ಆ್ಯಪ್ನಗರ

ನಾಲ್ಕೇ ದಿನದಲ್ಲಿ ತಾನಾಗಿಯೇ ಸಮ್ಮಿಶ್ರ ಸರಕಾರ ಪತನ: ಈಶ್ವರಪ್ಪ ಭವಿಷ್ಯ

ಮೈತ್ರಿ ಸರಕಾರವನ್ನು ಬಿಜೆಪಿಯವರೇನೂ ಬೀಳಿಸುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರೇ ಈ ಕೆಲಸ ಮಾಡುತ್ತಾರೆ ಎಂದವರು ಹೇಳಿದ್ದಾರೆ.

Vijaya Karnataka Web 10 Feb 2019, 4:18 pm
ಶಿವಮೊಗ್ಗ: ನಾಲ್ಕು ದಿನ ಕಾದು ನೋಡಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರ ಬೀಳುತ್ತದೆ ಎಂದು ಹೇಳಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಬಿಜೆಪಿಯ 104 ಶಾಸಕರು ಹುಲಿ ಮರಿಗಳಂತಿದ್ದಾರೆ. ನಮ್ಮನ್ನು ಯಾರು ಮುಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.
Vijaya Karnataka Web k s e


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರವನ್ನು ಬಿಜೆಪಿಯವರೇನೂ ಬೀಳಿಸುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರೇ ಈ ಕೆಲಸ ಮಾಡುತ್ತಾರೆ ಎಂದವರು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಅವರ ಪಕ್ಷದ ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ, ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಒಂದು ಸಲ ಆಡಿಯೋ ಬಿಎಸ್ವೈ ಅವರದ್ದಲ್ಲ ಎಂದಾದರೆ ರಾಜೀನಾಮೆ ಕೊಡುತ್ತೇನೆ ಎನ್ನುತ್ತಾರೆ. ಇನ್ನೊಂದೆಡೆ ಅದು ಬಿಎಸ್'ವೈರವರ ಆಡಿಯೋ ಅಂತ ನಾನು ಹೇಳಿಲ್ಲವೆಂಬ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಸಿಎಂರನ್ನು ರಾಜ್ಯದ ಜನ ಇದುವರೆಗೆ ನೋಡಿಲ್ಲ ಎಂದರು

ರಾಜ್ಯದ ಜನ ಕಾಂಗ್ರೆಸ್ ಅವರನ್ನು ನಂಬಲ್ಲ ಅಂತ ದಿಲ್ಲಿಗೆ ಹೋಗಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡುತ್ತಾರೆ. ಇತ್ತ ಕಾಂಗ್ರೆಸ್'ನ ಬಸವರಾಜ ರಾಯರೆಡ್ಡಿ, ಸೋಮಶೇಖರ್ ಕಳೆದ 8 ತಿಂಗಳಿಂದ ಏನೂ ಕೆಲಸ ಆಗಿಲ್ಲ ಅಂತ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ