮನೋ ವಿಕಾಸ’


ಇಲ್ಲಿನ ಗಾಂಧೀನಗರದ ಸಂಗೊಳ್ಳಿ ರಾಯಣ್ಣ ಮೈದಾನದ ಆಲದ ಮರದ ಕೆಳಗೆ ಸೆಂಟ್ರಲ್‌ ಸ್ಟೇಜ್‌ ಸಂಸ್ಥೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪÜದಲ್ಲಿ ಭಾನುವಾರ ಅವರು ಮಾತನಾಡಿದರು.

ಮಕ್ಕಳ ಆಸಕ್ತಿಗಳ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಪೂರಕ. ಶಿಬಿರ ಎಲ್ಲವನ್ನೂ ಕಲಿಸುವುದಿಲ್ಲ. ಆದರೆ ಕಲಿಕೆಗೆ ದಾರಿ ತೋರಿಸುತ್ತದೆ. ಚಟುವಟಿಕೆಗಳ ಮೂಲಕ ಕಲಿತ ಸಂಗತಿಗಳು ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತವೆ ಎಂದರು.

ಸೆಂಟರ್‌ ಸ್ಟೇಜ್‌ ಸಂಸ್ಥೆ ಸಂಚಾಲಕ ಡಿ.ಆರ್‌. ಸಂತೋಷ್‌ ಮಾತನಾಡಿ, ಶಿಕ್ಷ ಣ ಎಂಬುದು ಕಲಿಕೆಗೆ ದಾರಿಯಾಗದೆ ವ್ಯಾಪಾರವಾಗಿ ಪರಿಣಮಿಸುತ್ತಿದೆ. ಮಕ್ಕಳ ಮನೋವಿಕಾಸಕ್ಕೆ ಶಿಬಿರಗಳು ಪೂರಕ . ಸಾಕಷ್ಟು ಹಣ ಖರ್ಚು ಮಾಡಿ ಕಲಿಸುವ ಯತ್ನಗಳು ಸಹ ಫಲಪ್ರದವಾಗುತ್ತಿಲ್ಲ. ಈ ನಿಟ್ಟಿನಲ್ಲಿ 2ವರ್ಷಗಳಿಂದ ಚಿಲಿಪಿಲಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಶಿಬಿರದ ನಿರ್ದೇಶಕಿ ಮಂಜುಳಾ ನಾರಾಯಣ್‌ ಮಾತನಾಡಿ, ಹತ್ತು ದಿನದ ಶಿಬಿರದಲ್ಲಿ ಕರಕುಶಲಕಲೆ, ಕಸೂತಿಕಲೆ, ಹಾಡು, ನಾಟಕ, ನೃತ್ಯ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸಲಾಗಿದೆ. ವಿವಿಧ ಚಟುವಟಿಕೆಯಲ್ಲಿ ತೊಡಗುವ ಮೂಲಕ ಮಕ್ಕಳು ತಮ್ಮ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ ಎಂದರು.

ಕೋಟಗಾನಹಳ್ಳಿ ರಾಮಯ್ಯ ರಚಿಸಿರುವ 'ನಾಯಿತಿಪ್ಪ' ಹಾಸ್ಯಮಯ ನಾಟಕವನ್ನು ಮಕ್ಕಳು ಆಲದ ಮರದ ನೆರಳಿನಲ್ಲಿ ಅಭಿನಯಿಸಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗಾಯಕಿ ಸಹನಾ ಜಿ. ಭಟ್‌, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ನಾಗೇಂದ್ರ, ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ವೆಂಕಟೇಶ್‌, ಮೇಜರ್‌ ನಾಗರಾಜ್‌, ಸರಸ್ವತಿ ನಾಗರಾಜ, ಡಿ.ಗಣಪತಿಯಪ್ಪ, ಸುಬ್ರಹ್ಮಣ್ಯ, ಸಮೀಕ್ಷಾ, ಪ್ರತೀಕ್ಷಾ, ಲಾವಣ್ಯ, ಪರಿಣ್‌, ರಾಘವ್‌ ಇತರರು ಇದ್ದರು. ಸಮರ್ಥ ಪ್ರಾರ್ಥಿಸಿ, ಶ್ರಾವ್ಯ ಲಕ್ಷ್ಮೀನಾರಾಯಣ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ