ಆ್ಯಪ್ನಗರ

ಸಾಧನೆಗೆ ಶ್ರದ್ಧೆ, ಶ್ರಮ ಅವಶ್ಯಕ

ಒಂದು ಸಾಧನೆಗೆ ಶ್ರದ್ಧೆ, ಶ್ರಮ ಹಾಗೂ ಬುದ್ಧಿವಂತಿಕೆ ಅತ್ಯವಶ್ಯಕ ಎಂದು ಡಿಸಿ ಕೆ.ಎ.ದಯಾನಂದ್‌ ಹೇಳಿದರು.

Vijaya Karnataka 4 Aug 2019, 5:00 am
ಹೊಳೆಹೊನ್ನೂರು: ಒಂದು ಸಾಧನೆಗೆ ಶ್ರದ್ಧೆ, ಶ್ರಮ ಹಾಗೂ ಬುದ್ಧಿವಂತಿಕೆ ಅತ್ಯವಶ್ಯಕ ಎಂದು ಡಿಸಿ ಕೆ.ಎ.ದಯಾನಂದ್‌ ಹೇಳಿದರು.
Vijaya Karnataka Web SMR-3HHR2


ಪಟ್ಟಣ ಸಮೀಪದ ಜಾವಳ್ಳಿಯ ಶ್ರೀಅರಬಿಂದೋ ಸ್ವತಂತ್ರ ಪÜದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲರ ಬದುಕು ಸುಂದರ ಹಾಗೂ ನೆಮ್ಮದಿಯಿಂದ ಇರಲು ಒಳ್ಳೆ ವಿದ್ಯೆ ಮತ್ತು ಉದ್ಯೋಗ ಬೇಕು. ಆ ಸಾಧನೆಗೆ ಬುದ್ಧಿವಂತಿಕೆ ಹಾಗೂ ಶ್ರದ್ಧೆಯಿಂದ ಶ್ರಮಿಸಬೇಕು. ಅಹಂಭಾವ ಬಿಟ್ಟು ಗಟ್ಟಿ ಛಲದಿಂದ ಪ್ರಯತ್ನಪಡಬೇಕು. ವಿದ್ಯಾಭ್ಯಾಸವು ವಿನಯ ಕಲಿಸಿ ಉತ್ತಮ ವ್ಯಕ್ತಿತ್ವ ನಿರ್ಮಿಸಬೇಕೆಂದರು.

ಜ್ಞಾನದೀಪ ವಿದ್ಯಾ ಸಂಸ್ಥೆ ಕಾರ‍್ಯದರ್ಶಿ ವಿ.ದೇವೇಂದ್ರ ಮಾತನಾಡಿ, ಉತ್ತಮ ಸಹಕಾರ ಹಾಗೂ ಪ್ರೋತ್ಸಾಹ ಇದ್ದರೆ ಪ್ರತಿಭೆಗಳು ಹೊರಬರಲು ಸಾಧ್ಯ. ಮಕ್ಕಳ ಪ್ರತಿಭೆ ಅನಾವರಣಕ್ಕೆ ತಮ್ಮ ಸಂಸ್ಥೆ ಸದಾ ಸಿದ್ಧ ಎಂದರು.

ಜ್ಞಾನದೀಪ ವಿದ್ಯಾ ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್‌ ಅಧ್ಯಕ್ಷ ತೆ ವಹಿಸಿದ್ದರು. ಆಡಳಿತಾಧಿಕಾರಿ ಮಧು, ಉಪಾಧ್ಯಕ್ಷ Ü ದಾದಾ ಖಲಂದರ್‌, ನಿರ್ದೇಶಕರಾದ ತಾಜ್‌ ಉದ್ದೀನ್‌, ದಾದಾ ಖಲಂದರ್‌ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾಗರಾಜ್‌, ಜ್ಞಾನದೀಪ ಸೀನಿಯರ್‌ ಸೆಕೆಂಡರಿ ಶಾಲೆ ಪ್ರಾಂಶುಪಾಲ ಶ್ರೀಕಾಂತ ಎಂ.ಹೆಗಡೆ, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಈ ಸಂದರ್ಭ 2018-19ನೇ ಶೈಕ್ಷ ಣಿಕ ಸಾಲಿನಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಅರಬಿಂದೋ ಕಾಲೇಜಿನ ವಿದ್ಯಾರ್ಥಿ ಶರತ್‌ಚಂದ್ರ ಹಾಗೂ ಉತ್ತಮ ಸಾಧನೆ ಮಾಡಿದ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆ, ಪದಕ ನೀಡಿ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ