ಆ್ಯಪ್ನಗರ

ರಂಗಭೂಮಿ ಉಳಿವಿಗೆ ಮುಂದಾಗಿ

ಯಾವುದೇ ಮಾಯಾಲೋಕ ಸೃಷ್ಟಿಸದೆ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷ ಕರ ಮನಗೆಲ್ಲುವ ರಂಗಭೂಮಿ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ, ಅದನ್ನು ಉಳಿಸಿ ಬೆಳೆಸುವುದಕ್ಕೆ ಪ್ರೇಕ್ಷ ಕರು ಮುಂದಾಗಬೇಕೆಂದು ಮುರುಘರಾಜೇಂದ್ರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಹೇಳಿದರು.

Vijaya Karnataka 30 Apr 2019, 5:00 am
ಶಿಕಾರಿಪುರ: ಯಾವುದೇ ಮಾಯಾಲೋಕ ಸೃಷ್ಟಿಸದೆ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷ ಕರ ಮನಗೆಲ್ಲುವ ರಂಗಭೂಮಿ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ, ಅದನ್ನು ಉಳಿಸಿ ಬೆಳೆಸುವುದಕ್ಕೆ ಪ್ರೇಕ್ಷ ಕರು ಮುಂದಾಗಬೇಕೆಂದು ಮುರುಘರಾಜೇಂದ್ರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ ಹೇಳಿದರು.
Vijaya Karnataka Web SMR-28skp2


ಪಟ್ಟಣದಲ್ಲಿ ಶನಿವಾರ ಗುಬ್ಬಿ ಬಿಎಸ್‌ಆರ್‌ ನಾಟಕ ಸಂಘ ಆಯೋಜಿಸಿದ್ದ ಕುಂಟ ಕೋಣ, ಮೂಕ ಜಾಣ ನಾಟಕ ಪ್ರದರ್ಶನ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕತೆ, ಜಾಗತೀಕರಣ ಪರಿಣಾಮ ಜಗತ್ತಿನಲ್ಲಿ ರಂಗಭೂಮಿ ನೇಪತ್ಯಕ್ಕೆ ಸರಿಯುತ್ತಿದೆ. ಟಿವಿ, ಮೊಬೈಲ್‌ ಮನರಂಜನೆ ಪ್ರಕಾರವನ್ನೆ ಬದಲಿಸಿದೆ. ಯಾವುದು ಅಸಾಧ್ಯವೋ ಅದು ಚಲನಚಿತ್ರದಲ್ಲಿ ಸಾಧ್ಯವಾಗುತ್ತದೆ. ರಂಗಭೂಮಿಯಲ್ಲಿ ಸಾಧನೆ ಮೂಲಕ ಎಲ್ಲವೂ ಸಾಧ್ಯ. ಅಂತಹ ಕಲೆ ಅಳಿವಿನಂಚಿಗೆ ತಲುಪುತ್ತಿರುವುದು ಕಳವಳಕಾರಿ ಎಂದರು.

ಗುಡಿ ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಇಕ್ಬಾಲ್‌ ಅಹಮದ್‌ ಮಾತನಾಡಿ, ನಾಟಕದಲ್ಲಿ ಕಲಾವಿದರು ತೆರೆಯ ಮೇಲೆ ನಮ್ಮನ್ನೆಲ್ಲ ನಗಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಅವರ ಬದುಕು ಕಷ್ಟಕರವಾಗಿರುತ್ತದೆ, ಅವರ ಜೀವನ ಹಸನಾಗಿಸಲು ನಾವೆಲ್ಲರೂ ನಾಟಕ ನೋಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಎಷ್ಟೋ ನಾಟಕ ಕಂಪನಿಗಳು ಇಂದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮುಚ್ಚಿಹೋಗಿವೆ, ಸರಕಾರವೂ ರಂಗಭೂಮಿ ಉಳಿಸಿ ಬೆಳೆಸಲು ಮುಂದಾಗಬೇಕೆಂದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೀವರ್ಗಿ, ಕೃ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್‌, ಮೆಸ್ಕಾಂ ಸಹಾಯಕ ಕಾರ‍್ಯನಿರ್ವಾಹಕ ಎಂಜಿನಿಯರ್‌ ಬೆಣ್ಣೆ ಪರಶುರಾಮ್‌, ಕಾರ‍್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮಾಂತರ ಕಾರ‍್ಯದರ್ಶಿ ಕೆ.ಎಸ್‌.ಹುಚ್ರಾಯಪ್ಪ, ತಾಲೂಕು ಜನಪದ ಪರಿಷತ್‌ ಅಧ್ಯಕ್ಷ ಬಿ.ಪಾಪಯ್ಯ, ಗುಬ್ಬಿ ಬಿಎಸ್‌ಆರ್‌ ನಾಟಕ ಸಂಘದ ಮಾಲೀಕ ಪ್ರಶಾಂತ್‌, ಚಿತ್ರಮಂದಿರ ವ್ಯವಸ್ಥಾಪಕ ಬೆನಕ, ಕನ್ನಡ ಯುವಕ ಸಂಘದ ಮಾಜಿ ಅಧ್ಯಕ್ಷ ಸುರೇಶ್‌, ಕಲಾವಿದರು, ಪ್ರೇಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ