ಆ್ಯಪ್ನಗರ

ಬಿಜೆಪಿ ನಾಯಕರ ನಿಲುವಿಗೆ ಕಾಂಗ್ರೆಸ್‌ ಖಂಡನೆ

ದೇಶಕ್ಕಾಗಿ ಬಲಿದಾನ ಮಾಡಿದ ಮಹಾನ್‌ ನಾಯಕರ ವಿರುದ್ಧ ಕೀಳು ಭಾಷೆಯಿಂದ ಟೀಕಿಸುತ್ತಿರುವ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ನಾಯಕರ ನಿಲುವು ಖಂಡಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ತೀರ್ಥಹಳ್ಳಿ ಕಾಂಗ್ರೆಸ್‌ ಪಕ್ಷ , ಗ್ರಾಮಾಂತರ ಕಾಂಗ್ರೆಸ್‌ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ಸಭೆ ನಡೆಯಿತು.

Vijaya Karnataka 21 May 2019, 5:00 am
ತೀರ್ಥಹಳ್ಳಿ: ದೇಶಕ್ಕಾಗಿ ಬಲಿದಾನ ಮಾಡಿದ ಮಹಾನ್‌ ನಾಯಕರ ವಿರುದ್ಧ ಕೀಳು ಭಾಷೆಯಿಂದ ಟೀಕಿಸುತ್ತಿರುವ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ನಾಯಕರ ನಿಲುವು ಖಂಡಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ತೀರ್ಥಹಳ್ಳಿ ಕಾಂಗ್ರೆಸ್‌ ಪಕ್ಷ , ಗ್ರಾಮಾಂತರ ಕಾಂಗ್ರೆಸ್‌ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ಸಭೆ ನಡೆಯಿತು.
Vijaya Karnataka Web SMR-20TTH2


ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡುವ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಮುಖಂಡರಿಗೆ ದೇಶದ ಭದ್ರತೆ ಬೇಕಿಲ್ಲ. ಅಧಿಕಾರದ ರಾಜಕಾರಣಕ್ಕಾಗಿ ದೇಶವನ್ನು ಬಲಿಕೊಡುವ ಹೀನ ಕೃತ್ಯದಲ್ಲಿ ಬಿಜೆಪಿ ತೊಡಗಿದೆ. ದೇಶದ ಏಕತೆ, ಸಮಗ್ರತೆಗೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರ ಹತ್ಯೆ ಸಮರ್ಥಿಸುವ ಬಿಜೆಪಿ ಮುಖಂಡರು ದೇಶ ದ್ರೋಹಿಗಳಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನೆ ಉದ್ದೇಶಿಸಿ ಮುಖಂಡರು ಹೇಳಿದರು.

ಅಂಬೇಡ್ಕರ್‌ ರಚಿಸಿದ ಸಂವಿಧಾನ ಬದಲಾಯಿಸಲಾಗುತ್ತದೆ ಎಂದು ಹೇಳುವ ಬಿಜೆಪಿ ಮುಖಂಡರು ಬಹಿರಂಗವಾಗಿ ದೇಶದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ದೇಶ ದ್ರೋಹ ಕೃತ್ಯದ ಹೇಳಿಕೆಯಲ್ಲಿ ತೊಡಗಿರುವ ಪ್ರಧಾನಿ ನರೇಂದ್ರಮೋದಿ, ಮುಖಂಡರ ವಿರುದ್ಧ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿ.ಪಂ.ಸದಸ್ಯೆ ಭಾರತೀಪ್ರಭಾಕರ್‌, ಗಾಂಧಿ ಚಿಂತನಾ ವೇದಿಕೆ ಸಂಚಾಲಕ ನೆಂಪೆದೇವರಾಜ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಡಿ.ಎಸ್‌. ವಿಶ್ವನಾಥಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಕೆಳಕೆರೆ ಪ್ರದೀಪ್‌, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್‌, ಅಮ್ರಪಾಲಿ ಸುರೇಶ್‌ ಮತ್ತಿತರರು ಇದ್ದರು. ತಹಸೀಲ್ದಾರ್‌ ಆನಂದಪ್ಪನಾಯಕ್‌ ಮನವಿ ಸ್ವೀಕರಿಸಿದರು.

---------
ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಸಾಯಿಸಿದ ದೇಶ ದ್ರೋಹಿ ನಾಥೂರಾಮ್‌ ಗೋಡ್ಸೆ ಜನ್ಮ ದಿನ ಆಚರಿಸುವ ಪ್ರವೃತ್ತಿ ಆರಂಭಿಸಿರುವ ಬಿಜೆಪಿ ನಾಯಕರಿಗೆ ಭಾರತದ ಭವಿಷ್ಯ ಬೇಕಿಲ್ಲ. ಹಿಂಸೆ ಪ್ರಚೋದಕರಾಗಿರುವ ಬಿಜೆಪಿ ಮುಖಂಡರಿಗೆ ಬುದ್ಧಿ ನೆಟ್ಟಗೆ ಇದ್ದಂತಿಲ್ಲ. ಶಾಂತಿ ಸಂದೇಶದ ಮೂಲಕ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿ ಅವಹೇಳನ ಮಾಡುತ್ತಿದೆ.
- ನೆಂಪೆದೇವರಾಜ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ