ಆ್ಯಪ್ನಗರ

ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ

ಲೋಕಸಭಾ ಚುನಾವಣೆಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ಸೋಮವಾರ ಮಧ್ಯಾಹ್ನ ಸಿಬ್ಬಂದಿ ಚುನಾವಣಾ ಪರಿಕರಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ವಿವಿಧ ವಾಹನಗಳ ಮೂಲಕ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.

Vijaya Karnataka 23 Apr 2019, 5:00 am
ಸೊರಬ: ಲೋಕಸಭಾ ಚುನಾವಣೆಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ಸೋಮವಾರ ಮಧ್ಯಾಹ್ನ ಸಿಬ್ಬಂದಿ ಚುನಾವಣಾ ಪರಿಕರಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ವಿವಿಧ ವಾಹನಗಳ ಮೂಲಕ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
Vijaya Karnataka Web SMR-22srbp2


ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್‌ ಹಾಗೂ ಡಿಮಸ್ಟರಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಗರ ತಾಲೂಕು ತಾಳಗುಪ್ಪ ಹೋಬಳಿ ಸೇರಿದಂತೆ ಕ್ಷೇತ್ರದಲ್ಲಿ 239 ಬೂತ್‌ಗಳಿದ್ದು, ತಾಲೂಕಿನಲ್ಲಿ 95,277 ಪುರುಷ 92,457 ಮಹಿಳೆಯರು ಇತರೆ 10 ಮತದಾರರು ಸೇರಿದಂತೆ ಒಟ್ಟು 1,87,744 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ತಾಲೂಕಿನಲ್ಲಿ 207 ಮತಗಟ್ಟೆಗಳು ಹಾಗೂ ತಾಳಗುಪ್ಪ ಹೋಬಳಿ ವ್ಯಾಪ್ತಿಯ 32 ಸೇರಿ ಒಟ್ಟು 239 ಮತಗಟ್ಟೆಗಳಿದ್ದು, ಉದ್ರಿ, ಬಿಳವಾಣಿ, ಹುಲ್ತಿಕೊಪ್ಪ, ಉಳವಿ, ತಾಳಗುಪ್ಪ, ಬಿಳಲಿಗಿ, ಶಕುನವಳ್ಳಿ, ತಲಗಡ್ಡೆ, ಕುಬಟೂರು, ಜಡೆ, ಭಾರಂಗಿ, ಎಣ್ಣೆಕೊಪ್ಪ, ಕಾತವಳ್ಳಿ, ಹಂಚಿ, ತತ್ತೂರು, ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಗಡಿಗೇರಿ, ಕುಗ್ವೆ, ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ 154, 155, ಆನವಟ್ಟಿಯ ಪ್ರೌಢ ಶಾಲೆಯ 40,44 ಹಾಗೂ 45ನೇ ಮತಗಟ್ಟೆ ಕೇಂದ್ರಗಳು ಸೇರಿದಂತೆ ಒಟ್ಟು 23 ಮತಗಟ್ಟೆಗಳನ್ನು ಸೂಕ್ಷ ್ಮ,ಅತಿ ಸೂಕ್ಷ ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

ಪ್ರತಿ ಮತಗಟ್ಟೆಯಲ್ಲಿ 1ಪಿಆರ್‌ಒ, 1ಎಪಿಆರ್‌ಒ, ಒಬ್ಬರು ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, 1200ಕ್ಕಿಂತ ಅಧಿಕ ಮತದಾರರಿರುವ ಮತಗಟ್ಟೆ ಕೇಂದ್ರಗಳಿಗೆ ಹೆಚ್ಚುವರಿ ಒಬ್ಬ ಪಿಆರ್‌ಒ ನೇಮಿಸಲಾಗಿದೆ.

ಚುನಾವಣೆ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಕರ್ತವ್ಯಕ್ಕೆ 159 ಹೆಡ್‌ ಕಾನ್‌ಸ್ಟೇಬಲ್‌, ಪಿಎಸ್‌ಐ 18, 4 ಸಿಪಿಐ, ಇಬ್ಬರು ಡಿವೈಎಸ್ಪಿ, ಮೂರು ರಿಜರ್ವ್‌ ಪೊಲೀಸ್‌ ವಾಹನ, 2 ಡಿಎಆರ್‌, 16 ಶಸಸ್ತ್ರ ಪಡೆಗಳ ಸಿಬ್ಬಂದಿ ಹಾಗೂ 14 ಸೆಕ್ಟರ್‌ ಆಫೀಸರನ್ನು ನಿಯೋಜಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ