ಆ್ಯಪ್ನಗರ

ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ಮೌನ ತಪಸ್ವಿ, ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಗುರುದೇವ ಸೇವಾ ಸಂಸ್ಥೆಯಿಂದ ಹೊಸಕೊಪ್ಪ, ಬಂಕಸಾಣ, ಜಡೆ ಮುಂತಾದ ಸಂತ್ರಸ್ತರ ಕೇಂದ್ರಕ್ಕೆ ಗುರು ಬಂಧುಗಳು ಮಂಗಳವಾರ ಭೇಟಿ ನೀಡಿ ದಿನನಿತ್ಯ ಬಳಕೆಯ ಚಾಪೆ, ಇತರೆ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿ ಸಾಂತ್ವನ ಹೇಳಿದರು.

Vijaya Karnataka 15 Aug 2019, 5:00 am
ಸೊರಬ: ಮೌನ ತಪಸ್ವಿ, ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಗುರುದೇವ ಸೇವಾ ಸಂಸ್ಥೆಯಿಂದ ಹೊಸಕೊಪ್ಪ, ಬಂಕಸಾಣ, ಜಡೆ ಮುಂತಾದ ಸಂತ್ರಸ್ತರ ಕೇಂದ್ರಕ್ಕೆ ಗುರು ಬಂಧುಗಳು ಮಂಗಳವಾರ ಭೇಟಿ ನೀಡಿ ದಿನನಿತ್ಯ ಬಳಕೆಯ ಚಾಪೆ, ಇತರೆ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿ ಸಾಂತ್ವನ ಹೇಳಿದರು.
Vijaya Karnataka Web SMR-14SRBP1


ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗುರುದೇವ ಸೇವಾ ಸಂಸ್ಥೆ ಪರರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತಿದೆ. ಕೊಡುವ ವಸ್ತು ಸಣ್ಣದಿರಬಹುದು. ಆದರೆ ಕೊಡುವುದರ ಹಿಂದಿನ ಭಾವ ಅಮೂಲ್ಯವಾದುದು. ನಾವು ಸಹ ನಿಮ್ಮ ಕಷ್ಟದಲ್ಲಿ ಭಾಗಿಯಾಗುವುದೇ ನಮ್ಮ ಮೂಲ ಉದ್ದೇಶ ಎಂದರು. ಇನ್ನಾದರೂ ಮನುಷ್ಯ ನಿಸರ್ಗದ ರಕ್ಷ ಣೆಗೆ ಮುಂದಾಗಬೇಕು. ಯುವಕರು ಈ ಬಗ್ಗೆ ಚಿಂತಿಸಬೇಕೆಂದರು.

ಜಿ.ಪಂ ಸದಸ್ಯ ಶಿವಲಿಂಗಗೌಡ್ರು, ಪ.ಪಂ ಸದಸ್ಯ ನಟರಾಜ ಉಪ್ಪಿನ್‌, ಮಲ್ಲನಗೌಡ್ರು, ಗಂಗಾಧರ ಚಗಟೂರು, ಮಲ್ಲಿಕಾರ್ಜುನ ಸಾಲಿಗೆ, ವೀರೇಶ ತುಮರಿಕೊಪ್ಪ, ನಿಜಗುಣ ಚಂದ್ರಶೇಖರ, ಮಂಜಣ್ಣ ಹೊಸಕೊಪ್ಪ, ಡಾ.ವಿರೂಪಾಕ್ಷ ಪ್ಪ, ಗ್ರಾಮಸೇವಕಿ ಭಾರತಿ ಪಾಟಿಲ್‌, ಕೋಟೆ ಕಾನಳ್ಳಿಮಠದ ರುದ್ರಸ್ವಾಮಿ, ಶಿವಕುಮಾರ ಸ್ವಾಮಿ, ಅಶೋಕ ಪಾಟೀಲ್‌ ಸಾಲಿಗೆ ಸೇರಿದಂತೆ ಸೊರಬ ಟೌನ್‌ ವೀರಶೈವ ಸಮಾಜ ಸಮಿತಿ ಸದಸ್ಯರು, ಜಡೆ ಗ್ರಾಮದ ಯುವ ವೇದಿಕೆ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ