ಆ್ಯಪ್ನಗರ

ಮೋದಿ ಮಾತಿಗೆ ಮರುಳಾದರೆ ಭವಿಷ್ಯ ಕರಾಳ

ಪ್ರಧಾನಿ ನರೇಂದ್ರಮೋದಿ ಅವರ ಬಣ್ಣದ ಮಾತಿಗೆ ಮರುಳಾದರೆ ದೇಶದ ಭವಿಷ್ಯ ಕರಾಳವಾಗಲಿದೆ. ಕೇಂದ್ರ ಸರಕಾರ ಇದೆ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರ ಮೋದಿ, ಅಮಿತ್‌ ಷಾ ನಿಯಂತ್ರಣದಲ್ಲಿದೆ. ಪೊಳ್ಳು ಭರವಸೆಗಳಿಂದ ದೇಶ ಉದ್ಧಾರ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 11 Sep 2019, 5:00 am
ತೀರ್ಥಹಳ್ಳಿ: ಪ್ರಧಾನಿ ನರೇಂದ್ರಮೋದಿ ಅವರ ಬಣ್ಣದ ಮಾತಿಗೆ ಮರುಳಾದರೆ ದೇಶದ ಭವಿಷ್ಯ ಕರಾಳವಾಗಲಿದೆ. ಕೇಂದ್ರ ಸರಕಾರ ಇದೆ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರಕಾರ ಮೋದಿ, ಅಮಿತ್‌ ಷಾ ನಿಯಂತ್ರಣದಲ್ಲಿದೆ. ಪೊಳ್ಳು ಭರವಸೆಗಳಿಂದ ದೇಶ ಉದ್ಧಾರ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Vijaya Karnataka Web 10TTH4_46


ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ಕ್ಷೇತ್ರ ಮಟ್ಟದ ಚುನಾಯಿತ ಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ಮುಖಂಡರು, ಕಾರ‍್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆ ಕಾಂಗ್ರೆಸ್‌ ಪಕ್ಷಕ್ಕಿದೆ. ಆದರೆ, ಬಿಜೆಪಿ ಕೋಟ್ಯಂತರ ಜನರ ಉದ್ಯೋಗವನ್ನು ಕಸಿದುಕೊಳ್ಳುತ್ತಿದೆ. ಜನರ ಬದುಕನ್ನು ಬಿಜೆಪಿ ಬೀದಿ ಪಾಲು ಮಾಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರಕಾರ ಅನುದಾನ ಮಂಜೂರು ಮಾಡುತ್ತಿಲ್ಲ. ಕೇಂದ್ರ ಸರಕಾರದ ವಿರುದ್ಧ ಗ್ರಾಮಮಟ್ಟದಲ್ಲಿ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಹೇಳಿದರು.

ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬಾರದು. ಜನರ ಸಮಸ್ಯೆ, ಸಾಮಾಜಿಕ ಹೋರಾಟದಲ್ಲಿರಾಜಕಾರಣದ ಪಾತ್ರ ಇದೆ. ಮಹಾತ್ಮಗಾಂಧೀಜಿ ಅವರು ಹೇಳಿದ ನೀತಿ ಪಾಠವನ್ನು ಕಾಂಗ್ರೆಸಿಗರು ಮರೆಯಬಾರದು. ರಾಜ್ಯದಲ್ಲಿಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ ಕಾರ‍್ಯಕ್ರಮಗಳು ಅಸಾಧಾರಣವಾಗಿದ್ದು ಫಲಾನುಭವಿಗಳು ಮರೆತರೆ ಹೇಗೆ. ದೇಶಕ್ಕೆ ಬೇಕಿರುವುದು ಜನರ ಕಣ್ಣೀರು ಒರೆಸುವ ಸರಕಾರವೇ ಹೊರತು ನರೇಂದ್ರಮೋದಿ ಅವರ ಅಭಿನಯದ ಭಾಷಣವಲ್ಲಎಂದರು.

ಮಾಜಿ ಸಚಿವ ಕಿಮ್ಮನೆರತ್ನಾಕರ್‌ ಮಾತನಾಡಿ, ಆರ್ಥಿಕ ವೈಫಲ್ಯ ಮುಚ್ಚಿಡಲು ಬಿಜೆಪಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ. ಜಿಡಿಪಿ ಕುಸಿತಗೊಂಡು ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಜನರು ಖರೀದಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಪಾಕಿಸ್ತಾನವನ್ನು ತೋರಿಸಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಸುಳ್ಳು ಬಂಡವಾಳವಾಗಿದೆ. ಬಿಎಸ್‌ಎನ್‌ಎಲ್‌ ನೌಕರರ ಸ್ಥಿತಿ ಶೋಚನೀಯವಾಗಿದೆ. ಉದ್ಯೋಗ ನೀಡದ ಕೇಂದ್ರ ಸರಕಾರವನ್ನು ಯುವ ಜನತೆ ಪ್ರಶ್ನಿಸಬೇಕಿದೆ ಎಂದರು.

ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಸುಂದರೇಶ್‌ ಮಾತನಾಡಿದರು. ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಸದಸ್ಯರಾದ ಕಲಗೋಡುರತ್ನಾಕರ್‌, ಭಾರತೀಪ್ರಭಾಕರ್‌, ಕಲ್ಪನಾ, ತಾ.ಪಂ. ಅಧ್ಯಕ್ಷೆ ನವಮಣಿ, ಸದಸ್ಯರಾದ ಕೆಳಕೆರೆದಿವಾಕರ್‌, ವೀಣಾಗಿರೀಶ್‌, ಕೆಪಿಸಿಸಿ ಸದಸ್ಯ ಜಿ.ಎಸ್‌. ನಾರಾಯಣರಾವ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಪ್ರಭಾವತಿ, ತೀರ್ಥಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಮುಖಂಡರಾದ ವಿಶ್ವನಾಥಶೆಟ್ಟಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ