ಆ್ಯಪ್ನಗರ

ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪೌರಾಯುಕ್ತ

ದಸರಾ ನಾಡಹಬ್ಬ ಅಂಗವಾಗಿ ನಗರಸಭೆ ಹಮ್ಮಿಕೊಂಡಿರುವ ಸಾಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ6ನೇ ದಿನ ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿಮಹಿಳಾ ದಸರಾ ಕ್ರೀಡಾಕೂಟವನ್ನು ಚೆಂಡು ಎಸೆಯುವ ಮೂಲಕ ಪೌರಾಯುಕ್ತ ಮನೋಹರ್‌ ಚಾಲನೆ ನೀಡಿದರು.

Vijaya Karnataka 5 Oct 2019, 5:00 am
ಭದ್ರಾವತಿ: ದಸರಾ ನಾಡಹಬ್ಬ ಅಂಗವಾಗಿ ನಗರಸಭೆ ಹಮ್ಮಿಕೊಂಡಿರುವ ಸಾಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ6ನೇ ದಿನ ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿಮಹಿಳಾ ದಸರಾ ಕ್ರೀಡಾಕೂಟವನ್ನು ಚೆಂಡು ಎಸೆಯುವ ಮೂಲಕ ಪೌರಾಯುಕ್ತ ಮನೋಹರ್‌ ಚಾಲನೆ ನೀಡಿದರು.
Vijaya Karnataka Web drive to the womens dussehra games
ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪೌರಾಯುಕ್ತ


ಬಳಿಕ ಮಾತನಾಡಿದ ಅವರು, ಸಮಾಜದಲ್ಲಿಮಹಿಳೆಯರಿಗೆ ಹೆಚ್ಚು ಗೌರವ ನೀಡುವುದರ ಜತೆಗೆ ಸಾಂಸ್ಕೃತಿಕವಾಗಿ ವಿಶೇಷ ಕಾರ್ಯಕ್ರಮಗಳಲ್ಲಿಆದ್ಯತೆ ನೀಡಲು ಮಹಿಳಾ ದಸರಾ, ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳ ಕಲಾ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕ್ರೀಡಾಕೂಟದಲ್ಲಿಹಳೇನಗರದ ಮಹಿಳಾ ಸೇವಾ ಸಮಾಜ, ಶಾಶ್ವತಿ ಮಹಿಳಾ ಸಮಾಜ, ಶ್ರೀಕಾಲಭೈರವೇಶ್ವರ ಚಾರಿಟಬಲ್‌ ಟ್ರಸ್ಟ್‌ ಮಹಿಳಾ ಘಟಕ, ವೀರಶೈವ ಮಹಿಳಾ ಸಮಾಜ, ಜೇಸಿ ಮಹಿಳಾ ಘಟಕ, ಪತಂಜಲಿ ಯೋಗ ಕೇಂದ್ರ, ಕರಾವಳಿ ಮಹಿಳಾ ಸಂಘ, ಕೇರಳ ಮಹಿಳಾ ಸಮಾಜಂ ಸೇರಿದಂತೆ ಅನೇಕ ಮಹಿಳಾ ಘಟಕಗಳ ನೂರಾರು ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ನಗರಸಭೆಯ ಮಾಜಿ ಅಧ್ಯಕ್ಷರಾದ ಹಾಲಮ್ಮ, ವಿಶಾಲಾಕ್ಷಿ, ಲೀಲಾವತಿ, ಸುಧಾಮಣಿ, ಉಪಾಧ್ಯಕ್ಷರಾದ ವಿದ್ಯಾಶ್ರೀ, ಮಹಾದೇವಿ, ಮಾಜಿ ಸದಸ್ಯರಾದ ಲಕ್ಷಿತ್ರ್ಮೕದೇವಿ, ಶೋಭಾ, ಅಧಿಕಾರಿಗಳಾದ ಸಯಾದ್‌ ಮಹಮೂದ್‌ ಅಲಿ, ರುದ್ರೇಗೌಡ, ಸುವಾಸಿನಿ, ಸುನಿತಾಕುಮಾರಿ, ರಾಜಕುಮಾರ್‌, ಆಂಜನೇಯಸ್ವಾಮಿ, ಮುಖಂಡರಾದ ನರಸಿಂಹಾಚಾರ್‌, ಜಿ.ರಮಾಕಾಂತ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ