ಆ್ಯಪ್ನಗರ

ಸಂಸ್ಕೃತಿ ಚಿಂತನೆ ಬರಹಗಾರರಿಗೆ ಅಗತ್ಯ

ಅಪಾರವಾದ ಓದು, ಚಿಂತನಕ್ರಮಗಳಿಂದ ನಮ್ಮ ಸೃಜನಶೀಲತೆ ಪೋಷಿಸಿಕೊಳ್ಳಬೇಕೆಂದು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಡಾ. ಶಾಂತಾರಾಮ ಪ್ರಭು ಹೇಳಿದರು.

Vijaya Karnataka 15 Sep 2019, 5:00 am
ಸಾಗರ : ಅಪಾರವಾದ ಓದು, ಚಿಂತನಕ್ರಮಗಳಿಂದ ನಮ್ಮ ಸೃಜನಶೀಲತೆ ಪೋಷಿಸಿಕೊಳ್ಳಬೇಕೆಂದು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಡಾ. ಶಾಂತಾರಾಮ ಪ್ರಭು ಹೇಳಿದರು.
Vijaya Karnataka Web 14SGR4_46


ತಾಲೂಕಿನ ನಂದಿಗೋಡು ಗ್ರಾಮದ ಹಕ್ಲಳ್ಳಿ ಹರರಿಟೇಜ್‌ ಹೋನಲ್ಲಿಕೇಡಲಸರ ಸಂಸ್ಕೃತಿ ಸಮಾಜ ಟ್ರಸ್ಟ್‌ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಹಮ್ಮಿಕೊಂಡಿರುವ ಎರಡು ದಿನದ ಕಥಾಕಮ್ಮಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್‌, ದೂರದರ್ಶನಗಳು ನಮ್ಮ ಯೋಚನಾಕ್ರಮ ಹಾಗೂ ನಯ ವಿನಯದ ಪರಂಪರೆಯನ್ನು ಕೊಂದು ಹಾಕಿವೆ. ಸೃಜನಶೀಲ ಬರಹಗಾರರಿಗೆ, ಕಲಾವಿದರಿಗೆ ಇಂಥ ಸಂದರ್ಭ ಹೆಚ್ಚಿನ ಹೊಣೆಗಾರಿಕೆ ಇದೆ. ಇಂಥ ಕಮ್ಮಟಗಳ ಮೂಲಕ ವರ್ತಮಾನದ ಸವಾಲು ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.

ಸೊರಬ ತಾಲೂಕು ಜಾನಪದ ಪರಿಷತ್‌ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಆಧುನಿಕ ಮಾಧ್ಯಮಗಳ ಬೇಜವಾಬ್ದಾರಿಯಿಂದ ನಮ್ಮ ಜ್ಞಾನ ಪರಂಪರೆ ನಾಶವಾಗುತ್ತಿದೆ. ಬದುಕನ್ನು ಕಟ್ಟಿಕೊಳ್ಳುವ ಕ್ರಮ, ಜೀವನ ಎದುರಿಸುವ ಶಕ್ತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯೀಕರಣದಿಂದ ನಮ್ಮ ಬದುಕಿನ ನೆಮ್ಮದಿ ಹಾಳಾಗುತ್ತಿದೆ. ಇಂಥ ಸಂದರ್ಭ ಸಂಸ್ಕೃತಿ, ಸಮಾಜದ ಬಗ್ಗೆ ಯುವ ಬರಹಗಾರರು ಆರೋಗ್ಯಕರ ಚಿಂತನೆ ನಡೆಸಬೇಕೆಂದರು.

ಸಂಸ್ಕೃತಿ ಸಮಾಜ ಟ್ರಸ್ಟ್‌ ಅಧ್ಯಕ್ಷ ಗೋಪಾಲಕೃಷ್ಣ ಸಂಪೆಕೈ ಅಧ್ಯಕ್ಷತೆ ವಹಿಸಿದ್ದರು. ಕಥಾ ಕಮ್ಮಟದ ನಿರ್ದೇಶಕರಾದ ಶ್ರೀಧರ ಬಳೆಗಾರ, ಸುನಂದ ಕಡಮೆ, ಅಮರೇಶ ನುಗಡೋಣಿ, ರಾಧಾಕೃಷ್ಣ ಬಂದಗದೆ, ಶ್ರೀಕಾಂತ, ಪ್ರಭಾಕರ ಸಾಂಶಿ, ಎನ್‌.ಸಿ.ಗಂಗಾಧರ ಹಾಜರಿದ್ದರು. ಉಮಾಮಹೇಶ್ವರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಎನ್‌.ಎಂ. ಕುಲಕರ್ಣಿ ನಿರೂಪಿಸಿದರು. ಕೆ.ಎನ್‌.ಭಾರ್ಗವ ಮತ್ತಿತರರು ರಂಗಗೀತೆ ಹಾಡಿದರು. ನಿಖಿಲ್‌ ಕುಂಸಿ ತಬಲಾ ಸಾಥ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ