ಆ್ಯಪ್ನಗರ

ಮಕ್ಕಳ ಹಕ್ಕನ್ನು ಮೊಟಕುಗೊಳಿಸಬೇಡಿ: ಆಶಯ ಕಬಸೆ

Vijaya Karnataka 13 Jan 2019, 5:00 am
ಸಾಗರ: ಭವಿಷ್ಯದ ಪ್ರಜೆಗಳ ಪ್ರಜ್ಞೆ ರೂಪಿಸುವಲ್ಲಿ ಆಳುವವರು ಮತ್ತಷ್ಟು ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎಂದು ತಾಲೂಕು ಆರನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆಶಯ ಕಬಸೆ ಹೇಳಿದರು.
Vijaya Karnataka Web SMR-12SGR2


ಇಲ್ಲಿನ ವರದಹಳ್ಳಿ ರಸ್ತೆಯಲ್ಲಿನ ವನಶ್ರೀ ಶಾಲಾವರಣದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್‌, ಸಾರ್ವಜನಿಕ ಶಿಕ್ಷ ಣ ಇಲಾಖೆ, ವನಶ್ರೀ ವಿದ್ಯಾಸಂಸ್ಥೆ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಆರನೇ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಭಾಷಣ ಮಾಡಿ ಅವರು ಮಾತನಾಡಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಕೇವಲ ಘೋಷಣೆಯಾಗಿ ಮಾತ್ರ ಉಳಿದಿದೆ. ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಲ್ಲಿ ಇಂದಿನ ಆಳುವವರ ಕೊಡುಗೆ ಬಹಳ ಮುಖ್ಯವಾಗುತ್ತದೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಿ, ನಮ್ಮ ಬೇಕುಬೇಡಗಳನ್ನು ನಿರ್ಲಕ್ಷ ್ಯ ಮಾಡುವ ಕೆಲಸ ನಡೆಯುತ್ತಿರುವುದು ಭವಿಷ್ಯದಲ್ಲಿ ದುರಂತಕ್ಕೆ ಕಾರಣವಾಗುತ್ತದೆ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಶ್ರಾವ್ಯ ಸಾಗರ್‌, ಸಾಹಿತ್ಯ, ಸಂಗೀತ, ಕಲೆಗಳ ಆಸಕ್ತಿಯನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಭವಿಷ್ಯದಲ್ಲಿನ ಸಮಾಜವನ್ನು ಸುಸಂಸಕೃತ ಸಮಾಜವನ್ನಾಗಿಸುವ ಹೊಣೆಗಾರಿಕೆಯನ್ನು ಹಿರಿಯರು ಸಮರ್ಪಕವಾಗಿ ನಿಭಾಯಿಸಬೇಕಾಗಿದೆ. ಯೋಚಿಸುವ, ಪ್ರತಿಸ್ಪಂದಿಸುವ ಹಾಗೂ ಅನುಭವಿಸುವ ಶಕ್ತಿಯನ್ನು ಸಾಹಿತ್ಯ ನೀಡುತ್ತದೆ. ಗೀಚಿದ್ದೆಲ್ಲವೂ ಸಾಹಿತ್ಯವಾಗದೆ ಇರಬಹುದು. ಆದರೆ ಗೀಚುವ ಹವ್ಯಾಸದಿಂದ ನಮ್ಮೊಳಗೊಬ್ಬ ಸಾಹಿತಿ ಹುಟ್ಟ ಬಹುದು. ಮಕ್ಕಳ ಸಾಹಿತ್ಯ ಸಮ್ಮೇಳನಗಳು ಅನೇಕ ಹೊಸ ಪ್ರತಿಭೆಗಳು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅವಕಾಶ ಕಲ್ಪಿಸುತ್ತವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್‌ ಆಶಯ ಭಾಷಣ ಮಾಡಿದರು. ವನ ಶ್ರೀ ಶಾಲೆಯ ವಿದ್ಯಾರ್ಥಿನಿ ವಿ. ಪುಣ್ಯವತಿ ಅಧ್ಯಕ್ಷ ತೆ ವಹಿಸಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌.ಬಿಂಬ , ಸಾಹಿತಿ ಜಿ.ನಾಗೇಶ್‌, ವನಶ್ರೀ ಸಂಸ್ಥಾಪಕ ಎಚ್‌.ಪಿ.ಮಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎನ್‌.ಹೆಚ್‌.ತಿಮ್ಮಪ್ಪ , ಪ್ರೌಢಶಾಲಾ ಸಹ ಶಿಕ್ಷ ಕರ ಸಂಘದ ಅಧ್ಯಕ್ಷ ಸಿ. ಚಂದ್ರಶೇಖರ್‌ , ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್‌ ಹಿರೇನೆಲ್ಲೂರು, ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಕಸ್ತೂರಿ ಇನ್ನಿತರರು ಹಾಜರಿದ್ದರು. ಶ್ವೇತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಲ್‌. ಸಾಧ್ವಿ ಸ್ವಾಗತಿಸಿದರು. ಪರಮೇಶ್ವರ ಕರೂರು ಪ್ರಾಸ್ತಾವಿಕ ಮಾತನಾಡಿದರು. ಅಶೋಕ್‌ ವಂದಿಸಿದರು. ಭೂಮಿಕಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ