ಆ್ಯಪ್ನಗರ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲತಾಲೂಕುಗಳಿಗೂ ಭೇಟಿ ನೀಡಿ ಸ್ಥಳೀಯ ಪ್ರಮುಖರ ಜತೆಗೆ ಚರ್ಚೆ ನಡೆಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Vijaya Karnataka 24 Sep 2019, 5:00 am
ಸಾಗರ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲತಾಲೂಕುಗಳಿಗೂ ಭೇಟಿ ನೀಡಿ ಸ್ಥಳೀಯ ಪ್ರಮುಖರ ಜತೆಗೆ ಚರ್ಚೆ ನಡೆಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.
Vijaya Karnataka Web 23SGR16_46


ಇಲ್ಲಿನ ಜೋಗ ರಸ್ತೆಯಲ್ಲಿರುವ ಆಡಕೆ ವರ್ತಕ ಅಶ್ವಿನಿಕುಮಾರ್‌ ಅವರ ಸ್ವಗೃಹದಲ್ಲಿಸೋಮವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರದಿಂದ ಸಹ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬರುತ್ತಿದ್ದು, ರಾಜ್ಯವನ್ನು ಮಾದರಿಯಾಗಿ ರೂಪಿಸುವಲ್ಲಿಬಿಜೆಪಿ ಸಂಪೂರ್ಣ ಪ್ರಯತ್ನ ನಡೆಸುತ್ತದೆ ಎಂದರು.

ಮುಖ್ಯಮಂತ್ರಿಯವರು, ಸಚಿವ ಸಂಪುಟ, ಉನ್ನತ ಅಧಿಕಾರಿಗಳಿಂದ ಹಿಡಿದು ಕೊನೆ ಹಂತದ ನೌಕರರವರೆಗೂ ನೆರೆಯಿಂದ ತಮ್ಮದೆ ಕುಟುಂಬಕ್ಕೆ ಹಾನಿಯಾಗಿದೆ ಎನ್ನುವ ಭಾವನೆಯಲ್ಲಿಪರಿಹಾರ ಕಾರ್ಯ ನಡೆಸಿದ್ದಾರೆ. ನೆರೆ ಸಂದರ್ಭದಲ್ಲಿರಾಜ್ಯದ ಜನರು ಸಹ ಸ್ಪಂದಿಸಿದ್ದು, ನೆರವಿಗೆ ಕೈಜೋಡಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್‌, ಜಿಲ್ಲಾಉಸ್ತುವಾರಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಅವರನ್ನು ಅಭಿನಂದಿಸುವುದು ಕರ್ತವ್ಯ. ಶೃಂಗೇರಿ ಶಂಕರಮಠ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿಕೆ.ಎಸ್‌.ಈಶ್ವರಪ್ಪ ಅವರು ನಮ್ಮ ನೆರವಿಗೆ ನಿಂತಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಜಿಲ್ಲಾಉಸ್ತುವಾರಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಅವರ ಆಡಳಿತಾವಧಿಯಲ್ಲಿಜಿಲ್ಲೆಸಮಗ್ರ ಅಭಿವೃದ್ಧಿ ಹೊಂದುತ್ತದೆ ಎನ್ನುವ ವಿಶ್ವಾಸ ಜನರಲ್ಲಿದೆ ಎಂದರು.

ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್‌, ಜನಾರ್ದನ ಉಡುಪ, ಅರವಿಂದ ರಾಯ್ಕರ್‌, ವಿ.ಮಹೇಶ್‌, ಬಿ.ಎಚ್‌.ಲಿಂಗರಾಜ್‌, ಶಂಕರ ಅಳ್ವಿಕೋಡಿ ಅವರನ್ನು ಅಭಿನಂದಿಸಲಾಯಿತು. ಜಯಲಕ್ಷಿತ್ರ್ಮೕ ಈಶ್ವರಪ್ಪ, ರಾಜಶ್ರೀ ಅಶ್ವಿನಿಕುಮಾರ್‌, ಗಾಜನೂರು ಗಣೇಶ್‌, ಕೆ.ಎನ್‌.ಶ್ರೀಧರ್‌ ಮುಮತಾದವರಿದ್ದರು. ಎಸ್‌.ಕೆ.ಪ್ರಭಾವತಿ ಪ್ರಾರ್ಥಿಸಿದರು. ಕೆ.ಎಸ್‌.ವೆಂಕಟೇಶ್‌ ಸ್ವಾಗತಿಸಿದರು. ಆರ್‌.ಎಂ.ಬಾಪಟ್‌ ವಂದಿಸಿದರು. ಸದಾನಂದ ಶರ್ಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ