ಆ್ಯಪ್ನಗರ

‘ಆತ್ಮವಿಶ್ವಾಸ ತುಂಬುವ ಶಕ್ತಿ ರಂಗಭೂಮಿಗಿದೆ’

ಒಳ್ಳೆಯ ಸಾಹಿತಿ, ಒಳ್ಳೆಯ ಕಲಾವಿದ ಯಾವಾಗಲೂ ವಿರೋಧ ಪಕ್ಷ ವಾಗಿಯೇ ಇರುತ್ತಾರೆ ಎಂದು ಚಿತ್ರನಟ ಮಂಡ್ಯ ರಮೇಶ್‌ ಹೇಳಿದರು.

Vijaya Karnataka 3 Dec 2018, 5:00 am
ಶಿವಮೊಗ್ಗ: ಒಳ್ಳೆಯ ಸಾಹಿತಿ, ಒಳ್ಳೆಯ ಕಲಾವಿದ ಯಾವಾಗಲೂ ವಿರೋಧ ಪಕ್ಷ ವಾಗಿಯೇ ಇರುತ್ತಾರೆ ಎಂದು ಚಿತ್ರನಟ ಮಂಡ್ಯ ರಮೇಶ್‌ ಹೇಳಿದರು.
Vijaya Karnataka Web SMR-2smg1


ನಗರದ ಕುವೆಂಪು ರಂಗಮಂದಿರಲ್ಲಿ ಶನಿವಾರ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ರಾಷ್ಟ್ರೀಯ ರಂಗೋತ್ಸವ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ಟೀಕೆಯಿಂದ, ವಿಮರ್ಶೆಯಿಂದ ಕ್ರಿಯಾಶೀಲತೆ ಇಮ್ಮಡಿಯಾಗುತ್ತದೆ. ಎಡಬಲ ಬದಿಗಿಟ್ಟು ಎಲ್ಲರನ್ನೂ ಜತೆಗೆ ಕರೆದೊಯ್ಯುವ ಶಕ್ತಿ ಅಕಾಡೆಮಿಗೆ ಇದೆ. ಆತ್ಮವಿಶ್ವಾಸ ಇಲ್ಲದವರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ವಿಶ್ವಾಸ, ಧೈರ್ಯ, ನಂಬಿಕೆ ಬೆಳೆಸುವ ಶಕ್ತಿ ರಂಗಭೂಮಿಗೆ ಇದೆ ಎಂದರು.

ದೇಶದಲ್ಲಿ ಓದಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ಓದಿನಾಚೆ ಬದುಕುವ ರೀತಿ, ಬೆರೆಯುವ ರೀತಿ ಕಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸಮಾಜದಲ್ಲಿ ಎಲ್ಲರ ಜತೆಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವುದೇ ನಿಜವಾದ ಕಲಿಕೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಮಾತನಾಡಿ, ಸಾಂಸ್ಕೃತಿಕ ಲೋಕದ ನಂಟಿನಿಂದ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಆಲೋಚನೆ, ಚಿಂತನೆಗೆ ಬದ್ಧತೆ ನೀಡಿದ್ದು ಸಾಂಸ್ಕೃತಿಕ ಕ್ಷೇತ್ರ. ಇತ್ತೀಚೆಗೆ ಯುವ ಜನತೆ ಗಾಂಜಾದಂತ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದಲ್ಲಿ ಯುವಕರು ದಾರಿ ತಪ್ಪುವುದು ಕಡಿಮೆ ಆಗಲಿದೆ ಎಂದರು.

ರಂಗಾಯಣ ನಿರ್ದೇಶಕ ಎಂ.ಗಣೇಶ್‌ ಮಾತನಾಡಿ, ಸಾಂಸ್ಕೃತಿಕ ಸಂಸ್ಥೆಗಳ ನಡುವೆ ಸೇತುವೆ ಇರಬೇಕು. ಇದು ಜನರನ್ನು ಒಳಗೊಳ್ಳಲು ಅನುಕೂಲ ಆಗಲಿದೆ. 5, 6ರಂದು ಶಿವಮೊಗ್ಗದಲ್ಲಿ ಶ್ರೀರಾಮಾಯಣ ದರ್ಶನಂ ಪ್ರದರ್ಶನಗೊಳ್ಳಲಿದೆ. ವಿಶ್ವಕವಿ ಕುವೆಂಪು ಅವರ ಮಹಾಕಾವ್ಯವನ್ನು ರಂಗದ ಮೇಲೆ ತಂದಿರುವುದು ರಂಗಭೂಮಿ ಹಿರಿಮೆ ಎಂದರು. ನಾಟಕ ಅಕಾಡೆಮಿ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಅಕಾಡೆಮಿ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ. ಹಳೇಯ ಸಾಧಕರನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಲುವಾಗಿ ಡಾಕ್ಯುಮೆಂಟೇಷನ್‌ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ಚಟುವಟಿಕೆಗಳು ನಡೆಯುತ್ತಿವೆ. ಈ ಕೆಲಸಗಳಿಗೆ ಮೌಲ್ಯಯುತ ಗುರಿ ಇಲ್ಲ. ಈ ಹಿನ್ನೆಲೆಯಲ್ಲಿ ನಾಟಕ ರಚನಾ ಸ್ಪರ್ಧೆ ಮಾಡುತ್ತಿದ್ದೇವೆ. ಸಂಶೋಧನಾ ಪ್ರವೃತ್ತಿ ಹೆಚ್ಚಿಸಲು ಫೆಲೋಶಿಪ್‌ ಯೋಜನೆ ಮಾಡಿದ್ದೇವೆ. ಆಯ್ಕೆಯಾದ ಹತ್ತು ಜನರಿಗೆ ಒಂದು ಲಕ್ಷ ರೂಪಾಯಿ ಫೆಲೋಷಿಪ್‌ ಕೊಡುತ್ತಿದ್ದೇವೆ. ಹೊಸ ಸೃಷ್ಟಿಯತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದರು. ಕಲಾವಿದರ ಒಕ್ಕೂಟದ ಹಾಲಸ್ವಾಮಿ, ನಾಟಕ ಅಕಾಡೆಮಿಯ ಸದಸ್ಯರಾದ ಪ್ರತಿಭಾ ಎಂ.ಸಾಗರ್‌ ಮತ್ತಿತರರು ಇದ್ದರು.

ಇಡೀ ದೇಶದಲ್ಲಿ ರಂಗಭೂಮಿ ಅತಿ ಹೆಚ್ಚು ಕ್ರಿಯಾಶೀಲವಾಗಿ ಇರುವುದು ಕರ್ನಾಟಕದಲ್ಲಿ. ಇಲ್ಲಿ ಹವ್ಯಾಸಿಗಳು ವೃತ್ತಿಪರತೆ ರೂಢಿಸಿಕೊಂಡು ಕೆಲಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ರಾಜ್ಯಕ್ಕೆ ಸೂಕ್ಷ ್ಮತೆ ಚಳವಳಿಗಳನ್ನು ಕೊಟ್ಟ ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಬರೆದ ವಿಮರ್ಶೆ ಪ್ರಕಟಿಸುವ ಮೂಲಕ ರಂಗಭೂಮಿಗೆ ಕೊಟ್ಟ ಪ್ರೋ್ರತ್ಸಾಹ ಅಭಿನಂದನೀಯ.

-ಮಂಡ್ಯ ರಮೇಶ್‌, ಚಿತ್ರನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ