ಆ್ಯಪ್ನಗರ

ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ

ಮನೆ ಆವರಣದಲ್ಲೆಲ್ಲ ಹಚ್ಚ ಹಸಿರು, ಪ್ಲಾಸ್ಟಿಕ್‌ ಬಾಟಲ್‌ಗಳ ಮರುಬಳಕೆ, ಕಾಂಪೋಸ್ಟ್‌ ತಯಾರಿಕೆ ಹೀಗೆ ಹಲವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಮೀನಾಕ್ಷಿ ಭವನ ಹಿಂಭಾಗದ ಜಿ.ಜಿ.ಎನ್‌.ಲೇಔಟ್‌ನಲ್ಲಿರುವ ಇ.ವಿ.ಸಂಜಯ್‌ಕುಮಾರ್‌ ಸಮಾಜಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.

Vijaya Karnataka 9 Jul 2019, 5:00 am
ಶಿವಮೊಗ್ಗ: ಮನೆ ಆವರಣದಲ್ಲೆಲ್ಲ ಹಚ್ಚ ಹಸಿರು, ಪ್ಲಾಸ್ಟಿಕ್‌ ಬಾಟಲ್‌ಗಳ ಮರುಬಳಕೆ, ಕಾಂಪೋಸ್ಟ್‌ ತಯಾರಿಕೆ ಹೀಗೆ ಹಲವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಮೀನಾಕ್ಷಿ ಭವನ ಹಿಂಭಾಗದ ಜಿ.ಜಿ.ಎನ್‌.ಲೇಔಟ್‌ನಲ್ಲಿರುವ ಇ.ವಿ.ಸಂಜಯ್‌ಕುಮಾರ್‌ ಸಮಾಜಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.
Vijaya Karnataka Web SMG-0807-2-15-8SMG12


ಹವ್ಯಾಸಕ್ಕಾಗಿ ಅನುಪಯುಕ್ತ ಗಾಜಿನ ಬಾಟಲಿಗಳ ಮೇಲೆ ರಂಗೋಲಿಯ ಚಿತ್ತಾರ ಬಿಡಿಸಿದ್ದಾರೆ. ಔಷಧೀಯ ಹಾಗೂ ಹಣ್ಣಿನ ಗಿಡಗಳು, ನೈಸರ್ಗಿಕವಾಗಿ ಬೆಳೆದಿರುವಂತಹ ಗಂಧದ ಮರ ಹೀಗೆ ಹಲವು ವಿಶೇಷತೆಗಳು ಇರುವುದು ಮನೆಯ ತಾರಸಿಯ ಮೇಲೆ.

ತಾರಸಿ ಗಿಡಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಅನುಪಯುಕ್ತ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಹನಿ ನೀರಾವರಿ ಪದ್ಧ್ದತಿ, ಅಲಂಕಾರಿಕ ಗಿಡಗಳ ಪೋಷಣೆ, ಹಸಿ ಕಸವನ್ನು ವಿಂಗಡಣೆ ಮಾಡಲು ಪ್ಲಾಸ್ಟಿಕ್‌ ಬಕೆಟ್‌ನಲ್ಲಿ ಎರೆಹುಳು ಸಂಗ್ರಹಿಸಿ ಕಾಂಪೋಸ್ಟ್‌ ತಯಾರಿಕೆ ಮಾಡುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿ ಸೋಲಾರ್‌ ಲೈಟ್‌ ವ್ಯವಸ್ಥೆಯೂ ಮಾಡಲಾಗಿದೆ. ಈ ಕಾರ್ಯ ಮೆಚ್ಚಿ ಜಿಲ್ಲಾಡಳಿತವು 12ನೇ ದಿನದ ಪರಿಸರಸ್ನೇಹಿ ಕುಟುಂಬ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ