ಆ್ಯಪ್ನಗರ

ಪ್ರಕಾಶ್‌ ರೈ ವಿರುದ್ಧ ಸ್ಪರ್ಧೆ ಬೇಡ

ಜನಪರ ಕಾಳಜಿವುಳ್ಳ ಚಿತ್ರನಟ ಪ್ರಕಾಶ್‌ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಇವರ ವಿರುದ್ಧ ಯಾವುದೇ ರಾಜಕೀಯ ಪಕ್ಷವು ಅಭ್ಯರ್ಥಿಗಳನ್ನು ಹಾಕದೆ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ದೇಶಕ್ಕಾಗಿ ನಾವು ಬಳಗದ ಪ್ರಮುಖರಾದ ಕೆ.ಎಲ್‌.ಅಶೋಕ್‌ ಮನವಿ ಮಾಡಿದರು.

Vijaya Karnataka 10 Feb 2019, 5:00 am
ಶಿವಮೊಗ್ಗ: ಜನಪರ ಕಾಳಜಿವುಳ್ಳ ಚಿತ್ರನಟ ಪ್ರಕಾಶ್‌ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಇವರ ವಿರುದ್ಧ ಯಾವುದೇ ರಾಜಕೀಯ ಪಕ್ಷವು ಅಭ್ಯರ್ಥಿಗಳನ್ನು ಹಾಕದೆ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ದೇಶಕ್ಕಾಗಿ ನಾವು ಬಳಗದ ಪ್ರಮುಖರಾದ ಕೆ.ಎಲ್‌.ಅಶೋಕ್‌ ಮನವಿ ಮಾಡಿದರು.
Vijaya Karnataka Web dont compete against prakash rai
ಪ್ರಕಾಶ್‌ ರೈ ವಿರುದ್ಧ ಸ್ಪರ್ಧೆ ಬೇಡ


ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ಲೋಕಸಭೆಯಲ್ಲಿ ಪ್ರಜ್ಞಾವಂತ, ವಿಚಾರವಂತರು ಇರಬೇಕೆಂಬ ಉದ್ದೇಶದಿಂದ ಪ್ರಕಾಶ್‌ ರೈ ಅವರನ್ನು ಬೆಂಬಲಿಸುತ್ತಿದ್ದೇವೆ. ಸುಮಾರು 200 ಸಂಘಟನೆಗಳು ಮತ್ತು 400ಕ್ಕೂ ಹೆಚ್ಚು ಲೇಖಕರು ಸೇರಿಕೊಂಡು ದೇಶಕ್ಕಾಗಿ ನಾವು ಎಂಬ ಗೆಳೆಯರ ಬಳಗ ರಚಿಸಿಕೊಂಡಿದ್ದೇವೆ ಎಂದರು.

ಪ್ರಕಾಶ್‌ ರೈ ಈಗಾಗಲೇ ವೃತ್ತಿ ಬದುಕಿನ ಜತೆಗೆ ಸಾಮಾಜಿಕ ಜವಾಬ್ದಾರಿ ಹೊತ್ತಿದ್ದಾರೆ. ಅನೇಕ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲಕ್ಷಿತ ಸಮುದಾಯದ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಪ್ರಜಾತಂತ್ರದ ಆಶಯ ಎತ್ತಿ ಹಿಡಿದು ಜನರಲ್ಲಿ ಎಚ್ಚರ ಮೂಡಿಸಲು ರಾಜ್ಯಾದ್ಯಂತ ಸಮಾವೇಶಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಬೆಂಬಲಿಸುವ ಸಲುವಾಗಿ ಇತರ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬಾರದು ಎಂದು ಮನವಿ ಮಾಡಿದರು.

ರಾಜಕಾರಣ ಇಂದು ಜಾತಿ, ಹಣ, ಹೆಂಡ, ಧರ್ಮಗಳಿಂದ ಕೂಡಿದೆ. ಬಂಡವಾಳಿಗರಿಗೆ ರಕ್ಷಣೆ ದೊರಕುತ್ತಿದೆ. ಸ್ವಾರ್ಥ ಹಿತಾಸಕ್ತಿ, ಅಧಿಕಾರ ರಾಜಕಾರಣ, ಹಪಾಹಪಿತನ ಇವೆಲ್ಲವನ್ನು ಮೀರಿದ ರಾಜಕಾರಣ ಬೇಕಾಗಿದೆ. ಪ್ರಜಾಪ್ರಭುತ್ವ ರಕ್ಷಣೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್‌ ರೈ ಅವರಂತ ಸದಾಶಯವುಳ್ಳ ವ್ಯಕ್ತಿಗಳನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ಅಬ್ದುಲ್‌ ವಹಾಬ್‌, ಶಿವಕುಮಾರ್‌, ಹೇಮಂತ್‌, ಆರ್‌.ಕುಮಾರ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ