ಆ್ಯಪ್ನಗರ

‘ಮನೆ ಬಾಗಿಲಿಗೆ ಸಾಮಗ್ರಿ ತಲುಪಿಸಿ’

ಲಾಕ್‌ಡೌನ್‌ನಿಂದ ವ್ಯಾಪ್ತಿ ಪ್ರದೇಶದ ಜನರು ತೊಂದರೆಗೊಳಗಾದಂತೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

Vijaya Karnataka 4 Apr 2020, 5:00 am
ತಾಳಗುಪ್ಪ: ಲಾಕ್‌ಡೌನ್‌ನಿಂದ ವ್ಯಾಪ್ತಿ ಪ್ರದೇಶದ ಜನರು ತೊಂದರೆಗೊಳಗಾದಂತೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
Vijaya Karnataka Web deliver things door to door
‘ಮನೆ ಬಾಗಿಲಿಗೆ ಸಾಮಗ್ರಿ ತಲುಪಿಸಿ’


ಅವರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿಏರ್ಪಡಿಸಿದ್ದ ಕೊರೋನಾ ಜಾಗೃತಿ ಸಭೆಯಲ್ಲಿಮಾತನಾಡಿದರು. ಕೊರೊನಾ ತಡೆಗೆ ಸಾಮಾಜಿಕ ಅಂತರ ಪರಿಣಾಮಕಾರಿಯಾಗಿದೆ. ಗ್ರಾಮ ಪಂಚಾಯಿತಿ ತರಕಾರಿ, ಹಣ್ಣುಹಂಪಲು, ಕಿರಾಣಿ ಮೊದಲಾದ ಅಗತ್ಯ ಸಾಮಗ್ರಿಗಳನ್ನು ನಿಗದಿತ ದರದಲ್ಲಿಮನೆ ಮನೆಗೆ ತಲುಪಿಸುವ ಉಸ್ತುವಾರಿ ವಹಿಸಬೇಕು. ಮನೆ ಬಾಗಿಲಿಗೆ ವಸ್ತು ಸರಬರಾಜಾದರೆ ಜನರು ಪೇಟೆಗೆ ಬರುವುದು ತಪ್ಪುತ್ತದೆ. ಇದಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಜತೆಗೆ ಸ್ವಯಂಸೇವಕರನ್ನೂ ತೊಡಗಿಸಿಕೊಳ್ಳಬೇಕೆಂದರು.

ಪಂಚಾಯಿತಿ ಗುಣಮಟ್ಟದ ಮಾಸ್ಕ್‌ ಹಾಗೂ ಸ್ಯಾನಿಟೇಜರ್‌ಗಳನ್ನು 14ನೇ ಹಣಕಾಸು ನಿಧಿಯಿಂದ ಖರೀದಿಸಿ ವಿತರಿಸಬೇಕೆಂದು ಸೂಚಿಸಿದರು. ಸರಕಾರ ಏಕ ಕಾಲದಲ್ಲಿವಿತರಿಸಲು ಉದ್ದೇಶಿಸಿರುವ ಎರಡು ತಿಂಗಳ ಪಡಿತರವನ್ನು ಫಲಾನುಭವಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದರು.

ಗ್ರಾ.ಪಂ.ಅಧ್ಯಕ್ಷ ಜಿ.ಆರ್‌.ಗಣಪತಿ ಮಾತನಾಡಿದರು. ತಾ.ಪಂ.ಉಪಾಧ್ಯಕ್ಷ ಅಶೋಕ ಬರದಳ್ಳಿ, ಗ್ರಾಪಂ ಉಪಾಧ್ಯಕ್ಷೆ ಶಾಂತಲಾ, ವೈದ್ಯಾಧಿಕಾರಿ ಡಾ.ಸರಸ್ವತಿ, ದಫೇದಾರ್‌ ರಾಘು ಶೆಟ್ಟಿ, ಎಸ್‌.ವಿ.ಓಂಕಾರ, ಪಿಡಿಒ ಮೋಹನ್‌, ಕಾರ‍್ಯದರ್ಶಿ ನಾಗರಾಜ, ವ್ಯವಸಾಯ ಸೇವಾಸಹಕಾರ ಸಂಘ ವ್ಯವಸ್ಥಾಪಕ ಮಹೇಂದ್ರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

--------
ನೆರೆಯ ಜಿಲ್ಲೆಯ ಭಟ್ಕಳದಲ್ಲಿಈಗಾಗಲೇ ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ. ಆ ಭಾಗದ ಸಂಪರ್ಕ ಗ್ರಾಮಕ್ಕಾಗದಂತೆ ಎಚ್ಚರ ವಹಿಸಬೇಕು. ಹೊರಗಡೆಯಿಂದ ಬಂದ ವ್ಯಕ್ತಿಗಳ ಮಾಹಿತಿ ಕಲೆಹಾಕಬೇಕು.
-ಮಲ್ಲಿಕಾರ್ಜುನ ಹಕ್ರೆ, ತಾ.ಪಂ.ಅಧ್ಯಕ್ಷ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ