ಆ್ಯಪ್ನಗರ

ಸಿಎಂ ಗ್ರಾಮ ವಾಸ್ತವ್ಯ ಬೂಟಾಟಿಕೆ: ಹಾಲಪ್ಪ ಟೀಕೆ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಬೂಟಾಟಿಕೆಯಾಗಿದೆ. ತಿಂಗಳು ಪೂರ್ತಿ ಎರಡು ಲಕ್ಷ ರೂ. ಬಾಡಿಗೆ ನೀಡಿ ವೆಸ್ಟ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡು, ಒಂದು ದಿನ ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಶಾಲೆಯೊಂದರಲ್ಲಿ ಚಾಪೆ ಮೇಲೆ ಮಲಗಿ ಪ್ರಚಾರ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

Vijaya Karnataka 3 Jul 2019, 5:00 am
ಸಾಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಬೂಟಾಟಿಕೆಯಾಗಿದೆ. ತಿಂಗಳು ಪೂರ್ತಿ ಎರಡು ಲಕ್ಷ ರೂ. ಬಾಡಿಗೆ ನೀಡಿ ವೆಸ್ಟ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡು, ಒಂದು ದಿನ ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಶಾಲೆಯೊಂದರಲ್ಲಿ ಚಾಪೆ ಮೇಲೆ ಮಲಗಿ ಪ್ರಚಾರ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.
Vijaya Karnataka Web Halappa 1


ತಾಲೂಕಿನ ಪಡವಗೋಡಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ವಾಸ್ತವ್ಯ ಬದಲು ತಾಲೂಕು ಕಚೇರಿಗಳಲ್ಲಿ ಇರುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು. ಸಿಎಂ ಗ್ರಾಮವಾಸ್ತವ್ಯ ಮಾಡಿದ್ದರಿಂದ ಇತ್ತೀಚೆಗೆ ನಮ್ಮ ಡಿಸಿ ಸಹ ಮಾಡುತ್ತಿದ್ದಾರೆ. ಪಹಣೆಯಲ್ಲಿ ಬೆಳೆ ನಮೂದಾಗುತ್ತಿಲ್ಲ. ಸರ್ವರ್‌ ಸಮಸ್ಯೆಯಿಂದ ಪಡಿತರ ಸಿಕ್ಕುತ್ತಿಲ್ಲ. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಸರಕಾರವನ್ನು ಭದ್ರಪಡಿಸಬೇಕು. ಸರಕಾರದ ಸೌಲಭ್ಯ ಸಿಗುವಂತಾಗಬೇಕೆ ಹೊರತು ಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ್ದು, ರಾಜೀನಾಮೆ ಪರ್ವ ಪ್ರಾರಂಭವಾಗಿದೆ. ಖಾಸಗಿಯಾಗಿ ಅನೇಕ ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ಗೊಂದಲಮಯ ವಾತಾವರಣ ಇರುವ ಬಗ್ಗೆ ಆಯಾ ಪಕ್ಷ ದ ಪ್ರಮುಖರೇ ಹೇಳುತ್ತಿದ್ದಾರೆ. ರಾಜೀನಾಮೆ ಪರ್ವ ಮುಂದುವರಿಯುತ್ತವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ