ಆ್ಯಪ್ನಗರ

ಧರ್ಮ ಪಾಲನೆಯಿಂದ ಸಂಸ್ಕೃತಿ ಜಾಗೃತಿ

ಧರ್ಮ ಪಾಲನೆಯಿಂದ ಬದುಕಿನಲ್ಲಿ ಆಚಾರ, ಅರಿವು, ಸಂಸ್ಕೃತಿ ಕುರಿತು ಜಾಗೃತಿ ಮೂಡಲಿದೆ ಎಂದು ಕೋಣಂದೂರು ಮಳಲಿ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ‍್ಯ ಸ್ವಾಮೀಜಿ ತಿಳಿಸಿದರು.

Vijaya Karnataka 26 Aug 2019, 5:00 am
ಹೊಸನಗರ: ಧರ್ಮ ಪಾಲನೆಯಿಂದ ಬದುಕಿನಲ್ಲಿ ಆಚಾರ, ಅರಿವು, ಸಂಸ್ಕೃತಿ ಕುರಿತು ಜಾಗೃತಿ ಮೂಡಲಿದೆ ಎಂದು ಕೋಣಂದೂರು ಮಳಲಿ ಮಠದ
Vijaya Karnataka Web SMR-25HOSP2

ಶ್ರೀ ಗುರುನಾಗಭೂಷಣ ಶಿವಾಚಾರ‍್ಯ ಸ್ವಾಮೀಜಿ ತಿಳಿಸಿದರು.

ಶ್ರಾವಣ ಮಾಸದ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಇಲ್ಲಿನ ಶಿಕ್ಷ ಕ ಗಂಗಾಧರಯ್ಯ ಮನೆಯಂಗಳದಲ್ಲಿ ಶನಿವಾರ ಏರ್ಪಡಿಸಿದ್ದ ಚಿಂತನ-ವಚನ ಮಂಟಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಮಾನವ ಜನ್ಮವು ಸಕಲ ಜೀವರಾಶಿಗಳಲ್ಲಿ ಶ್ರೇಷ್ಠತೆ ಹೊಂದಿದೆ. ಇಂತಹ ಜನ್ಮ ತಾಳಿರುವ ನಾವು ಆದರ್ಶಮಯ ಬದುಕು ಸಾಗಿಸಬೇಕು. ವೀರಶೈವ ಧರ್ಮವು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುತ್ತದೆ. ಗುರುವಿಗೆ ಉನ್ನತ ಸ್ಥಾನ ಕಲ್ಪಿಸಿರುವ ಭಾರತೀಯ ಸಂಸ್ಕೃತಿಯಲ್ಲಿ ವೀರಶೈವ ಧರ್ಮದ ಸಾರ ಹಾಸುಹೊಕ್ಕಾಗಿದೆ ಎಂದರು.

ಸಾಹಿತಿ ಅಂಬ್ರಯ್ಯಮಠ ಮಾತನಾಡಿ, ವಿಶ್ವ ಮಾನವತೆಯನ್ನು ಎತ್ತಿಹಿಡಿಯಬೇಕಿದೆ. ಶರಣ ಸಂಸ್ಕೃತಿಯಲ್ಲಿ ನುಡಿದಂತೆ ನಡೆಯುವವರಿಗೆ ಹೆಚ್ಚಿನ ಮಾನ್ಯತೆ ನೀಡುವುದು ಪರಂಪರಾಗತವಾಗಿ ನಡೆದು ಬಂದಿದೆ. ಆದರೆ ಆಧುನಿಕತೆಯಿಂದ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳಿಂದ ಯುವಪೀಳಿಗೆ ದೂರವಾಗುತ್ತಿರುವುದು ವಿಷಾದನೀಯ ಎಂದರು. ವೀರಶೈವ ಮಹಾಸಭಾ ಅಧ್ಯಕ್ಷ ಚನ್ನಬಸಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ದುಮ್ಮ ರೇವಣಪ್ಪ ಗೌಡ, ತಾಲೂಕು ಕಸಾಪ ಅಧ್ಯಕ್ಷ ಕೆ. ಇಲಿಯಾಸ್‌, ಯತ್ತಿಗೆ ಮಹೇಶ್‌ಗೌಡ, ಕೊಗ್ರೆ ಬಸವರಾಜ್‌, ವಸವೆ ಈಶ್ವರಪ್ಪಗೌಡ ಇತರರು ಇದ್ದರು. ವಿನಾಯಕ ಸ್ವಾಮಿ ಪ್ರಾರ್ಥಿಸಿ, ಗಂಗಾಧರಯ್ಯ ಸ್ವಾಗತಿಸಿ, ರಾಜೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ