ಆ್ಯಪ್ನಗರ

ಕಾನೂನು ಅರಿವಿನಿಂದ ಅಪರಾಧ ನಿಯಂತ್ರಣ

ಸಾಮಾಜಿಕ ನಡವಳಿಕೆ ಮತ್ತು ವ್ಯವಹಾರದ ಕುರಿತು ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ನಿತ್ಯ ಒಂದಿಲ್ಲೊಂದು ರೀತಿಯಲ್ಲಿಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿಕಾನೂನು ತಿಳಿವಳಿಕೆ, ವೈಯಕ್ತಿಕ ನೆಲೆಯ ಎಚ್ಚರ ಬಹಳ ಅಗತ್ಯ ಎಂದು ಎಎಸ್‌ಪಿ ಎನ್‌.ಯತೀಶ್‌ ಹೇಳಿದರು.

Vijaya Karnataka 28 Dec 2019, 5:00 am
ಸಾಗರ: ಸಾಮಾಜಿಕ ನಡವಳಿಕೆ ಮತ್ತು ವ್ಯವಹಾರದ ಕುರಿತು ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ನಿತ್ಯ ಒಂದಿಲ್ಲೊಂದು ರೀತಿಯಲ್ಲಿಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿಕಾನೂನು ತಿಳಿವಳಿಕೆ, ವೈಯಕ್ತಿಕ ನೆಲೆಯ ಎಚ್ಚರ ಬಹಳ ಅಗತ್ಯ ಎಂದು ಎಎಸ್‌ಪಿ ಎನ್‌.ಯತೀಶ್‌ ಹೇಳಿದರು.
Vijaya Karnataka Web 27SGR3_46
ಸಾಗರ ಕ್ಲಿನಿಕ್‌ ಮತ್ತು ಡೇ ಕೇರ್‌ ಸಂಸ್ಥೆ ವತಿಯಿಂದ ಸೈಬರ್‌ ತಿಳಿವಳಿಕೆ ಅರಿವು ಫಲಕವನ್ನು ಪೊಲೀಸ್‌ ಇಲಾಖೆಗೆ ಶುಕ್ರವಾರ ಹಸ್ತಾಂತರಿಸಲಾಯಿತು.


ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿಶುಕ್ರವಾರ ಸಾಗರ ಕ್ಲಿನಿಕ್‌ ಮತ್ತು ಡೇ ಹೆಲ್ತ್‌ಕೇರ್‌ ಸಂಸ್ಥೆ ಕೊಡಮಾಡಿದ ಸೈಬರ್‌ ತಿಳಿವಳಿಕೆಯ ಸಂದೇಶ ಫಲಕಗಳನ್ನು ಇಲಾಖೆಯ ಪರವಾಗಿ ಸ್ವೀಕರಿಸಿ ಅವರು ಮಾತನಾಡಿದರು.

ಬ್ಯಾಂಕ್‌, ಹಣಕಾಸು ಸಂಸ್ಥೆ, ಪೊಲೀಸ್‌ ಇಲಾಖೆಗಳು ಸದಾ ಜನರಿಗೆ ಸೈಬರ್‌ ಅಪರಾಧಿಗಳು ನಡೆಸುವ ವಂಚನೆಗಳ ಕುರಿತು ತಿಳಿವಳಿಕೆ ನೀಡುತ್ತಲೇ ಬಂದಿದೆ. ಅನೇಕ ಕಡೆಗಳಲ್ಲಿಜನರು ಮೋಸ ಹೋಗುತ್ತಿರುವ ವಿಷಯವನ್ನು ಬಹಿರಂಗಗೊಳಿಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಇಲ್ಲಿನ ಮಾಹಿತಿ ಫಲಕ ತಿಳಿವಳಿಕೆ ನೀಡುತ್ತದೆ. ತಾಲೂಕಿನ ಪ್ರಮುಖ 10 ಕೇಂದ್ರಗಳಲ್ಲಿಇಂತಹ ಫಲಕಗಳನ್ನು ಡೇ ಕೇರ್‌ ಸಹಯೋಗದಲ್ಲಿಅಳವಡಿಸಲಾಗುತ್ತಿದೆ ಎಂದರು.

ಸಾಗರ್‌ ಡೇ ಕೇರೆ ಮುಖ್ಯಸ್ಥ ಡಾ. ಸಿ.ಎಚ್‌. ಮಹೇಂದ್ರಕುಮಾರ್‌ ಮಾತನಾಡಿ, ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಮಾಜಿಕ ಅರಿವು ಹೆಚ್ಚಾಗಬೇಕು. ಸಾರ್ವಜನಿಕರಲ್ಲಿಹೆಚ್ಚು ಹೆಚ್ಚು ತಿಳಿವಳಿಕೆ ಮೂಡಿಸುವ ಕೆಲಸವಾದರೆ ಸಮಾಜಘಾತಕ ಕೃತ್ಯ ಮಾಡುವವರಿಂದ ಜನ ದೂರವಿರುತ್ತಾರೆ ಎಂದರು.

ಸಾಮಾಜಿಕ ಕಾರ‍್ಯಕರ್ತರಾದ ಚಿಪ್ಲಿಅಕ್ಷರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕುಂಟಗೋಡು ಸೀತಾರಾಮ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ