ಆ್ಯಪ್ನಗರ

ಶಿಕ್ಷಣ ಪರಿವರ್ತನೆಯ ಸಾಧನ

ವಿದ್ಯಾರ್ಥಿಗಳು ಕಲಿಕೆ ಜತೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕೆಂದು ತಾಪಂ ಅಧ್ಯಕ್ಷ ವಾಸಪ್ಪಗೌಡ ಹೇಳಿದರು.

Vijaya Karnataka 1 Sep 2019, 5:00 am
ಹೊಸನಗರ: ವಿದ್ಯಾರ್ಥಿಗಳು ಕಲಿಕೆ ಜತೆ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕೆಂದು ತಾಪಂ ಅಧ್ಯಕ್ಷ ವಾಸಪ್ಪಗೌಡ ಹೇಳಿದರು.
Vijaya Karnataka Web SMR-31HOSP2


ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿಶನಿವಾರ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಶಕ್ತಿ ದೇಶದ ಅಭಿವೃದ್ಧಿಯಲ್ಲಿಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿಶಿಕ್ಷಣ ಅತ್ಯಗತ್ಯ. ಆದರೆ ಇಂದಿನ ಪೀಳಿಗೆ ದಾರಿತಪ್ಪುತ್ತಿರುವ ಆತಂಕ ಎದುರಾಗಿದೆ. ವಿದ್ಯಾಭ್ಯಾಸದ ಜತೆ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗಳಲ್ಲಿತೊಡಗಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಕ್ರಿಯರಾಗಬೇಕೆಂದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಎಸ್‌.ಸುರೇಶ್‌ ಮಾತನಾಡಿ, ಸಾಂಸ್ಕೃತಿಕ ವೇದಿಕೆ ದೇಶದ ಸಂಸ್ಕೃತಿ ಬಿಂಬಿಸಬೇಕು. ಉತ್ತಮ ನಡವಳಿಕೆ ರೂಪಿಸಿಕೊಳ್ಳಲು ಸಹಕಾರಿಯಾಗಬೇಕೆಂದರು. ಗ್ರಾಪಂ ಅಧ್ಯಕ್ಷ ಸತೀಶ್‌ ಕಾಲ್ಸಸಿ ಮಾತನಾಡಿ, ಪರಿಸರ ಜಾಗೃತಿ ಅಗತ್ಯದ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಚಾರ‍್ಯ ಎಚ್‌.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಸಿ.ಎಚ್‌.ರವಿ, ಐಕ್ಯೂಎಸಿ ಸಂಚಾಲಕ ಡಾ. ಲೋಕೇಶಪ್ಪ, ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಟಿ.ಜಿ.ಆಶಿಕ್‌ ಮತ್ತಿತರರು ಇದ್ದರು. ಸಿ. ಜಯಪ್ಪ ಸ್ವಾಗತಿಸಿ, ಪ್ರತಿಮಾ ವಂದಿಸಿದರು. ರಂಜನಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ