ಆ್ಯಪ್ನಗರ

ಯೋಗ ಅಭ್ಯಾಸದಿಂದ ಲವಲವಿಕೆ

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

Vijaya Karnataka 22 Jun 2019, 5:00 am
ಹೊಳೆಹೊನ್ನೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
Vijaya Karnataka Web SMR-21HHR2

ಈ ಸಂದರ್ಭ ಶಿವಮೊಗ್ಗದ ರೋಟರಿ ಯೋಗ ತರಬೇತಿ ಕೇಂದ್ರ ತರಬೇತುದಾರ ಎಚ್‌.ಎಂ.ಚಂದ್ರಶೇಖರಯ್ಯ ಮಾತನಾಡಿ, ನಿತ್ಯದಯೋಗ ಅಭ್ಯಾಸದಿಂದ ಲವಲವಿಕೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್‌.ಭೋಗೇಶ್ವರಪ್ಪ ಮಾತನಾಡಿ, ಕೇವಲ ಭೋಗದ ಜೀವನ ಇರಬಾರದು, ಯೋಗದಿಂದ ಕೂಡಿದ ಜೀವನ ಇರಬೇಕೆಂದರು. ನಾಗರತ್ನಮ್ಮ ಚಂದ್ರಶೇಖರಯ್ಯ ಯೋಗ ಗೀತೆ ಹಾಡಿ, ಯೋಗದ ಆಸನ ಪ್ರದರ್ಶಿಸಿದರು. ಎಸ್‌.ರಾಜುನಾಯ್ಕ, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಡಿ.ಶಿವಕುಮಾರ ಸ್ವಾಗತಿಸಿ, ರೋಹನ್‌ ಡಿಕಾಸ್ಟ ವಂದಿಸಿದರು. ವಿದ್ಯಾರ್ಥಿ ಎಂ.ಎಸ್‌.ಆದಿತ್ಯ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ