ಆ್ಯಪ್ನಗರ

ವಾಹನ ಚಾಲಕ, ಮಾಲೀಕರಿಗೆ ಜಾಗೃತಿ ಮುಖ್ಯ

ವಾಹನಗಳ ಮಾಲೀಕರು ಹಾಗೂ ಚಾಲಕರು ಸಾರಿಗೆ ನಿಯಮಗಳನ್ನು ಮೀರಿದಲ್ಲಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಚಂದನ ಗೋಪಾಲ್‌ ಹೇಳಿದರು.

Vijaya Karnataka 29 May 2019, 5:00 am
ಸೊರಬ: ವಾಹನಗಳ ಮಾಲೀಕರು ಹಾಗೂ ಚಾಲಕರು ಸಾರಿಗೆ ನಿಯಮಗಳನ್ನು ಮೀರಿದಲ್ಲಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಚಂದನ ಗೋಪಾಲ್‌ ಹೇಳಿದರು.
Vijaya Karnataka Web SMR-28srbp3


ಖಾಸಗಿ ಬಸ್‌ ನಿಲ್ದಾಣ ಸಮೀಪ ಮಂಗಳವಾರ ಪೊಲೀಸ್‌ ಇಲಾಖೆಯಿಂದ ಆಟೊ, ಟ್ಯಾಕ್ಸಿ ಮತ್ತು ಗೂಡ್ಸ್‌ ವಾಹನ ಚಾಲಕರು ಹಾಗೂ ಮಾಲೀಕರಿಗೆ ಜಾಗೃತಿ ಮೂಡಿಸಿ, ಕಾನೂನಿನ ಅರಿವಿನ ಕುರಿತು ಕರಪತ್ರ ವಿತರಿಸಿ ಅವರು ಮಾತನಾಡಿದರು.

ಎಲ್ಲ ವಾಹನಗಳ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಅತಿಯಾದ ವೇಗದ ಚಾಲನೆ ಮಾಡಬಾರದು. ಮದ್ಯ ಸೇವಿಸಿ ವಾಹನ ಚಲಾಯಿಸಬಾರದು. ವಯಸ್ಕರಲ್ಲದವರಿಗೆ ವಾಹನಗಳನ್ನು ಚಲಾಯಿಸಲು ನೀಡಿದರೆ ವಾಹನಗಳ ಮಾಲೀಕರಿಗೆ ಕಾನೂನ್ಮಾತಕವಾಗಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸಾರಿಗೇತರ ವಾಹನದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇಂತಹ ಘಟನೆಗಳು ಕಂಡು ಬಂದರೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಅಸುರಕ್ಷಿತವಾಗಿ ಶಾಲಾ ಮಕ್ಕಳನ್ನು ಕೊಂಡೊಯ್ಯುವುದು ಸಹ ಅಪರಾಧ ಎಂದರು.

ಪಿಎಸ್‌ಐ ಗುರುರಾಜ ಮೈಲಾರ, ಸಿಬ್ಬಂದಿ ಎಚ್‌.ಪಿ.ಪ್ರವೀಣಕುಮಾರ್‌, ಸಲ್ಮಾನ್‌, ಜಗದೀಶ್‌ ಬೇಲೂರಪ್ಪನವರ್‌, ಮನೋಹರ್‌ ಸೇರಿದಂತೆ ವಾಹನ ಚಾಲಕರು ಮತ್ತು ಮಾಲೀಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ