ಆ್ಯಪ್ನಗರ

ಆರೋಗ್ಯ ನಿರ್ಲಕ್ಷ್ಯ ಸಲ್ಲದು: ಎಸಿ

ಇಲಾಖೆ ಕರ್ತವ್ಯದ ಒತ್ತಡದಿಂದ ಆರೋಗ್ಯದ ನಿರ್ಲಕ್ಷ್ಯ ಸಲ್ಲದು, ಕಾಲಕಾಲಕ್ಕೆ ಸೂಕ್ತ ತಪಾಸಣೆ ಅಗತ್ಯ ಎಂದು ಉಪವಿಭಾಗಾಧಿಕಾರಿ ನಾಗರಾಜ್‌ ಆರ್‌. ಸಿಂಗ್ರೇರ್‌ ಹೇಳಿದರು.

Vijaya Karnataka 26 Jun 2018, 5:00 am
ಸಾಗರ : ಇಲಾಖೆ ಕರ್ತವ್ಯದ ಒತ್ತಡದಿಂದ ಆರೋಗ್ಯದ ನಿರ್ಲಕ್ಷ್ಯ ಸಲ್ಲದು, ಕಾಲಕಾಲಕ್ಕೆ ಸೂಕ್ತ ತಪಾಸಣೆ ಅಗತ್ಯ ಎಂದು ಉಪವಿಭಾಗಾಧಿಕಾರಿ ನಾಗರಾಜ್‌ ಆರ್‌. ಸಿಂಗ್ರೇರ್‌ ಹೇಳಿದರು.
Vijaya Karnataka Web dont health negligence ac
ಆರೋಗ್ಯ ನಿರ್ಲಕ್ಷ್ಯ ಸಲ್ಲದು: ಎಸಿ


ಇಲ್ಲಿನ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಸುನೈನ ಆಫ್ಟಿಕಲ್ಸ್‌ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಶಿಬಿರವನ್ನು ತಮ್ಮ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾಗದರಹಿತ ಕಚೇರಿ ಯೋಜನೆಯಿಂದ ಅಧಿಕಾರಿ, ಸಿಬ್ಬಂದಿಗೆ ಕಂಪ್ಯೂಟರ್‌ ಬಳಕೆ ಅನಿವಾರ‍್ಯ. ಮೊಬೈಲ್‌ ಬಳಕೆ ಸಹ ಕಣ್ಣಿನ ದೋಷಕ್ಕೆ ಕಾರಣವಾಗಿದೆ. ಆರೋಗ್ಯಕರ ನಿದ್ರೆ ಸಹ ದೊರಕದೆ ಸಹಜವಾಗಿ ದೃಷ್ಟಿದೋಷ ಉಂಟಾಗುತ್ತಿದ್ದು, ಕಣ್ಣಿನ ರಕ್ಷ ಣೆಯ ಕಾಳಜಿ ಅಗತ್ಯ ಎಂದರು.

ಪ್ರಭಾರಿ ತಹಸೀಲ್ದಾರ್‌ ಟಿ.ಪರಮೇಶ್ವರ ಮಾತನಾಡಿ, ಸರಕಾರಿ ಕೆಲಸದಲ್ಲಿ ಒತ್ತಡ ಸಹಜ. ಒತ್ತಡದ ನಡುವೆಯೂ ನಮ್ಮ ಆರೋಗ್ಯ ರಕ್ಷ ಣೆ ಮಾಡಿಕೊಳ್ಳುವುದು ಜವಾಬ್ದಾರಿ ಸಹ. ಕಾಲಕಾಲಕ್ಕೆ ನೌಕರರು ಆರೋಗ್ಯ ತಪಾಸಣೆಗೆ ಒಳಪಡಿಸಿಕೊಳ್ಳುತ್ತಿರಬೇಕು ಎಂದರು.

ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕಲ್ಲಪ್ಪ ಮೆಣಸಿನಾಳ್‌, ಶಿರಸ್ತೆದಾರ್‌ ನಾಗರಾಜ್‌, ಸುನೈನ ಆಫ್ಟಿಕಲ್‌ನ ಡಾ. ರಘು, ಸೈಯದ್‌ ಮುಬಾರಕ್‌ ಹಾಜರಿದ್ದರು. ಮಂಜುನಾಥ್‌ ಸ್ವಾಗತಿಸಿ, ಆನಂದ ನಾಯ್ಕ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ