ಆ್ಯಪ್ನಗರ

ಅರಣ್ಯ ಹಕ್ಕು ಅರ್ಜಿ ತಿರಸ್ಕರಿಸದಿರಿ

ಅರಣ್ಯ ಹಕ್ಕು ಕಾಯಿದೆಯಲ್ಲಿ ಗ್ರಾಮಸಭೆಗೆ ವಿಶೇಷÜ ಅಧಿಕಾರ ಇದೆ. ಕಚೇರಿಯಲ್ಲಿ ಕುಳಿತು ಅರಣ್ಯ ಹಕ್ಕು ಕಾಯಿದೆ ಅರ್ಜಿಗಳನ್ನು ಸರಾಸಗಟು ತಿರಸ್ಕಾರಗೊಳಿಸಲು ಕಾಯಿದೆಯಲ್ಲಿ ಅವಕಾಶ ಇಲ್ಲ. ಹಾಗೇ ತಿರಸ್ಕರಿಸಿದರೆ ಅಧಿಕಾರಿಗಳು ಹೊಣೆ ಹೊರಬೇಕಿದ್ದು ಅರ್ಜಿ ತಿರಸ್ಕಾರ ಮಾಡಬಾರದು ಎಂದು ಶಾಸಕ ಆರಗಜ್ಞಾನೇಂದ್ರ ಸೂಚಿಸಿದರು.

Vijaya Karnataka 13 Jun 2019, 5:00 am
ತೀರ್ಥಹಳ್ಳಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಗ್ರಾಮಸಭೆಗೆ ವಿಶೇಷÜ ಅಧಿಕಾರ ಇದೆ. ಕಚೇರಿಯಲ್ಲಿ ಕುಳಿತು ಅರಣ್ಯ ಹಕ್ಕು ಕಾಯಿದೆ ಅರ್ಜಿಗಳನ್ನು ಸರಾಸಗಟು ತಿರಸ್ಕಾರಗೊಳಿಸಲು ಕಾಯಿದೆಯಲ್ಲಿ ಅವಕಾಶ ಇಲ್ಲ. ಹಾಗೇ ತಿರಸ್ಕರಿಸಿದರೆ ಅಧಿಕಾರಿಗಳು ಹೊಣೆ ಹೊರಬೇಕಿದ್ದು ಅರ್ಜಿ ತಿರಸ್ಕಾರ ಮಾಡಬಾರದು ಎಂದು ಶಾಸಕ ಆರಗಜ್ಞಾನೇಂದ್ರ ಸೂಚಿಸಿದರು.
Vijaya Karnataka Web SMR-12TTH1


ಬುಧವಾರ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ನವಮಣಿ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಬುಡಕಟ್ಟು, ಪಾರಂಪರಿಕ ವಾಸಿಗಳ ಅರಣ್ಯ ಹಕ್ಕು ಕಾಯಿದೆ ಅತ್ಯಂತ ಸರಳವಾಗಿದ್ದು ಬೇರೆ ಕಾಯಿದೆಗಳಿಂದ ಭಿನ್ನವಾಗಿದೆ. ಅರಣ್ಯ ವಾಸ, ಸಾಗುವಳಿಯನ್ನು ಗಂಭೀರವಾಗಿ ಗಮನಿಸಿ ಸಂಬಂಧಪಟ್ಟವರಿಗೆ ಹಕ್ಕು ನೀಡಬೇಕೆಂದು ಆರಗ ಹೇಳಿದರು.

ಅರಣ್ಯ ಹಕ್ಕು ಕಾಯಿದೆ ವಿಷಯ ಅರಣ್ಯ ಇಲಾಖೆಯ ಮೂಗಿನ ನೇರಕ್ಕೆ ನಡೆಯುತ್ತಿದೆ. ಈ ಹಿಂದೆ ಎಷ್ಟೋ ಅರ್ಜಿಗಳನ್ನು ಕಳೆಯಲಾಗಿದೆ. ಕಾಯಿದೆ ಕುರಿತು ಗ್ರಾಮ ಅರಣ್ಯ ಸಮಿತಿಗೆ ಸೂಕ್ತ ಮಾಹಿತಿ ಇಲ್ಲದೆ ಅರ್ಜಿ ವಿಲೇವಾರಿ ಆಗುವ ಕ್ರಮ ಸಮಂಜಸವೇ ಎಂದು ತಾ.ಪಂ.ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಚಂದವಳ್ಳಿ ಸೋಮಶೇಖರ್‌, ಬೇಗುವಳ್ಳಿ ಕವಿರಾಜ್‌ ಪ್ರಶ್ನಿಸಿದರು.

ಸಾಕಷ್ಟು ಅರ್ಜಿಗಳ ವಿಲೇವಾರಿಗೆ ಕಾಯಿದೆ ಅನ್ವಯ ಕ್ರಮ ತೆಗೆದುಕೊಳ್ಳಲಾಗಿದೆ. ದೋಷ ಆಗದಂತೆ ಎಚ್ಚರಿಕೆ ವಹಿಸಿ ಗ್ರಾಮ ಅರಣ್ಯ ಸಮಿತಿ ಪದಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಕ್ರಮವಹಿಸಲಾಗುತ್ತದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ಸಭೆಗೆ ಉತ್ತರಿಸಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 500 ರೂ. ಕೊಟ್ಟರೆ ಪಡಿತರಚೀಟಿ ಸಿಗುತ್ತದೆ ಎಂದು ತಾ.ಪಂ.ಸದಸ್ಯರಾದ ಪ್ರಶಾಂತ್‌ಕುಕ್ಕೆ, ಗೀತಾಶೆಟ್ಟಿ ಆರೋಪಿಸಿದರು. ಮಲ್ಲಪ್ಪ ಎಂಬ ಸಿಬ್ಬಂದಿ ವಿರುದ್ಧ ಆರೋಪ ಇದ್ದು ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಶಿರಸ್ತೇದಾರ್‌ ರಾಘವೇಂದ್ರ ಸಭೆಗೆ ಮಾಹಿತಿ ನೀಡಿದರು.

ಬಾಂಡ್ಯಕುಕ್ಕೆ ಸರಕಾರಿ ಶಾಲೆಯಲ್ಲಿ 4 ವರ್ಷದ ಹಿಂದೆ 1ಲಕ್ಷಕ್ಕೂ ಅಧಿಕ ಮೊತ್ತದ ಎಸ್‌ಡಿಎಂಸಿ ಹಣ ದುರುಪಯೋಗಪಡಿಸಿಕೊಂಡ ಶಿಕ್ಷಕನ ವಿರುದ್ಧ ಈವರೆಗೂ ಕಾನೂನು ಕ್ರಮ ಆಗಿಲ್ಲ. 3 ವರ್ಷದಿಂದ ತಾ.ಪಂ.ಸಭೆಯಲ್ಲಿ ಈ ವಿಷಯ ಪ್ರಶ್ನಿಸಲಾಗುತ್ತಿದ್ದು ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶಾಂತ್‌ಕುಕ್ಕೆ ದೂರಿದರು.

ಹಣ ದುರುಪಯೋಗದ ಬಹುತೇಕ ದಾಖಲೆಗಳನ್ನು ಹಿಂದಿನ ಬಿಇಓ ಕೃಷ್ಣಮೂರ್ತಿ ನಾಶಪಡಿಸಿದ್ದಾರೆ. ಡಿಡಿಪಿಐ ಕಚೇರಿಯಲ್ಲಿ ಈಗ ಮುಖ್ಯ ಹುದ್ದೆಯಲ್ಲಿರುವ ಕೃಷ್ಣಮೂರ್ತಿ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಆಗದಂತೆ ರಕ್ಷಿಸುತ್ತಿದ್ದಾರೆ ಎಂದು ಪ್ರಶಾಂತ್‌, ಸಾಲೇಕೊಪ್ಪ ರಾಮಚಂದ್ರ ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಕಾರದ 35 ಲಕ್ಷ ರೂ. ದುರ್ಬಳಕೆ ಮಾಡಿಕೊಂಡ ವಾರ್ಡನ್‌ ವಿರುದ್ಧ ಕಾನೂನು ಕ್ರಮ ಜರುಗಿಲ್ಲ ಎಂದು ಚಂದವಳ್ಳಿ ಸೋಮಶೇಖರ್‌ ಹೇಳಿದರು. ಶಿಕ್ಷಕ, ವಾರ್ಡನ್‌ ವಿರುದ್ಧ 1 ತಿಂಗಳ ಒಳಗೆ ಕ್ರಮ ತೆಗೆದುಕೊಂಡು ವರದಿ ನೀಡಬೇಕೆಂದು ಆರಗಜ್ಞಾನೇಂದ್ರ ಸೂಚಿಸಿದರು.

ಮೇಳಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಹೆಚ್ಚು ಶಿಕ್ಷಕರನ್ನು ನೇಮಿಸಬೇಕು. ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಶಿಕ್ಷಕರ ಕುರಿತು ಮಾಹಿತಿ ನೀಡಬೇಕು. ಶಿಕ್ಷಕ ಮಹಾಬಲೇಶ್ವರ ಹೆಗಡೆ ಹಲವು ವರ್ಷಗಳಿಂದ ನಿಯೋಜನೆ ಮೇಲಿರುವುದು ಏಕೆ ಎಂದು ತಾ.ಪಂ.ಸದಸ್ಯ ಕೆಳಕೆರೆ ದಿವಾಕರ್‌ ಪ್ರಶ್ನಿಸಿದರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಯಶೋಧ, ಇ.ಓ. ಧನರಾಜ್‌ ಮತ್ತಿತರರು ಇದ್ದರು.

ಕಾಡಾನೆ ಹಿಡಿಯುವುದು ಯಾವಾಗ ? : ಆಗುಂಬೆಯಲ್ಲಿ ಒಂಟಿ ಕಾಡಾನೆ ಹಾವಳಿ ಮತ್ತೆ ಆರಂಭವಾಗಿದೆ. ಜನರು ಕಾಡಾನೆ ಕಾಟಕ್ಕೆ ಭಯಗೊಂಡಿದ್ದಾರೆ. ಕಾಡಾನೆ ಹಿಡಿಯುವುದು ಯಾವಾಗ ಎಂದು ಖಚಿತವಾಗಿ ಹೇಳಿ ಎಂದು ತಾ.ಪಂ.ಸದಸ್ಯೆ ವೀಣಾಗಿರೀಶ್‌ ಆಗ್ರಹಿಸಿದರು. ಕಾಡಾನೆ ಸ್ಥಳಾಂತರ ಸಂಬಂಧ ವಾರದಲ್ಲಿ ಬಂಡೀಪುರ ವನ್ಯಜೀವಿ ವಿಭಾಗದಿಂದ ತಜ್ಞರು ಆಗುಂಬೆಗೆ ಭೇಟಿ ನೀಡಲಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ ಎಂದು ಆರಗ ಜ್ಞಾನೇಂದ್ರ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ