ಆ್ಯಪ್ನಗರ

ರೈತರಿಗೆ ಅನಾವಶ್ಯಕ ಕಿರುಕುಳ ನೀಡಬೇಡಿ

ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಅನಾವಶ್ಯಕ ಕಿರುಕುಳ ನೀಡುವ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಇಲಾಖೆ ಸಿಬ್ಬಂದಿಗೆ ತಿಳಿ ಹೇಳಿ ಎಂದು ಶಾಸಕ ಹರತಾಳು ಹಾಲಪ್ಪ ವಲಯ ಅರಣ್ಯಾಧಿಕಾರಿಗೆ ಸೂಚಿಸಿದರು.

Vijaya Karnataka 6 Mar 2019, 5:00 am
ಹೊಸನಗರ: ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಅನಾವಶ್ಯಕ ಕಿರುಕುಳ ನೀಡುವ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಇಲಾಖೆ ಸಿಬ್ಬಂದಿಗೆ ತಿಳಿ ಹೇಳಿ ಎಂದು ಶಾಸಕ ಹರತಾಳು ಹಾಲಪ್ಪ ವಲಯ ಅರಣ್ಯಾಧಿಕಾರಿಗೆ ಸೂಚಿಸಿದರು.
Vijaya Karnataka Web SMR-5hosp1


ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಸಕ್ರಮೀಕರಣಕ್ಕಾಗಿ ಫಾರಂ 57ರಲ್ಲಿ ಅರ್ಜಿ ಸಲ್ಲಿಸಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಸಾಗುವಳಿ ಭೂಮಿ ತೆರವುಗೊಳಿಸಿದ್ದಾರೆ ಎಂದು ತಾ.ಪಂ. ಸದಸ್ಯ ವೀರೇಶ್‌ ಆಲುವಳ್ಳಿ ಆರೋಪಿಸಿದರು. ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಸಭೆಗೆ ಹಾಜರಾಗದಿರುವ ಕುರಿತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಈ ವರೆಗೆ 2 ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿದೆ. ಮೊದಲ ಹಂತದಲ್ಲಿ 5123 ಹಾಗೂ ಎರಡನೇ ಹಂತದಲ್ಲಿ 2871 ಮಂದಿಗೆ ಕೆಎಫ್‌ಡಿ ಲಸಿಕೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್‌ ಮಾಹಿತಿ ನೀಡಿದರು.

ಬೇಸಿಗೆ ಅವಧಿಯಲ್ಲಿ ಮಂಗನಕಾಯಿಲೆ ಉಲ್ಭಣಿಸುವ ಸಾಧ್ಯತೆ ಹೆಚ್ಚು. ರೈತಾಪಿವರ್ಗ ಮುಂಜಾಗ್ರತಾ ಕ್ರಮ ಅನುಸರಿಸಲು ಸೂಕ್ತ ಮಾಹಿತಿ ನೀಡಿ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ನಿಂದ ಜನತೆ ಬೇಸತ್ತು ಹೋಗಿದ್ದಾರೆ. ಇರುವ ವೇಳೆಯಲ್ಲಿಯೂ ವೋಲ್ಟೇಜ್‌ ಕೊರತೆಯಿಂದ ಸಮಸ್ಯೆಯಾಗುತ್ತಿದೆ, ಸಾಗರ-ಹೊಸನಗರದ 33ಕೆವಿ ವಿದ್ಯುತ್‌ ಮಾರ್ಗವನ್ನು ಮೇಲ್ದರ್ಜೆಗೇರಿಸಿದ ನಂತರವೂ ಸಮಸ್ಯೆ ಮುಂದುವರಿದಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ವಿ.ಜಯರಾಂ ಆಕ್ಷೇಪಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ.76ರಷ್ಟು ಪ್ರಗತಿ ಸಾಧಿಸಲಾಗಿದೆ. ರೂ.1.52 ಕೋಟಿ ಸಾಮಗ್ರಿ ವೆಚ್ಚ ಬಾಕಿ ಇದೆ. ರೂ.1.04 ಕೋಟಿ ಕೂಲಿ ಹಣ ಬಾಕಿ ಇದ್ದು, ಜಾಬ್‌ಕಾರ್ಡ್‌ದಾರರ ಖಾತೆಗೆ ಜಮಾ ಆಗುತ್ತಿದೆ ಎಂದು ತಾಪಂ ಇಒ ಡಾ.ರಾಮಚಂದ್ರ ಮಾಹಿತಿ ನೀಡಿದರು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪಡಿತರ ಚೀಟಿ ಬಂದಿಲ್ಲ. ಅಧಿಕಾರಿಗಳಿಂದ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸದಸ್ಯರು ಆಪಾದಿಸಿದರು. ನಿಯಮಾನುಸಾರ ಹಾಗೂ ಆದ್ಯತೆ ಮೇರೆಗೆ ಕಾರ್ಡ್‌ ವಿತರಣೆ ನಡೆಯುತ್ತಿದೆ ಎಂದು ಆಹಾರ ನಿರೀಕ್ಷ ಕಿ ಸುನಿತಾ ಸಮಜಾಯಿಷಿ ನೀಡಿದರು.

ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಶ್ವೇತಾ ಬಂಡಿ, ಎಸ್‌.ಸುರೇಶ್‌, ತಾ.ಪಂ. ಅಧ್ಯಕ್ಷ ವಾಸಪ್ಪಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಬಿ.ಜಿ.ಚಂದ್ರಮೌಳಿ, ಮತ್ತಿಮನೆ ಸುಬ್ರಮಣ್ಯ, ಶೋಭಾ ಮಂಜುನಾಥ್‌, ರುಕ್ಮಿಣಿರಾಜು, ಅಶ್ವಿನಿ ರಾಜೇಶ್‌, ಶಕುಂತಲಾ ರಾಮಚಂದ್ರ ಮತ್ತಿತರರು ಇದ್ದರು.

------

ಅರಣ್ಯ ರಕ್ಷ ಕರು, ವೀಕ್ಷ ಕರು 'ಮಹಾಪುರುಷ'ರಂತೆ ವರ್ತಿಸುತ್ತಿದ್ದಾರೆ. ಭೂಕಬಳಿಕೆ ಕೇಸು ದಾಖಲಿಸುವುದಾಗಿ ರೈತಾಪಿ ವರ್ಗವನ್ನು ಬೆದರಿಸುತ್ತಿದ್ದಾರೆ. ಕಂದಾಯ ಇಲಾಖೆ 192ಎ ಅಡಿ ರೈತರ ವಿರುದ್ಧ ಪ್ರಕರಣ ದಾಖಲಿಸದಂತೆ ಸಚಿವರೇ ಆದೇಶಿಸಿದ್ದಾರೆ. ಐದು ಎಕರೆ ಒಳಗಿನ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವಂತಿಲ್ಲ. ರೈತರಿಗೆ ಅನಾವಶ್ಯಕವಾಗಿ ತೊಂದರೆ ಕೊಡಬೇಡಿ.
-ಹರತಾಳು ಹಾಲಪ್ಪ, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ