ಆ್ಯಪ್ನಗರ

ಹಕ್ಕು ದಮನದಿಂದ ಕಾರ್ಮಿಕರಿಗೆ ಸಂಕಷ್ಟ

ಸಾರಿಗೆ ನಿಗಮಗಳು ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧವಾಗಿ ನೀಡಬೇಕಾದ ಹಕ್ಕುಗಳನ್ನು ದಮನಿಸಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಸಾರಿಗೆ ನೌಕರರ ಫೆಡರೇಷನ್‌ ಪ್ರಧಾನ ಕಾರ‍್ಯದರ್ಶಿ ಎಚ್‌.ಎಸ್‌. ಮಂಜುನಾಥ್‌ ಹೇಳಿದರು.

Vijaya Karnataka 27 Jun 2019, 5:00 am
ಶಿವಮೊಗ್ಗ: ಸಾರಿಗೆ ನಿಗಮಗಳು ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧವಾಗಿ ನೀಡಬೇಕಾದ ಹಕ್ಕುಗಳನ್ನು ದಮನಿಸಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಸಾರಿಗೆ ನೌಕರರ ಫೆಡರೇಷನ್‌ ಪ್ರಧಾನ ಕಾರ‍್ಯದರ್ಶಿ ಎಚ್‌.ಎಸ್‌. ಮಂಜುನಾಥ್‌ ಹೇಳಿದರು.
Vijaya Karnataka Web SMR-25GANESH3


ನಗರದ ಕರ್ನಾಟಕ ಸಂಘಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಮಂಗಳವಾರ ಆಯೋಜಿಸಿದ್ದÜ ಶಿವಮೊಗ್ಗ ವಿಭಾಗದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

1992ರ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆದಿಲ್ಲ. ಅನೇಕ ಸಾರಿಗೆ ನೌಕರರು ಆಡಳಿತ ಶಾಹಿ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ದುಸ್ಥಿತಿ ಬಗ್ಗೆ ಸಾರಿಗೆ ನೌಕರರು ಸರಕಾರದ ಗಮನಕ್ಕೆ ತಂದಿದ್ದರೂ ಅವರಿಗೆ ನೀಡಬೇಕಾದ ಕಾನೂನುಬದ್ಧ ಸೌಲಭ್ಯ ಇನ್ನೂ ನೀಡಿಲ್ಲ ಎಂದರು.

ಸಿಐಟಿಯು ಮುಖಂಡ ಶಿವಶಂಕರ್‌ ಮಾತನಾಡಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒಗ್ಗಟ್ಟಾಗಬೇಕು. ಸರಕಾರದ ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ ಹಣ ಒದಗಿಸಬೇಕು. ಅನಧಿಧಿಕೃತ ಖಾಸಗಿ ವಾಹನಗಳನ್ನು ತಡೆಗಟ್ಟಿ ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಬೇಕು. ಓಟಿ ಕಡಿತ ಮಾಡುವುದನ್ನು ವಿರೋಧಿಧಿಸಬೇಕು. ಕ್ಯಾಂಟಿನ್‌ ಹಾಗೂ ವಿಶ್ರಾಂತಿ ಗೃಹಗಳ ಸೌಲಭ್ಯ ಹಾಗೂ ಜೀವವಿಮೆ ಸೌಲಭ್ಯವನ್ನು ಎಲ್ಲ ಸಾರಿಗೆ ನೌಕರರಿಗೆ ನೀಡಬೇಕು. ಇಎಸ್‌ಐ ಸೌಲಭ್ಯ ಒದಗಿಸಬೇಕು ಹಾಗೂ ಮಾನ್ಯತೆಗಾಗಿ ಕಾರ್ಮಿಕ ಸಂಘದ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು. ಡಾ.ಪ್ರಕಾಶ್‌, ರಾಜು ಚಿನ್ನಸ್ವಾಮಿ, ಹರೀಶ್‌, ಪ್ರಭಾಕರ್‌, ಕರಿಬಸಪ್ಪ, ಎಸ್‌.ರವಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ