ಆ್ಯಪ್ನಗರ

ಗ್ರಾಮ ಲೆಕ್ಕಿಗನ ಮೇಲೆ ಹಲ್ಲೆಗೆ ಖಂಡನೆ

ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಲೆಕ್ಕಿಗ ಯಶವಂತ್‌ ಅವರ ಮೇಲೆ ಗ್ರಾಮ ಸಹಾಯಕ ಹಲ್ಲೆನಡೆಸಿರುವ ಪ್ರಕರಣವನ್ನು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕ ಖಂಡಿಸಿದೆ.

Vijaya Karnataka 7 Nov 2019, 5:00 am
ಹೊಸನಗರ: ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಲೆಕ್ಕಿಗ ಯಶವಂತ್‌ ಅವರ ಮೇಲೆ ಗ್ರಾಮ ಸಹಾಯಕ ಹಲ್ಲೆನಡೆಸಿರುವ ಪ್ರಕರಣವನ್ನು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕ ಖಂಡಿಸಿದೆ.
Vijaya Karnataka Web 6HOSP3_46
ನೆರಟೂರು ಗ್ರಾಮ ಲೆಕ್ಕಿಗನ ಮೇಲೆ ಹಲ್ಲೆನಡೆಸಿದ ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸನಗರ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ ಶ್ರೀಧರಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.


ಈ ಕುರಿತು ಬುಧವಾರ ತಹಸೀಲ್ದಾರ್‌ ಶ್ರೀಧರಮೂರ್ತಿ ಅವರಿಗೆ ಘಟಕದ ಸದಸ್ಯರು ಮನವಿ ಸಲ್ಲಿಸಿದರು. ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಿಗರಿಗೆ ಗ್ರಾಮ ಸಹಾಯಕ ಅವಾಚ್ಯ ಶಬ್ದದಿಂದ ನಿಂದಿಸಿ, ತೀವ್ರ ಹಲ್ಲೆನಡೆಸಿರುವುದೂ ಅಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ. ಇಂತಹ ಘಟನೆಗಳಿಂದ ಭವಿಷ್ಯದಲ್ಲಿನೌಕರರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ಬರಬಹುದು. ಆದ್ದರಿಂತ ತಪ್ಪಿತಸ್ಥ ಗ್ರಾಮ ಸಹಾಯಕ ಅವಿನಾಶ್‌ನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ಘಟಕದ ಅಧ್ಯಕ್ಷ ರೇಣುಕಯ್ಯ, ದೀಪು, ಸುರೇಶ್‌, ಕೌಶಿಕ್‌, ಮಂಜಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ