ಆ್ಯಪ್ನಗರ

ಬಿಜೆಪಿ ಜಗಳ ಕಾಂಗ್ರೆಸ್‌ಗೆ ವರ

ಮೇಯರ್‌ ಪಟ್ಟಕ್ಕೇರುವ ಉಮೇದಿನಲ್ಲಿಕಾನೂನು ಸಮರಕ್ಕೆ ಇಳಿದ ಬಿಜೆಪಿ ಸದಸ್ಯೆಯರು ಪರಸ್ಪರರ ಅರ್ಹತೆಯನ್ನು ಕಸಿದುಕೊಂಡು ಪಟ್ಟವನ್ನು ಚಿನ್ನದ ಅರಿವಾಣದಲ್ಲಿಟ್ಟು ಕಾಂಗ್ರೆಸ್‌ಗೆ ಅರ್ಪಿಸಲು ಸಿದ್ಧರಾಗಿದ್ದಾರೆ.

Vijaya Karnataka 25 Jan 2020, 5:00 am
ಶಿವಮೊಗ್ಗ: ಮೇಯರ್‌ ಪಟ್ಟಕ್ಕೇರುವ ಉಮೇದಿನಲ್ಲಿಕಾನೂನು ಸಮರಕ್ಕೆ ಇಳಿದ ಬಿಜೆಪಿ ಸದಸ್ಯೆಯರು ಪರಸ್ಪರರ
Vijaya Karnataka Web congress happy bjp quarrel
ಬಿಜೆಪಿ ಜಗಳ ಕಾಂಗ್ರೆಸ್‌ಗೆ ವರ


ಅರ್ಹತೆಯನ್ನು ಕಸಿದುಕೊಂಡು ಪಟ್ಟವನ್ನು ಚಿನ್ನದ ಅರಿವಾಣದಲ್ಲಿಟ್ಟು ಕಾಂಗ್ರೆಸ್‌ಗೆ ಅರ್ಪಿಸಲು ಸಿದ್ಧರಾಗಿದ್ದಾರೆ.

ಬಿಸಿಎಂ ಬಿ ಮಹಿಳೆಗೆ ಮೀಸಲಾದ ಮೇಯರ್‌ ಸ್ಥಾನಕ್ಕೆ ಅರ್ಹರಾಗಿದ್ದ ಬಿಜೆಪಿಯ ಸುವರ್ಣಾ ಶಂಕರ್‌ ಮತ್ತು ಅನಿತಾ ರವಿಶಂಕರ್‌ ತಮ್ಮ ಎದುರಾಳಿಯನ್ನು ಚುನಾವಣೆಗೆ ಬರದಂತೆ ತಡೆಯುವ ಉದ್ದೇಶದಿಂದ ಮಾಡಿದ ಪ್ರಯತ್ನದಲ್ಲಿಸುವರ್ಣಾ ಅವರ ಜಾತಿ ಪ್ರಮಾಣ ಪತ್ರ ರದ್ದಾದರೆ, ಅನಿತಾರ ಜಾತಿ ಪ್ರಮಾಣ ಪತ್ರವನ್ನೂ ರದ್ದುಗೊಳಿಸುವ ಪ್ರಯತ್ನ ತೆರೆಮರೆಯಲ್ಲಿತೀವ್ರಗೊಂಡಿದೆ.

ಅನಿತಾ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸುವಂತೆ ಉಪ ವಿಭಾಗಾಧಿಕಾರಿಗೆ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆಯು ಮುಂದಕ್ಕೆ ಹೋಗಿದೆ. ಶುಕ್ರವಾರದಂದು ನಡೆಯಬೇಕಿದ್ದ ಅರ್ಜಿ ವಿಚಾರಣೆಯನ್ನು ಕಾರಣಾಂತರಗಳಿಂದ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌ ಅವರು ಜ.27ಕ್ಕೆ ಮುಂದೂಡಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ. ಇದರ ಮಧ್ಯೆ ಕೆಲವರು ಅವರ ಸದಸ್ಯತ್ವವನ್ನೇ ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿದಾವೆ ಹೂಡಲು ಸಿದ್ಧತೆ ನಡೆಸಿದ್ದಾರೆ.

ದಾಖಲೆಗಳ ಸಂಗ್ರಹ: ಇದಕ್ಕೆ ಪೂರಕವಾಗಿ ಅನಿತಾ ರವಿಶಂಕರ್‌ ಅವರು ಚುನಾವಣೆ ಸಂದರ್ಭದಲ್ಲಿಸಲ್ಲಿಸಿದ ದಾಖಲೆಗಳನ್ನು ಸಂಬಂಧಿಸಿದವರು ದಾವೆ ಹೂಡಲು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಂಡಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಮತ್ತು ಆಸ್ತಿವಿವರ ಸಲ್ಲಿಕೆಗಾಗಿ ಪಡೆದ ಎರಡು ಪ್ರತ್ಯೇಕ ಬಾಂಡ್‌ ಪೇಪರ್‌ಗಳಲ್ಲಿಮಾಹಿತಿಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಜಾತಿ ಪ್ರಮಾಣ ಪತ್ರದಲ್ಲಿಪತಿ, ಮಕ್ಕಳು ಸೇರಿದಂತೆ ಯಾರೂ ನೌಕರಿಯಲ್ಲಿಇಲ್ಲ, ಆಸ್ತಿ ಇಲ್ಲಎಂದು ನಮೂದಿಸಿದರೆ, ಆಸ್ತಿ ವಿವರದ ಬಾಂಡ್‌ನಲ್ಲಿಅವರಿಗಿರುವ ಮನೆ, ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಪತಿ ರವಿಶಂಕರ್‌ ಅವರ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಪಡೆದು ಕೊಂಡಿದ್ದಾರೆ. ಅನಿತಾರ ಮಗ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿಅಧಿಕಾರಿಯಾಗಿದ್ದಾರೆ. ಇದರ ಮಧ್ಯೆ ಸುವರ್ಣಾಶಂಕರ್‌ ಅವರು

ಉಪವಿಭಾಗಾಧಿಕಾರಿ ತೀರ್ಮಾನ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರುವ ಪ್ರಯತ್ನದಲ್ಲಿದ್ದಾರೆ.

ಕಾಂಗ್ರೆಸ್‌ಗೆ ಲಾಭ: ಪ್ರಕರಣ ದೊಡ್ಡ ತಿರುವು ಪಡೆದುಕೊಂಡು ಬಹಳ ದೂರ ಹೋಗಿರುವುದರಿಂದ ಬಿಜೆಪಿಗೆ ಮೇಯರ್‌ ಪಟ್ಟ ತಪ್ಪಿ ಹೋಗುವ ಭೀತಿ ಸೃಷ್ಟಿಯಾಗಿದೆ. ಅಕಸ್ಮಾತ್‌ ಬಿಜೆಪಿಗೆ ಅವಕಾಶ ತಪ್ಪಿ ಹೋದಲ್ಲಿಅದನ್ನು ತಮ್ಮ ಪಾಲು ಮಾಡಿಕೊಳ್ಳಲು ಕಾಂಗ್ರೆಸ್‌ನಲ್ಲಿಪ್ರಯತ್ನಗಳು ಆರಂಭವಾಗಿವೆ. ಪಾಲಿಕೆಯಲ್ಲಿಬಿಸಿಎಂ ಬಿಗೆ ಅರ್ಹರಾದ ಮತ್ತೊಬ್ಬ ಸದಸ್ಯೆ ಎಂದರೆ ಕಾಂಗ್ರೆಸ್‌ನ ಯಮುನಾ ರಂಗೇಗೌಡ. ಬಹುಮತ ಇಲ್ಲದಿದ್ದರೂ ಬಿಜೆಪಿಯ ಕಿತ್ತಾಟದಲ್ಲಿಅನಾಯಾಸವಾಗಿ ಅವರು ಮೇಯರ್‌ ಪಟ್ಟಕ್ಕೆ ಏರುತ್ತಾರೆ. ಇಬ್ಬರ ಜಗಳ ಮೂರನೇಯವರು ಲಾಭ ಪಡೆದುಕೊಂಡಂತಾಗಲಿದೆ.

ಮುಖಂಡರ ಜಾಣ ಮೌನ: ಸಾಮಾನ್ಯವಾಗಿ ಬಿಜೆಪಿಯಲ್ಲಿಕೆಳ ಹಂತದ ಅಧಿಕಾರವು ಹಿರಿಯ ಮುಖಂಡರ ತೀರ್ಮಾನದಂತೆ ನಡೆಯುತ್ತದೆ. ಆದರೆ, ಒಂದು ಬಣದ ಇಚ್ಛೆಗೆ ವಿರುದ್ಧವಾಗಿ ಮತ್ತೊಂದು ಬಣ ಮೀಸಲನ್ನು ಮಾಡಿಸಿಕೊಂಡು ಬಂದಿದ್ದಾರೆಂಬ ಅಸಮಾಧಾನವು ಇಡೀ ಪ್ರಕರಣವನ್ನು ಜಟಿಲಗೊಳಿಸಿದೆ. ಒಂದು ಬಣಕ್ಕೆ ಇದೆಲ್ಲಗೊತ್ತಿದ್ದರೂ ಜಾಣ ಮೌನಕ್ಕೆ ಜಾರಿದರೆ, ಮತ್ತೊಂದು ಬಣದ ಮುಖಂಡರು ತಮ್ಮವರಿಗೆ ಸಿಗುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲಾಗಿದೆ ಎಂಬ ಅಸಮಾಧಾನದಲ್ಲಿದ್ದಾರೆ.

--------------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ