ಆ್ಯಪ್ನಗರ

ತಂಬಾಕು ಸೇವನೆಯಿಂದ ಆರೋಗ್ಯ ಹಾಳು

ತಂಬಾಕು ಸೇವನೆಯಂತಹ ದುಶ್ಚಟಗಳಿಂದ ಯುವಪೀಳಿಗೆ ದಾರಿತಪ್ಪ್ಪುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನಾರಾಯಣ ಕಾಮತ್‌ ಆತಂಕ ವ್ಯಕ್ತಪಡಿಸಿದರು.

Vijaya Karnataka 2 Jun 2019, 5:00 am
ಹೊಸನಗರ: ತಂಬಾಕು ಸೇವನೆಯಂತಹ ದುಶ್ಚಟಗಳಿಂದ ಯುವಪೀಳಿಗೆ ದಾರಿತಪ್ಪ್ಪುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನಾರಾಯಣ ಕಾಮತ್‌ ಆತಂಕ ವ್ಯಕ್ತಪಡಿಸಿದರು.
Vijaya Karnataka Web SMR-1HOSP2


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ನಗರ ಹೋಬಳಿ ಕಾಶಿಬ್ಯಾಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಧೂಮಪಾನದಿಂದ ಆರೋಗ್ಯ ಹಂತಹಂತವಾಗಿ ಹಾಳಾಗುತ್ತಿದೆ. ಕೆಟ್ಟ ಹವ್ಯಾಸಗಳಿಂದ ನಮ್ಮ ಅಮೂಲ್ಯವಾದ ಸಮಯ, ಹಣ ಕಳೆದುಕೊಂಡು ಗಳಿಸುವುದು ಗಂಭೀರ ಕಾಯಿಲೆಗಳನ್ನು ಮಾತ್ರ. ನಮ್ಮ ದೇಹವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕೆಂದರು.

ಯೋಜನಾಧಿಕಾರಿ ಸಂತೋಷ್‌ ಮಾತನಾಡಿ, ತಪ್ಪುದಾರಿ ಹಿಡಿದವರನ್ನು ಸರಿಪಡಿಸಿ ತನ್ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಈ ವೇಳೆ, ತಂಬಾಕು ಸೇವನೆಯಿಂದಾಗುವ ಪರಿಣಾಮ ಕುರಿತು ಜಾಗೃತಿ ಮೂಡಿಸುವ ನಶೆ ಎಂಬ ನರಕ ಎನ್ನುವ ಕಿರುಚಿತ್ರ ಪ್ರದರ್ಶಿಸಲಾಯಿತು. ವಿಕಾಸ ಕೇಂದ್ರದ ಸದಸ್ಯೆ ನಾಗರತ್ನ ಅಧ್ಯಕ್ಷ ತೆ ವಹಿಸಿದ್ದರು. ಸಮನ್ವಯಾಧಿಕಾರಿ ಚೇತನಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ