ಆ್ಯಪ್ನಗರ

ಶಿವಮೊಗ್ಗ: ಡೈನಾಮೈಟ್ ಸ್ಫೋಟ, ವಿಧ್ವಂಸಕ ಕೃತ್ಯಕ್ಕೆ ವಿಷವಾದ ಜೀವನದಿ!

ಮಲೆನಾಡಿನ ಪ್ರಮುಖ ನದಿಗಳಲ್ಲಿ ಮೀನು ಶಿಕಾರಿಗಾಗಿ ಡೈನಾಮೈಟ್ ಮದ್ದಿನ ಸ್ಫೋಟ ಹೆಚ್ಚಿಸುತ್ತಿದ್ದು ನದಿ ನೀರಿನ ಹೊಂಡಗಳು ಕುಕೃತ್ಯದ ಸುಳಿಗೆ ಸಿಲುದ್ದು, ಸಾವಿರಾರು ಜಲಚರಗಳ ಜೀವಸಂತತಿ ನಾಶವಾಗುತ್ತಿದೆ.

Vijaya Karnataka Web 16 Apr 2020, 4:51 pm
ರಾಘವೇಂದ್ರ ಮೇಗರವಳ್ಳಿ
Vijaya Karnataka Web water


ತೀರ್ಥಹಳ್ಳಿ:
ಮಲೆನಾಡಿನ ಪ್ರಮುಖ ನದಿಗಳಲ್ಲಿ ಮೀನು ಶಿಕಾರಿಗಾಗಿ ಡೈನಾಮೈಟ್ ಮದ್ದಿನ ಸ್ಫೋಟ, ಗೇರೆಣ್ಣೆ ಕರಡುವ ಕೃತ್ಯ ಹೆಚ್ಚಾಗಿದೆ. ತಾಲೂಕಿನ ತುಂಗೆ, ಮಾಲತಿ, ಕುಶಾವತಿ ನದಿ ನೀರಿನ ಹೊಂಡಗಳು ಕುಕೃತ್ಯದ ಸುಳಿಗೆ ಸಿಲುದ್ದು, ಸಾವಿರಾರು ಜಲಚರಗಳ ಜೀವಸಂತತಿ ನಾಶವಾಗುತ್ತಿದೆ.

ಡೈನಾಮೈಟ್, ಗೇರೆಣ್ಣೆ ಕರಡುವ ಕೃತ್ಯ ಜಲಚರ ಜೀವಕ್ಕೆ ಮಾತ್ರ ಅಪಾಯ ತರದೆ ಮಾನವ ಜೀವಕ್ಕೂ ಕುತ್ತು ತಂದಿದೆ. ಅಪಾಯ ಕಾರಿ ಡೈನಾಮೈಟ್, ಗೇರಣ್ಣೆ ನಿರಂತರ ಬಳಕೆಯಿಂದಾಗಿ ನದಿಗಳ ಒಡಲು ವಿಷಕಾರಿಯಾಗುತ್ತಿದೆ. ಪಟ್ಟಣದ ತುಂಗಾನದಿ ತೀರ ಡೈನಾಮೈಟ್ ಸ್ಫೋಟದಿಂದ ತತ್ತರಿಸಿದರೆ ಮಾಲತಿ ನದಿಯ ಕುಡಿಯುವ ನೀರಿನ ಹೊಂಡ ಗಳಿಗೆ ಗೇರೆಣ್ಣೆ ಕರಡಲಾಗುತ್ತಿದೆ. ಮೀನು ಶಿಕಾರಿಗೆ ಅತೀ ಸುಲಭವಾಗಿ ಡೈನಾಮೈಟ್, ಗೇರೆಣ್ಣೆ ಬಳಸಿ ವಿಧ್ವಂಸಕ ಕೃತ್ಯನಡೆಸಲಾಗುತ್ತಿದೆ.

ತುಂಗಾನದಿಯ ಬಾಳಗಾರು, ಬುಕ್ಲಾಪುರ, ಬಾಳೇಬೈಲು, ದೂರ್ವಾ ಸಪುರ ಭಾಗದಲ್ಲಿ ಡೈನಾಮೈಟ್ ಸ್ಫೋಟಿಸಲಾಗು ತ್ತದೆ. ಮಾಲತಿ ನದಿಯ ಮೇಗರವಳ್ಳಿ, ನಾಲೂರು, ಶೀರೂರು, ಚಂಗಾರು, ಅರೇ ಹಳ್ಳಿ ಭಾಗದಲ್ಲಿಗೇರಣ್ಣೆ ಕರಡಲಾಗುತ್ತಿದೆ.

ಗಾಳಿಪಟ ಹಾರಿಸುವ ಕೋತಿ..., ಪ್ರಾಣಿಗಳಿಂದ ಕಲಿಯಬೇಕು ಈ ಬುದ್ಧಿ...

ನದಿ ಜೀವಕ್ಕೆ ಕುತ್ತು: ಡೈನಾಮೈಟ್ ಮದ್ದು ಸಾಮಗ್ರಿ ದುಬಾರಿ ದರಕ್ಕೆ ಸುಲಭವಾಗಿ ಕೈಗೆ ಸಿಗುತ್ತದೆ. ಎನ್‌ಆರ್‌ಪುರ, ಕೊಪ್ಪ, ತಾಲೂಕಿನ ಮೇಲಿನ ಕುರುವಳ್ಳಿ, ಕಮ್ಮರಡಿ, ಪಟ್ಟಣದ ಕೆಲಪ್ರದೇಶದಲ್ಲಿ ಮದ್ದು ದೊರೆಯುತ್ತದೆ. ಗೇರುಹಣ್ಣಿನ ಬೀಜದ ಸಿಪ್ಟೆ ಎಣ್ಣೆಗೆ ವಿಷಕಾರಿ ಎಂಡೋಸಲ್ಪಾನ್‌ ಬೆರೆಸಿ ಗೇರೆಣ್ಣೆ ಸಿದ್ಧಪಡಿಸಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಖರೀದಿಸಿ ಮೀನು ಶಿಕಾರಿಗೆ ಬಳಸಲಾ ಗುತ್ತಿದೆ. ನದಿ ಪಾತ್ರದ ಜೀವಸಂತತಿ ಜತೆಗೆ ನದಿ ಜೀವಕ್ಕೂ ಕುತ್ತು ತಂದಿದೆ. ಸಂಬಂಧಪಟ್ಟ ಆಡಳಿತ ಮಾತ್ರ ಜಾಣ ಕುರುಡತನಕ್ಕೆ ಜಾರಿದಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ