ಆ್ಯಪ್ನಗರ

ಶೀತ, ಕೆಮ್ಮಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋದರೆ ಕೋವಿಡ್‌ ಟೆಸ್ಟ್‌..! ಮೆಡಿಕಲ್ಸ್‌ನಲ್ಲೂ ಔಷಧ ಕೊಡಲ್ಲ..!

ಶೀತದ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಗೆ ಹೋದವರಿಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಿ ಅದರ ವರದಿ ಬರುವ ಹೊತ್ತಿಗೆ ಶೀತ ಕಡಿಮೆಯಾದ ಉದಾಹರಣೆಗಳೂ ಇವೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ.

Vijaya Karnataka Web 24 Aug 2020, 4:56 pm

ಹೈಲೈಟ್ಸ್‌:

  • ವೈದ್ಯರ ಚೀಟಿ ಇಲ್ಲದೇ ಸಿಗುತ್ತಿಲ್ಲ ನೆಗಡಿಗೂ ಚಿಕಿತ್ಸೆ
  • ಕೋವಿಡ್‌ ಹಿನ್ನೆಲೆ ಮೇ ಆರರಿಂದ ರಾಜ್ಯಾದ್ಯಂತ ಜಾರಿ
  • ಶಿವಮೊಗ್ಗದ 719 ಮೆಡಿಕಲ್‌ಗಳಲ್ಲಿ ಕಟ್ಟುನಿಟ್ಟಿನ ನಿಯಮ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web corona-symptom-getty
ಶೀತ, ಕೆಮ್ಮಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋದರೆ ಕೋವಿಡ್‌ ಟೆಸ್ಟ್‌..! ಮೆಡಿಕಲ್ಸ್‌ನಲ್ಲೂ ಔಷಧ ಕೊಡಲ್ಲ..!
ಆತೀಶ್‌ ಬಿ. ಕನ್ನಾಳೆ
ಶಿವಮೊಗ್ಗ:
ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೆಗಡಿ, ಕೆಮ್ಮು, ಶೀತ, ಮೈಕೈ ನೋವು ಸಂಬಂಧಿತ ಔಷಧಗಳನ್ನು ಮೆಡಿಕಲ್‌ಗಳಲ್ಲಿ ನೀಡುತ್ತಿಲ್ಲ. ಹೀಗಾಗಿ, ಸಣ್ಣಪುಟ್ಟ ಕಾಯಿಲೆಗೂ ಕೋವಿಡ್‌ ಪರೀಕ್ಷೆಗೆ ಒಳಪಡುವ ಪರಿಸ್ಥಿತಿ ಎದುರಾಗಿದೆ.
ಅತಿಯಾಗಿ ಮಳೆ ಸುರಿಯುವ ಮಲೆನಾಡು ಸೇರಿದಂತೆ ಇನ್ನುಳಿದ ಕಡೆ ಸಾಮಾನ್ಯ ಶೀತಕ್ಕೂ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಹೋದಲ್ಲಿ ಸುರಕ್ಷತೆ ದೃಷ್ಟಿಕೋನದಿಂದ ಶೀತ, ಕೆಮ್ಮು ಇದ್ದಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕಲಾಗುತ್ತಿದೆ.

ಕೊರೊನಾ ಲಕ್ಷಣಗಳಿಗೆ ಹೋಲುವ ಜ್ವರ, ಶೀತ, ಕೆಮ್ಮು ಮತ್ತಿತರ ಸಮಸ್ಯೆಗಳು ಕಂಡುಬಂದಾಗ ಸಾರ್ವಜನಿಕರು ವೈದ್ಯರಿಗೆ ಸಂಪರ್ಕಿಸದೇ ಮೆಡಿಕಲ್‌ಗಳಲ್ಲಿ ಔಷಧಗಳನ್ನು ಪಡೆಯುತ್ತಿದ್ದರು. ಇದರಿಂದಾಗಿ, ಕಾಯಿಲೆಯ ಲಕ್ಷಣಗಳು ಕಡಿಮೆಯಾದರೂ ಸೋಂಕು ಹರಡುವ ಸಾಧ್ಯತೆ ಮನಗಂಡು ಔಷಧ ನಿಯಂತ್ರಣ ಇಲಾಖೆಯು ರಾಜ್ಯದ ಪ್ರತಿಯೊಂದು ಮೆಡಿಕಲ್‌ಗಳಲ್ಲಿ ವೈದ್ಯರ ಶಿಫಾರಸು ಇಲ್ಲದೇ ಔಷಧ ನೀಡದಂತೆ ಸೂಚನೆ ಹೊರಡಿಸಿತ್ತು.

ಮೇ 6ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ವೈದ್ಯರ ಸಲಹೆ ಇಲ್ಲದೇ ನೀಡದಿರಲು ಸೂಚಿಸಿದ ಡ್ರಗ್‌ಗಳನ್ನು ಪಡೆಯುವ ರೋಗಿಗಳ ಮೇಲೆ ಕಣ್ಣಿಡುವುದಕ್ಕಾಗಿ 'ಫಾರ್ಮಾ.ಕರ್ನಾಟಕ.ಟೆಕ್‌' ವೆಬ್‌ಸೈಟ್‌ನಲ್ಲಿ ಸಂಬಂಧಪಟ್ಟವರ ಮಾಹಿತಿ ಅಪ್‌ಲೋಡ್‌ ಮಾಡುವಂತೆ ಸೂಚನೆ ನೀಡಲಾಗಿದೆ. ಅದರನ್ವಯ ಈಗಲೂ ಎಲ್ಲ ಮೆಡಿಕಲ್‌ಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಔಷಧಗಳನ್ನು ನೀಡುತ್ತಿಲ್ಲ.

ಶೀತದ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಗೆ ಹೋದವರಿಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಿ ಅದರ ವರದಿ ಬರುವ ಹೊತ್ತಿಗೆ ಶೀತ ಕಡಿಮೆಯಾದ ಉದಾಹರಣೆಗಳೂ ಇವೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಅದರಿಂದ ಹವಾಮಾನ ವೈಪರೀತ್ಯದಿಂದಾಗಿ ಬರುವ ಕಾಯಿಲೆಗಳಿಗೂ ಔಷಧ ಸಿಗದ ಸ್ಥಿತಿ ಸೃಷ್ಟಿಯಾಗಿದೆ.

ಆರ್‌ಟಿಒ ಚೆಕ್‌ಪೋಸ್ಟ್‌ ಹಗರಣ, ಕೋವಿಡ್ ಕಿಟ್ ಖರೀದಿ ಅಕ್ರಮ ಅಧಿವೇಶನದಲ್ಲಿ ಪ್ರಸ್ತಾಪ: ಸತೀಶ್ ಜಾರಕಿಹೊಳಿ

ಮನೆ ಮದ್ದಿಗೆ ಮೊರೆ

ಮೆಡಿಕಲ್‌ಗಳಲ್ಲಿ ಪ್ಯಾರಸಿಟಮಲ್‌ ಆಧಾರಿತ ಔಷಧಗಳನ್ನು ಎಲ್ಲಿಯೂ ನೀಡುತ್ತಿಲ್ಲ. ಹಾಗೂ ಆಸ್ಪತ್ರೆಗೆ ಹೋದರೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಜನ ಮನೆಮದ್ದಿನ ಆಶ್ರಯ ಪಡೆಯುತ್ತಿದ್ದಾರೆ. ಅತಿಯಾಗಿ ಉಷ್ಣದ ಪದಾರ್ಥಗಳನ್ನು ಸೇವಿಸಿಯೂ ಹಲವರು ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಗುಡ್‌ ನ್ಯೂಸ್: ಕೊರೊನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳ, ಸಾವಿನ ಪ್ರಮಾಣ ಗಣನೀಯ ಇಳಿಕೆ

ಕೋವಿಡ್‌ ಕಾಯಿಲೆಗೆ ಹೋಲುವ ಲಕ್ಷಣಗಳಿರುವ ರೋಗಿಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ರೋಗದ ತೀವ್ರ ಸಮಸ್ಯೆಗಳಿದ್ದರೆ ಮಾತ್ರ ಅಂತಹವರ ಮಾಹಿತಿಯನ್ನು ಆಸ್ಪತ್ರೆಯವರು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ. ಸಣ್ಣಪುಟ್ಟ ಶೀತ, ಕೆಮ್ಮು, ಜ್ವರಕ್ಕೆ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ, ಸಮಸ್ಯೆಗಳೇನಾದರೂ ಇದ್ದರೆ ಗಮನಕ್ಕೆ ತರಬಹುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ತಿಳಿಸಿದ್ದಾರೆ.

ಆಯ್ದ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಚೀನಾ: ಸ್ಪರ್ಧೆಯ ತವಕವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ