ಆ್ಯಪ್ನಗರ

ಕಾಡಾನೆ ದಾಳಿ: ಬೆಳೆ ನಾಶ

ಆಗುಂಬೆ ಭಾಗದಲ್ಲಿ ಒಂಟಿ ಕಾಡಾನೆ ಹಾವಳಿ ಕಳೆದ ವಾರದಿಂದ ಹೆಚ್ಚಾಗಿದ್ದು, ಸೋಮವಾರ ಸಂಜೆ ಅಡಕೆ ತೋಟ ಧ್ವಂಸ ಮಾಡಿದೆ. ತಲ್ಲೂರಂಗಡಿ ಹತ್ತಿರದ ಗುರುಮೂರ್ತಿನಾಯಕ್‌ ಅವರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ಸಸಿ ತೋಟವನ್ನು ಕಾಡಾನೆ ನಾಶಪಡಿಸಿದೆ.

Vijaya Karnataka 4 Jul 2019, 5:00 am
ತೀರ್ಥಹಳ್ಳಿ: ಆಗುಂಬೆ ಭಾಗದಲ್ಲಿ ಒಂಟಿ ಕಾಡಾನೆ ಹಾವಳಿ ಕಳೆದ ವಾರದಿಂದ ಹೆಚ್ಚಾಗಿದ್ದು, ಸೋಮವಾರ ಸಂಜೆ ಅಡಕೆ ತೋಟ ಧ್ವಂಸ ಮಾಡಿದೆ. ತಲ್ಲೂರಂಗಡಿ ಹತ್ತಿರದ ಗುರುಮೂರ್ತಿನಾಯಕ್‌ ಅವರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ಸಸಿ ತೋಟವನ್ನು ಕಾಡಾನೆ ನಾಶಪಡಿಸಿದೆ.
Vijaya Karnataka Web SMR-2TTH7


ಅಡಕೆ ತೋಟ ಧ್ವಂಸ ಮಾಡಿರುವ ಕಾಡಾನೆ ಕೃತ್ಯದಿಂದ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆ ಸ್ಥಳಾಂತರ ಮಾಡುವಂತೆ 10 ವರ್ಷದಿಂದ ಆಗ್ರಹಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಕಾಡಾನೆ ಜೀವನವನ್ನೇ ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಇನ್ನೂ ನಿರ್ಲಕ್ಷ್ಯ ತೋರಬಾರದು. ಕಾಡಾನೆ ಸ್ಥಳಾಂತರಕ್ಕೆ ಶೀಘ್ರ ಕ್ರಮವಹಿಸಬೇಕು. ಇಲಾಖೆ ಈ ಕುರಿತು ಗಮನಿಸದಿದ್ದರೆ ಪ್ರತಿಭಟನೆ ಅನಿವಾರ‍್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ