ಆ್ಯಪ್ನಗರ

ಸೃಜನಶೀಲ ಕಲೆಯಿಂದ ಆತ್ಮವಿಶ್ವಾಸ ಅಧಿಕ

ಪ್ರಾಥಮಿಕ ಶಿಕ್ಷ ಣದ ಸಂದರ್ಭ ಮಕ್ಕಳು ಸಮಯದ ಸದುಪಯೋಗದ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಿಲ್ಪಕಲಾ ಶಿಕ್ಷ ಕ ವಿಪಿನ್‌ ಬಧೂರಿಯಾ ಹೇಳಿದರು.

Vijaya Karnataka 27 Apr 2019, 5:00 am
ಸಾಗರ: ಪ್ರಾಥಮಿಕ ಶಿಕ್ಷ ಣದ ಸಂದರ್ಭ ಮಕ್ಕಳು ಸಮಯದ ಸದುಪಯೋಗದ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಿಲ್ಪಕಲಾ ಶಿಕ್ಷ ಕ ವಿಪಿನ್‌ ಬಧೂರಿಯಾ ಹೇಳಿದರು.
Vijaya Karnataka Web SMR-21sgr1


ಇಲ್ಲಿನ ವಿನೋಬಾನಗರದ ಅಬ್ಯಾಕಸ್‌ ಕೇಂದ್ರದಲ್ಲಿ ಏರ್ಪಡಿಸಿದ್ದ ಕಲಾಶಿಬಿರದ ಸಮಾರೋಪದ ಅಂಗವಾಗಿ ಇತ್ತೀಚೆಗೆ ನಡೆದ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳನ್ನು ಅಭ್ಯಾಸ ಮಾಡುವ ಮೂಲಕ ಶಾಲೆ ಕಲಿಕೆಯನ್ನು ಸುಲಭಗೊಳಿಸಿಕೊಳ್ಳಬಹುದು. ಸೃಜನಶೀಲ ಕಲೆಗಳ ಕಲಿಕೆಯಿಂದ ನಮ್ಮೊಳಗಿನ ಆತ್ಮವಿಶ್ವಾಸ ಬಲಗೊಳ್ಳುತ್ತದೆ. ಮೊಬೈಲ್‌ಫೋನ್‌ಗಳಲ್ಲಿನ ಆಟಗಳಲ್ಲಿ ಕಾಲಹರಣ ಮಾಡುತ್ತಾರೆ ಎಂದು ಆಕ್ಷೇಪಿಸುವ ಬದಲು ಆರೋಗ್ಯಕರವಾದ ಹವ್ಯಾಸಗಳ ಪರಿಚಯ ಮಾಡಿಕೊಡುವ ಕೆಲಸವನ್ನು ಪೋಷಕರು ಮಾಡಬೇಕೆಂದರು.

ಸಂಸ್ಥೆಯ ಶಿಕ್ಷ ಕಿ ವಿದ್ಯಾ ಗುಡಿಗಾರ್‌ ಅಧ್ಯಕ್ಷ ತೆ ವಹಿಸಿದ್ದರು. ಕೈಬರಹದ ಶಿಕ್ಷ ಕಿ ಶೀಲಾ, ವೇದಗಣಿತದ ತಜ್ಞೆ ಗಾಯಿತ್ರಿ ಸುಮಂತ ಇತರರು ಇದ್ದರು . ಇದೇ ಸಂದರ್ಭ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರಣಮ್ಯ ಟಿ.ರಾವ್‌, ಕೆ.ಅನನ್ಯ, ಎಸ್‌.ಯು.ಯುವರಾಜ, ಶ್ರಾವ್ಯ, ದ್ರುವ, ನವೀನ ಕುಮಾರ ಅವರಿಗೆ ಬಹುಮಾನ ವಿತರಿಸಲಾಯಿತು. ಶಿಲ್ಪಕಲಾವಿದ ಮಂಜುನಾಥ ಗುಡಿಗಾರ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ