ಆ್ಯಪ್ನಗರ

ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಅಡಕೆ ತೋಟದ ಗುಂಡಿಯೊಳಗೆ ಬಿದ್ದಿದ್ದ ಜಿಂಕೆಯನ್ನು ಶುಕ್ರವಾರ ಸಂಜೆ ಯುವಕರು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

Vijaya Karnataka 1 Nov 2019, 5:00 am
ರಿಪ್ಪನ್‌ಪೇಟೆ: ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಅಡಕೆ ತೋಟದ ಗುಂಡಿಯೊಳಗೆ ಬಿದ್ದಿದ್ದ ಜಿಂಕೆಯನ್ನು ಶುಕ್ರವಾರ ಸಂಜೆ ಯುವಕರು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.
Vijaya Karnataka Web 31RPT43_46

ಅರಸಾಳು ವಲಯ ವ್ಯಾಪ್ತಿಯ ಬೆನವಳ್ಳಿ ಗ್ರಾಮದಲ್ಲಿಅಹಾರಕ್ಕಾಗಿ ಕಾಡಿನಲ್ಲಿಅಲೆಯುವುದನ್ನು ಗಮನಿಸಿದ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದು, ಪಾರಾಗಲು ಓಡಿಬಂದ ಜಿಂಕೆ ಬಿ.ಎಲ್‌.ನಾಗೇಂದ್ರಪ್ಪಗೌಡ ಅವರ ಅಡಕೆ ತೋಟದ ಚಿಕ್ಕ ಗುಂಡಿಯೊಳಗೆ ಬಿದ್ದಿದೆ. ಇದನ್ನು ಕಂಡ ಗ್ರಾಮದ ಯುವಕರು ಜಿಂಕೆಯನ್ನು ಹಿಡಿದು ಮನೆಯ ಬಳಿ ಶುಶ್ರೂಷೆ ಮಾಡಿ ಅರಸಾಳು ವಲಯ ಅರಣ್ಯಾಧಿಕಾರಿ ಮತ್ತು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಸಮ್ಮುಖದಲ್ಲಿಕಾಡಿಗೆ ಬಿಡಲಾಯಿತು. ಗ್ರಾಮದ ಬಿ.ಎನ್‌.ರವಿ ಬೆನವಳ್ಳಿ, ಬಿ.ಎಸ್‌.ಆಶೋಕ್‌, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ