ಆ್ಯಪ್ನಗರ

ಮಹತ್ಕಾರ‍್ಯಗಳ ನಿರಂತರತೆ ಮಠದ ಹಿರಿಮೆ: ರಾಘವೇಶ್ವರ ಶ್ರೀ

ರಾಮಚಂದ್ರಾಪುರ ಮಠ ಅನೇಕ ವರ್ಷಗಳಿಂದ ನಡೆಸುತ್ತಾ ಬಂದಿರುವ ರಾಮಸತ್ರ, ವಿಶ್ವ ಗೋಸಮ್ಮೇಳನದಂತಹ ಮಹತ್ಕಾರ‍್ಯಗಳು ಮಠಕ್ಕೆ ಶೋಭೆ ತಂದಿವೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕಾರ‍್ಯಗಳನ್ನು ನಡೆಸುವುದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಪೀಠಾಧಿಪತಿ ಶ್ರೀ ರಾಘವೇಶ್ವರ ಸ್ವಾಮೀಜಿ ಕರೆ ನೀಡಿದರು.

Vijaya Karnataka 27 Mar 2018, 5:00 am
ಹೊಸನಗರ : ರಾಮಚಂದ್ರಾಪುರ ಮಠ ಅನೇಕ ವರ್ಷಗಳಿಂದ ನಡೆಸುತ್ತಾ ಬಂದಿರುವ ರಾಮಸತ್ರ, ವಿಶ್ವ ಗೋಸಮ್ಮೇಳನದಂತಹ ಮಹತ್ಕಾರ‍್ಯಗಳು ಮಠಕ್ಕೆ ಶೋಭೆ ತಂದಿವೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕಾರ‍್ಯಗಳನ್ನು ನಡೆಸುವುದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಪೀಠಾಧಿಪತಿ ಶ್ರೀ ರಾಘವೇಶ್ವರ ಸ್ವಾಮೀಜಿ ಕರೆ ನೀಡಿದರು.
Vijaya Karnataka Web continue great work raghaveshwarasree
ಮಹತ್ಕಾರ‍್ಯಗಳ ನಿರಂತರತೆ ಮಠದ ಹಿರಿಮೆ: ರಾಘವೇಶ್ವರ ಶ್ರೀ


ಶ್ರೀ ರಾಮೋತ್ಸವ ಅಂಗವಾಗಿ ರಾಮಚಂದ್ರಾಪುರ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಗೋಕರ್ಣದ ವಿದ್ವಾನ್‌ ಸತ್ಯನಾರಾಯಣ ಶರ್ಮ ಅವರಿಗೆ ಧನ್ಯಸೇವಕ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ರಾಮೋತ್ಸವ ಅಂಗವಾಗಿ ಪ್ರತಿ ವರ್ಷ ವಯೋವೃದ್ಧರಿಗೆ ಸಂಧ್ಯಾಮಂಗಲ ಸೇವೆ ನಡೆಸುವುದು ತಮಗೆ ಅತೀವ ತೃಪ್ತಿ ನೀಡಿದೆ. ವಯೋವೃದ್ಧರಿಗೆ ಆರೋಗ್ಯ, ನೆಮ್ಮದಿ ಲಭಿಸುವಂತಾಗಲಿ ಎಂದರು.

ಧನ್ಯಸೇವಕ ಪ್ರಶಸ್ತಿ ಪಡೆದ ಸತ್ಯನಾರಾಯಣ ಶರ್ಮ ಅವರು ಒಬ್ಬ ಅನುಪಮ ವಿದ್ವಾಂಸ ಎಂದು ಬಣ್ಣಿಸಿದರು.

ಪ್ರಶಸ್ತಿ ಸ್ವೀಕರಿಸಿದ ಸತ್ಯನಾರಾಯಣ ಶರ್ಮ ಮಾತನಾಡಿ, ವ್ಯಕ್ತಿಯೊಬ್ಬ ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಲು ಸಾಧ್ಯವಾಗದ್ದನ್ನು ವೇದಿಕೆಯಲ್ಲಿ ನಿಂತು ಇತರರಿಗೆ ಉಪದೇಶ ನೀಡುವುದು ತರವಲ್ಲ ಎಂಬ ಭಾವನೆ ನನ್ನದು. ಶಿಷ್ಯರ ಸ್ಥಾನದಲ್ಲಿದ್ದವರನ್ನು ಗುರುತಿಸಿ ಗೌರವಿಸುವ ಪರಿಪಾಠ ಶ್ರೀಮಠ ಹೊರತು ಬೇರೇಲ್ಲೂ ಇಲ್ಲ ಎಂದರು.

ಗುಜರಾತಿನ ರಘುನಾಥ ಅಗ್ನಿಹೋತ್ರಿ ಉಪಸ್ಥಿತರಿದ್ದರು. ಎಂ.ಎಸ್‌.ವಿಶ್ವೇಶ್ವರ ದಂಪತಿ ಸಭಾಪೂಜೆ ನೆರವೇರಿಸಿದರು. ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿವ ರಾಮೋತ್ಸವದ ಅಂತಿಮ ದಿನವಾದ ಗುರುವಾರ ವಿವಿಧ ಧಾರ್ಮಿಕ ಕಾರ‍್ಯಗಳು ನೆರವೇರಿದವು. ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಆಂಜನೇಯೋತ್ಸವ, ಭಜನಾ ಮಂಗಲ, ಧ್ವಜಾವತರಣ, ಮಂತ್ರಾಕ್ಷ ತೆ ಮೊದಲಾದ ಕಾರ‍್ಯಗಳು ಸಂಪನ್ನಗೊಂಡವು.


ಶ್ರೀರಾಮನೇ ಶ್ರೇಷ್ಠ

ತಮ್ಮ ಪ್ರಕಾರ ಶ್ರೀರಾಮನಿಗಿಂತ ಸೀತಾಮಾತೆಯೇ ಶ್ರೇಷ್ಠ. ಶ್ರೀರಾಮನೂ ಕೆಲವು ತಪ್ಪು ಮಾಡಿದ್ದಾನೆ ಎಂಬುದು ತಮ್ಮ ಅಭಿಪ್ರಾಯ ಎಂದು ಶ್ರೀಮಠದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದರು. ಇದನ್ನು ನೆನಪಿಸಿಕೊಂಡ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಶ್ರೀರಾಮ ಎಂದಿಗೂ ಸರ್ವಶ್ರೇಷ್ಠ. ಶಂಭೂಕ ವಧೆ, ಸೀತಾ ಪರಿತ್ಯಾಗ, ವಾಲಿ ವಧೆ ನಡೆದ ಕುರಿತು ಕೆಲವರು ವಿಮರ್ಶೆ ಮಾಡುತ್ತಾರೆ. ಆದರೆ ಮೂಲ ರಾಮಾಯಣದ ಅಧ್ಯಯನ ಕೊರತೆ ಇಂತಹ ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ. ಎಲ್ಲವೂ ನಡೆದಿದ್ದು ಲೋಕಕಲ್ಯಾಣಕ್ಕೋಸ್ಕರ. ಈ ಕುರಿತು ವಾಲ್ಮೀಕಿ ರಾಮಾಯಣದಲ್ಲಿ ವಿಸ್ತಾರವಾದ ಉಲ್ಲೇಖವಿದೆ. ಶ್ರೀರಾಮ ಶ್ರೇಷ್ಠತೆ ಸಾರಲು ರಾಮರಾಜ್ಯಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಶ್ರೀರಾಮ ಒಬ್ಬ ದೇವಮಾನವ ಎಂದು ವಿವರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ