ಆ್ಯಪ್ನಗರ

ಸೆ.29ಕ್ಕೆ ಜಿಲ್ಲಾವೀರಶೈವ ಮಹಾಸಭಾ ಚುನಾವಣೆ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಮತ್ತು ಸಾಗರ ತಾಲೂಕು ಘಟಕಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಹಾಸಭಾ ರಾಜ್ಯ ಘಟಕದ ಚುನಾವಣಾಧಿಕಾರಿ ಎಚ್‌.ಎಂ.ರೇಣುಕ ಪ್ರಸನ್ನ ತಿಳಿಸಿದರು.

Vijaya Karnataka 10 Sep 2019, 5:00 am
ಶಿವಮೊಗ್ಗ : ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಮತ್ತು ಸಾಗರ ತಾಲೂಕು ಘಟಕಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಹಾಸಭಾ ರಾಜ್ಯ ಘಟಕದ ಚುನಾವಣಾಧಿಕಾರಿ ಎಚ್‌.ಎಂ.ರೇಣುಕ ಪ್ರಸನ್ನ ತಿಳಿಸಿದರು.
Vijaya Karnataka Web election district veerashyva mahasabha on 29th
ಸೆ.29ಕ್ಕೆ ಜಿಲ್ಲಾವೀರಶೈವ ಮಹಾಸಭಾ ಚುನಾವಣೆ


ಸುದ್ದಿಗೋಷ್ಠಿಯಲ್ಲಿಸೋಮವಾರ ಅವರು ಮಾತನಾಡಿ, ಈಗಾಗಲೇ ಹಲವು ಜಿಲ್ಲೆಮತ್ತು ತಾಲೂಕು ಘಟಕಗಳಲ್ಲಿಚುನಾವಣಾ ಪ್ರಕ್ರಿಯೆ ಮುಗಿದಿದೆ. ಅದರಂತೆ, ಶಿವಮೊಗ್ಗ ಜಿಲ್ಲಾಘಟಕ ಮತ್ತು ಸಾಗರ ತಾಲೂಕು ಘಟಕಕ್ಕೆ ಸೆ.29ರಂದು ಚುನಾವಣೆ ನಡೆಯಲಿದೆ ಎಂದರು.

ಶಿವಮೊಗ್ಗ ಜಿಲ್ಲಾಘಟಕದ ಒಂದು ಅಧ್ಯಕ್ಷ ಸ್ಥಾನಕ್ಕೆ ಮತ್ತು 20 ಸಾಮಾನ್ಯ ಹಾಗೂ 10 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 30 ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂತೆಯೇ ಸಾಗರ ತಾಲೂಕು ಘಟಕದ ಒಂದು ಅಧ್ಯಕ್ಷ ಸ್ಥಾನಕ್ಕೆ ಮತ್ತು 13 ಸಾಮಾನ್ಯ ಹಾಗೂ 7 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 20 ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದರು.

ನಾಮಪತ್ರ ಸ್ವೀಕಾರ ಸೆ.14 ರಂದು ಬೆಳಗ್ಗೆ 10.30 ರಿಂದ ಆರಂಭವಾಗಲಿದ್ದು, ನಾಮಪತ್ರ ಸ್ವೀಕರಿಸುವ ಕೊನೆಯ ದಿನಾಂಕ ಸೆ.19 ಮಧ್ಯಾಹ್ನ 3ಕ್ಕೆ ಅವಕಾಶವಿದೆ. ನಾಮಪತ್ರ ಪರಿಶೀಲನೆ ಸೆ.20 ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೆ. 23 ರಂದು ಮಧ್ಯಾಹ್ನ 3ರವರೆಗೆ ಅವಕಾಶವಿದೆ ಎಂದರು.

ಸೆ.29 ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಶಿವಮೊಗ್ಗ ಜಿಲ್ಲಾಘಟಕದ ಚುನಾವಣಾಧಿಕಾರಿಯಾಗಿ ನಿವೃತ್ತ ಸಹಾಯಕ ಅಭಿವೃದ್ಧಿ ಅಧಿಕಾರಿ ಪಿ.ವಿಶ್ವನಾಥಯ್ಯ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಸಾಗರ ತಾಲೂಕು ಘಟಕದ ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಲೆಕ್ಕಾಧಿಕಾರಿ ಪಿ.ವಿ. ಮಾವಿನಹಳ್ಳಿ ಮಠ ಅವರನ್ನು ನೇಮಕ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆ ಮುಕ್ತವಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿವೀರಶೈವ ಸಮಾಜದ ಮುಖಂಡರಾದ ಎಚ್‌.ಎಂ. ಚಂದ್ರಶೇಖರಪ್ಪ, ರುದ್ರಮುನಿ ಸಜ್ಜನ್‌, ಬಿ.ಡಿ.ಭೂಕಾಂತ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ