ಆ್ಯಪ್ನಗರ

ರೈಲು ಕಾಮಗಾರಿಗಾಗಿ ವಾಹನಗಳ ಮಾರ್ಗ ಬದಲಾವಣೆ

ಸಾಗರ ತಾಲೂಕಿನಲ್ಲಿಹಾದು ಹೋಗಿರುವ ರೈಲ್ವೇ ಮಾರ್ಗದ ತಾಂತ್ರಿಕ ಪರಿಶೀಲನೆ ಕಾರ್ಯ ನ.6ರವರೆಗೆ ವಿವಿಧ ಲೆವೆಲ್‌ ಕ್ರಾಸ್‌ಗಳಲ್ಲಿನಡೆಯಲಿರುವುದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Vijaya Karnataka 1 Nov 2019, 5:00 am
ಶಿವಮೊಗ್ಗ: ಸಾಗರ ತಾಲೂಕಿನಲ್ಲಿಹಾದು ಹೋಗಿರುವ ರೈಲ್ವೇ ಮಾರ್ಗದ ತಾಂತ್ರಿಕ ಪರಿಶೀಲನೆ ಕಾರ್ಯ ನ.6ರವರೆಗೆ ವಿವಿಧ ಲೆವೆಲ್‌ ಕ್ರಾಸ್‌ಗಳಲ್ಲಿನಡೆಯಲಿರುವುದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Vijaya Karnataka Web change of vehicle route for railways
ರೈಲು ಕಾಮಗಾರಿಗಾಗಿ ವಾಹನಗಳ ಮಾರ್ಗ ಬದಲಾವಣೆ


ನ.1ರಂದು ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ಬಾಳೆಗುಂಡಿ ರಸ್ತೆಯಲ್ಲಿಹಾದು ಹೋಗಿರುವ ಲೆವೆಲ್‌ ಕ್ರಾಸ್‌ ಸಂಖ್ಯೆ 121ರ ಪರಿಶೀಲನೆ ಕಾರ್ಯ ನಡೆಯಲಿದೆ. ವಾಹನ ಸವಾರರು ಮಾರ್ಗ-1ರ ಉಳ್ಳೂರು-ಕಾಸ್ಪಾಡಿ- ಅಡ್ಡೇರಿ-ಬಾಳೆಗುಂಡಿ-ನೀಚಡಿ-ತ್ಯಾಗರ್ತಿ-ದೊಡ್ಡಬೈಲ್‌/ಬಾಳೆಗುಂಡಿ, ಮಾರ್ಗ-2ರ ತ್ಯಾಗರ್ತಿ ಕ್ರಾಸ್‌-ಎಲ್‌.ಸಿ 126-ಬೊಮಟ್ಟಿ- ತ್ಯಾಗರ್ತಿ-ಬಾಳೆಗುಂಡಿ ಪರ್ಯಾಯ ಮಾರ್ಗವಾಗಿ ಸಾಗಬೇಕು.

ನ.2ರಂದು ಬೆಳಗ್ಗೆ 8ರಿಂದ ಸಂಜೆ 6.30ರ ವರೆಗೆ ತ್ಯಾಗರ್ತಿ ರಸ್ತೆಯಲ್ಲಿಹಾದು ಹೋಗಿರುವ ಎಲ್‌.ಸಿ 126 ಮಾರ್ಗದ ಪರಿಶೀಲನೆ ನಡೆಯಲಿದ್ದು ವಾಹನ ಸವಾರರು ಮಾರ್ಗ-1 (ಸೊರಬ ರಸ್ತೆ ಮೂಲಕ) ಸಾಗರ-ಕಲಸೆ-ಬೊಮ್ಮತ್ತಿ-ತ್ಯಾಗರ್ತಿ, ಮಾರ್ಗ-2, ರಾಷ್ಟ್ರೀಯ ಹೆದ್ದಾರಿ-206ರ ಮೂಲಕ ಉಳ್ಳೂರು-ಕಾಸ್ಪಡಿ-ಅಡ್ಡೇರಿ-ಬಾಳೆಗುಂಡಿ-ನೀಚಡಿ-ತ್ಯಾಗರ್ತಿ, ಮಾರ್ಗ-3ರ, ಬಳಸಗೋಡು-ಮಂಚಾಲೆ-ಬೊಮ್ಮಟ್ಟಿ-ತ್ಯಾಗರ್ತಿ ಮಾರ್ಗವಾಗಿ ಸಂಚರಿಸಬೇಕು.

ನ.3ರಂದು ರಾತ್ರಿ 8ರಿಂದ ನ.4ರ ಬೆಳಗ್ಗೆ 7ರ ವರೆಗೆ ಬೈಪಾಸ್‌ ರಸ್ತೆಯಲ್ಲಿಹಾದು ಹೋಗಿರುವ ಎಲ್‌ಸಿ 129 ಮಾರ್ಗ-1 ಪರಿಶೀಲನೆ ನಡೆಯಲಿದೆ. ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ-2016ರ ಮೂಲಕ ಸಿಗಂದೂರು ಕ್ರಾಸ್‌-ಸೊರಬ ರಸ್ತೆ, ಮಾರ್ಗ-2ರ ಬೈಪಾಸ್‌-ಸೊರಬ ರಸ್ತೆ-ಎಲ್‌.ಸಿ. 130ಬಿ ಮೂಲಕ ಸಂಚರಿಸಬೇಕು. ನ.5ರಂದು ರಾತ್ರಿ 8ರಿಂದ ನ.6 ರ ಬೆಳಗ್ಗೆ 7ರವರೆಗೆ ಸೊರಬ ರಸ್ತೆಯಲ್ಲಿಹಾದು ಹೋಗಿರುವ ಎಲ್‌ಸಿ-130ಬಿ ಮಾರ್ಗ-1ರ ಪರಿಶೀಲನೆ ನಡೆಯಲಿದೆ. ವಾಹನ ಸವಾರರು ಬೈಪಾಸ್‌-ಕೆಳದಿ ಚೆನ್ನಮ್ಮ ಸರ್ಕಲ್‌-ಅಣಲೆಕೊಪ್ಪ-ಆರ್‌.ಪಿ.ರಸ್ತೆ, ಮಾರ್ಗ-2ರ ವೆಂಕಟರಮಣ ದೇವಸ್ಥಾನದ ರಸ್ತೆ-ಎಲ್‌.ಸಿ.132-ಚೆನ್ನಮ್ಮ ವೃತ್ತ-ಸೊರಬ ರಸ್ತೆ ಮಾರ್ಗವಾಗಿ ಸಂಚರಿಸಬೇಕು.

ಈ ತಾತ್ಕಾಲಿಕ ಮಾರ್ಗ ಬದಲಾವಣೆಗೆ ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳೊಡನೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ