ಆ್ಯಪ್ನಗರ

ಲಿಂಗನಮಕ್ಕಿ ಗೇಟ್‌ ತೆರೆಯಲು ಕ್ಷ ಣಗಣನೆ

ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಪರಿಣಾಮ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಭಾನುವಾರ 1818 ಅಡಿಗೆ ತಲುಪಿದೆ. ಆಣೆಕಟ್ಟೆಯ ಕ್ರೆಸ್ಟ್‌ಗೇಟುಗಳನ್ನು ಸೋಮವಾರ ತೆರೆದು ನೀರನ್ನು ಶರಾವತಿ ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

Vijaya Karnataka 2 Sep 2019, 5:00 am
ಸಾಗರ (ಶಿವಮೊಗ್ಗ) : ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆ ಪರಿಣಾಮ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಭಾನುವಾರ 1818 ಅಡಿಗೆ ತಲುಪಿದೆ. ಆಣೆಕಟ್ಟೆಯ ಕ್ರೆಸ್ಟ್‌ಗೇಟುಗಳನ್ನು ಸೋಮವಾರ ತೆರೆದು ನೀರನ್ನು ಶರಾವತಿ ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.
Vijaya Karnataka Web countdown to open lingamonakki gate
ಲಿಂಗನಮಕ್ಕಿ ಗೇಟ್‌ ತೆರೆಯಲು ಕ್ಷ ಣಗಣನೆ


151.75 ಟಿಎಂಸಿ ಸಾಮರ್ಥ್ಯ‌ದ, ಸಮುದ್ರ ಮಟ್ಟದಿಂದ 1819 ಅಡಿ ಎತ್ತರದ ಲಿಂಗನಮಕ್ಕಿ ಡ್ಯಾಂಗೆ 18ರಿಂದ 20 ಸಾವಿರ ಕ್ಯೂಸೆಕ್ಸ್‌ ನೀರಿನ ಒಳಹರಿವು ಇದೆ. ಗೇಟ್‌ ತೆಗೆದು ನೀರನ್ನು ಹೊರ ಬಿಡುವ ಸಂಬಂಧ ಈಗಾಗಲೇ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ಸೂಚನೆ ನೀಡಲಾಗಿದೆ. ಭಾನುವಾರ ಸಹ ಮುಂಜಾಗ್ರತೆ ಬಗ್ಗೆ ಸೂಚನೆ ನೀಡಲಾಗಿದೆ.

1964ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಡ್ಯಾಮ್‌ನಿಂದ ಈವರೆಗೆ 19 ಬಾರಿ ನದಿಗೆ ನೀರು ಬಿಟ್ಟ ದಾಖಲೆಯಿದೆ. ಲಿಂಗನಮಕ್ಕಿ ಜಲಾಶಯ ಈವರೆಗೆ 15 ಬಾರಿ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ ಅತಿ ಹೆಚ್ಚು ನೀರನ್ನು ಹೊರಬಿಟ್ಟ ದಾಖಲೆæಯಾಗಿದ್ದು 1970ರಲ್ಲಿ. ಅಂದು ಜಲಾಶಯದಿಂದ ನದಿಗೆ 92.38 ಟಿಎಂಸಿ ನೀರನ್ನು ಬಿಡಲಾಗಿತ್ತು. 2007ರಲ್ಲಿ ಒಂದೇ ವರ್ಷದಲ್ಲಿ 5 ಬಾರಿ ಡ್ಯಾಮ್‌ ಗೇಟು ತೆರೆದು ನೀರು ಹೊರ ಬಿಟ್ಟಿರುವುದು ಮತ್ತೊಂದು ವಿಶೇಷ.

ಜಲಪಾತದ ವೈಭವದ ನಿರೀಕ್ಷೆ

ಲಿಂಗನಮಕ್ಕಿ ಆಣೆಕಟ್ಟೆ ಗೇಟ್‌ಗಳನ್ನು ಸೋಮವಾರ ತೆರೆಯುವ ಹಿನ್ನೆಲೆಯಲ್ಲಿ ನೀರು ಜೋಗ ಜಲಪಾತದತ್ತ ಧಾವಿಸಲಿದ್ದು, ಸುಮಾರು 830 ಅಡಿ ಎತ್ತರದ ಜಲಪಾತಕ್ಕೆ ಕೆಂಪು ಮಿಶ್ರಿತ ನೀರು ಧುಮುಕುವ ರುದ್ರ ರಮಣೀಯ ದೃಶ್ಯ ನಿರ್ಮಾಣವಾಗಲಿದೆ. ಆಣೆಕಟ್ಟೆಯಿಂದ ಬಿಟ್ಟ ಮೂರು ಗಂಟೆಗಳ ಬಳಿಕ ನೀರು ಜಲಪಾತ ತಲುಪುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ