ಆ್ಯಪ್ನಗರ

ಕೌನ್ಸೆಲಿಂಗ್‌ ಮುಗಿದರೂ ಮುಂದುವರಿದ ಗೊಂದಲ

ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿನ ಸಮಸ್ಯೆ, ಹಲವು ಬಾರಿ ಮುಂದೂಡಿದ ಕೌನ್ಸೆಲಿಂಗ್‌, ಸಾಫ್ಟ್‌ವೇರ್‌ ಸಮಸ್ಯೆಗಳಿಂದಾಗಿ ಬಹಳಷ್ಟು ಗೊಂದಲಕ್ಕೆಡೆ ಮಾಡಿದ್ದ ಪ್ರಾಥಮಿಕ ಶಾಲೆ ಹೆಚ್ಚುವರಿ ಶಿಕ್ಷಕರ ಮರು ನಿಯುಕ್ತಿ ಸ್ಥಳ ಆಯ್ಕೆ ಕೌನ್ಸೆಲಿಂಗ್‌ ಕಡೆಗೂ ಶನಿವಾರ ಅಂತ್ಯಕಂಡಿದೆ.

Vijaya Karnataka 21 Oct 2018, 5:00 am
ಶಿವಮೊಗ್ಗ : ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿನ ಸಮಸ್ಯೆ, ಹಲವು ಬಾರಿ ಮುಂದೂಡಿದ ಕೌನ್ಸೆಲಿಂಗ್‌, ಸಾಫ್ಟ್‌ವೇರ್‌ ಸಮಸ್ಯೆಗಳಿಂದಾಗಿ ಬಹಳಷ್ಟು ಗೊಂದಲಕ್ಕೆಡೆ ಮಾಡಿದ್ದ ಪ್ರಾಥಮಿಕ ಶಾಲೆ ಹೆಚ್ಚುವರಿ ಶಿಕ್ಷಕರ ಮರು ನಿಯುಕ್ತಿ ಸ್ಥಳ ಆಯ್ಕೆ ಕೌನ್ಸೆಲಿಂಗ್‌ ಕಡೆಗೂ ಶನಿವಾರ ಅಂತ್ಯಕಂಡಿದೆ.
Vijaya Karnataka Web 20smg1


ಮಂಗಳವಾರದಂದು ತಾಲೂಕು ಮಟ್ಟದ ಕೌನ್ಸೆಲಿಂಗ್‌ ಮುಗಿದ ಬಳಿಕ ನಗರದ ಕಸ್ತೂರ ಬಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಕೌನ್ಸೆಲಿಂಗ್‌ ನಡೆಸಲಾಯಿತು. ಜಿಲ್ಲಾ ಮಟ್ಟದ ಕೌನ್ಸೆಲಿಂಗ್‌ನಲ್ಲಿ 50 ಸಹ ಶಿಕ್ಷಕರು, 18 ದೈಹಿಕ ಶಿಕ್ಷಣ ಶಿಕ್ಷಕರು ಮತ್ತು 6 ಮುಖ್ಯಶಿಕ್ಷಕರಿಗೆ ಸ್ಥಳ ನಿಯುಕ್ತಿ ಮಾಡಲಾಯಿತು.

16ರಂದು ಶಿವಮೊಗ್ಗ ತಾಲೂಕಿನ ಹೆಚ್ಚುವರಿ ಶಿಕ್ಷಕರು ಕೌನ್ಸೆಲಿಂಗ್‌ ಮುಂದಕ್ಕೆ ಹೋಗುವ ಭರವಸೆ ಮೇಲೆ ಕೌನ್ಸೆಲಿಂಗ್‌ ಗೈರು ಹಾಜರಾಗಿದ್ದರಿಂದಾಗಿ ಜಿಲ್ಲೆಯ ಬೇರೆ ತಾಲೂಕುಗಳಿಗೆ ಮರು ನಿಯುಕ್ತಿಗೊಳ್ಳುವಂತಾಗಿದೆ. ಶಿಕ್ಷಕರ ಕೆಲ ಪ್ರತಿನಿಧಿಗಳು ಕೌನ್ಸೆಲಿಂಗ್‌ ಮುಂದೂಡಿಸುವ ಭರವಸೆ ನೀಡಿದ್ದನ್ನು ನಂಬಿ ತಾಲೂಕು ಮಟ್ಟದ ಕೌನ್ಸೆಲಿಂಗ್‌ಗೆ ಗೈರು ಹಾಜರಾಗಿದ್ದರಿಂದಾಗಿ ತಾಲೂಕಿನಲ್ಲಿ ಸ್ಥಳ ಕಳೆದುಕೊಂಡು ಬೇರೆ ತಾಲೂಕುಗಳಿಗೆ ನಿಯುಕ್ತಿಗೊಂಡಿದ್ದಾರೆ.

ಕಡೇ ದಿನ ಸಹ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರತಿಭಟನೆ ನಡೆಸಿ ಕೌನ್ಸೆಲಿಂಗ್‌ ಗೊಂದಲಗಳು ಇನ್ನು ಮುಗಿದಿಲ್ಲ ಎನ್ನುವುದನ್ನು ತೋರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರನ್ನೂ ಹೆಚ್ಚುವರಿ ಎಂದು ಗುರುತಿಸಿ ಶಾಲೆಗಳಲ್ಲಿ ಮಕ್ಕಳನ್ನು ದೈಹಿಕ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರುವ ಶಿಕ್ಷಣ ಇಲಾಖೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿ ಪಟ್ಟಿಯಿಂದ ಕೈಬಿಟ್ಟು ಅವರನ್ನು ಬೇರೆ ಶಾಲೆಗಳಿಗೆ ಮರು ನಿಯುಕ್ತಿ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದಾಗ ಮಲೆನಾಡು ಭಾಗದಲ್ಲಿ ಸ್ಥಳಾಂತರ ಅಥವಾ ವರ್ಗಾವಣೆ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು. ಆದರೆ, ಆಶ್ವಾಸನೆ ಸುಳ್ಳಾಗಿದೆ. ತೀರ್ಥಹಳ್ಳಿಯಲ್ಲಿ 13 ದೈಹಿಕ ಶಿಕ್ಷ ಣ ಶಿಕ್ಷ ಕರಲ್ಲಿ 12 ಮಂದಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಒಬ್ಬ ದೈಹಿಕ ಶಿಕ್ಷಣ ಶಿಕ್ಷ ಕ ಹೇಗೆ ಇಡೀ ತಾಲೂಕನ್ನು ನೋಡಿಕೊಳ್ಳಲು ಸಾಧ್ಯ. ಇದರಿಂದಾಗಿ ಶಾಲೆಗಳು ಮುಚ್ಚುವಂತಾಗಿದೆ. ಮಲೆನಾಡಿನಲ್ಲಿ ಬಡಮಕ್ಕಳು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.

ಶಿಕ್ಷಕಿಯೊಬ್ಬರು ಮಾತನಾಡಿ, ತಮ್ಮ ಸೇವಾವಧಿ ಎರಡು ತಿಂಗಳು ಮಾತ್ರ ಇದೆ. ಹೆಚ್ಚುವರಿ ಎಂದು ಗುರುತಿಸಿ ಬೇರೆ ಶಾಲೆಗೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಎರಡು ತಿಂಗಳಿಗೋಸ್ಕರ ಮನೆ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರೆ, ಮತ್ತೊಬ್ಬ ಶಿಕ್ಷಕ, ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ತಮ್ಮ ಹೆಸರಿರುವುದು ಗೊತ್ತೆ ಇಲ್ಲ. ಕೇವಲ ಹೆಸರು ಮಾತ್ರ ಹಾಕಿ ಶಾಲೆ ಹೆಸರು ಸೂಚಿಸದಿರುವುದರಿಂದ ಮಾಹಿತಿ ಇರಲಿಲ್ಲ. ಶನಿವಾರ ಸಂಜೆ ಹೊತ್ತಿಗೆ ಕರೆ ಮಾಡಿ ಡಮ್ಮಿ ಕೌನ್ಸೆಲಿಂಗ್‌ನಲ್ಲಿ ಜಿಲ್ಲೆಯ ಗಡಿ ಶಾಲೆಯೊಂದಕ್ಕೆ ವರ್ಗ ಮಾಡಿರುವುದಾಗಿ ತಿಳಿಸಿದರೆಂದು ಆಪಾದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ