ಆ್ಯಪ್ನಗರ

ಬೆಂಕಿಗೆ ಕಾಡುಮರಗಳ ನಾಶ

ತಾಲೂಕಿನ ಆವಿನಹಳ್ಳಿ ಹೋಬಳಿಯ ಮೂರಕೈ, ಬಾಳೆಕೊಪ್ಪ, ಸತಾಳು ಹಾಗೂ ಗುಳೆಹಳ್ಳಿ ಭಾಗದಲ್ಲಿ ಭಾನುವಾರ ಅರಣ್ಯಕ್ಕೆ ಬೆಂಕಿ ತಗುಲಿದ್ದು, ಸಾವಿರಾರು ಕಾಡುಜಾತಿಯ ಮರಗಳು ಬೆಂಕಿಗೆ ಆಹುತಿಯಾಗಿವೆ.

Vijaya Karnataka 26 Feb 2019, 5:00 am
ಸಾಗರ : ತಾಲೂಕಿನ ಆವಿನಹಳ್ಳಿ ಹೋಬಳಿಯ ಮೂರಕೈ, ಬಾಳೆಕೊಪ್ಪ, ಸತಾಳು ಹಾಗೂ ಗುಳೆಹಳ್ಳಿ ಭಾಗದಲ್ಲಿ ಭಾನುವಾರ ಅರಣ್ಯಕ್ಕೆ ಬೆಂಕಿ ತಗುಲಿದ್ದು, ಸಾವಿರಾರು ಕಾಡುಜಾತಿಯ ಮರಗಳು ಬೆಂಕಿಗೆ ಆಹುತಿಯಾಗಿವೆ.
Vijaya Karnataka Web SMR-25SGR7

ಭಾನುವಾರ ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ್ದರಿಂದ ಬೆಲೆಬಾಳುವ ಕಾಡುಜಾತಿ ಮರಗಳು ನಾಶವಾಗಿದ್ದು, ಕೆಲವು ಪ್ರಾಣಿಗಳು ಸಹ ಮೃತಪಟ್ಟಿರುವ ಸಾಧ್ಯತೆ ಇದೆ. ತಕ್ಷ ಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದರೂ ಬಹುತೇಕ ಮರಗಳು ನಾಶವಾಗಿದ್ದವು. ಅರಣ್ಯಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದರೆ 08183-226800 ಕರೆ ಮಾಡಬೇಕೆಂದು ಅಗ್ನಿಶಾಮಕ ಸಿಬ್ಬಂದಿ ಜೆ.ರವಿ ಅವರು ತಿಳಿಸಿದ್ದಾರೆ. ಕಾರಾರ‍ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಅಬ್ದುಲ್‌ ರಜಾಕ್‌, ಜೆ.ರವಿ, ಎಚ್‌.ಚೆನ್ನಪ್ಪ , ಸತೀಶ್‌, ಪ್ರಕಾಶ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ