ಆ್ಯಪ್ನಗರ

ಪ್ರೇರಣೆಯಿಂದ ಪರಿಸರ ರಕ್ಷಣೆ

ಸಸಿ ನೆಟ್ಟು ಪೋಷಿಸುವ ಹವ್ಯಾಸ ಮಕ್ಕಳಲ್ಲಿ ಬೆಳೆಯಬೇಕು. ಪರಿಸರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಸದಾ ನಡೆಯಬೇಕೆಂದು ತೀರ್ಥಹಳ್ಳಿ ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ವಸಂತಿ ಮಂಜುನಾಥ್‌ ಹೇಳಿದರು.

Vijaya Karnataka 30 Jul 2019, 5:00 am
ತೀರ್ಥಹಳ್ಳಿ : ಸಸಿ ನೆಟ್ಟು ಪೋಷಿಸುವ ಹವ್ಯಾಸ ಮಕ್ಕಳಲ್ಲಿ ಬೆಳೆಯಬೇಕು. ಪರಿಸರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಸದಾ ನಡೆಯಬೇಕೆಂದು ತೀರ್ಥಹಳ್ಳಿ ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ವಸಂತಿ ಮಂಜುನಾಥ್‌ ಹೇಳಿದರು.
Vijaya Karnataka Web SMR-29TTH2


ತಾಲೂಕಿನ ದೂರ್ವಾಸಪುರಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ಇನ್ನರ್‌ವೀಲ್‌ ಕ್ಲಬ್‌, ಆಗುಂಬೆ ವಲಯಾರಣ್ಯ ವಿಭಾಗ ಹಮ್ಮಿಕೊಂಡಿದ್ದ ಸಸಿ ನೆಡುವ, ವಿದ್ಯಾರ್ಥಿಗಳಿಗಾಗಿ ಹಣ್ಣಿನ , ಔಷಧ ಸಸಿ ವಿತರಿಸುವ ಕಾರ‍್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಪರಿಸರವನ್ನು ಪ್ರೀತಿಸುವ ಗುಣ ಮಕ್ಕಳಲ್ಲಿ ಬೆಳೆದಾಗ ಪರಿಸರ ಸಮೃದ್ಧವಾಗಿರಲು ಸಾಧ್ಯ. ಪರಿಸರ ರಕ್ಷಣೆ ಹೊಣೆಗೆ ಮಕ್ಕಳಿಗೆ ಆರಂಭದಲ್ಲೆ ಪ್ರೇರೇಪಿಸಬೇಕು. ಉತ್ತಮವಾಗಿ ಸಸಿಗಳನ್ನು ಬೆಳೆಸಿದ ಮಕ್ಕಳಿಗೆ ಬಹುಮಾನ ನೀಡುವುದಾಗಿ ವಸಂತಿ ಮಂಜುನಾಥ್‌ ಹೇಳಿದರು. ಉಪ ವಲಯಾರಣ್ಯಧಿಕಾರಿ ಶಿವಕುಮಾರ್‌, ಶಾಲೆ ಮುಖ್ಯ ಶಿಕ್ಷಕ ನಿತ್ಯಾನಂದ್‌ ಮಾತನಾಡಿದರು. ಈ ಸಂದರ್ಭ ಇನ್ನರ್‌ವೀಲ್‌ ಕ್ಲಬ್‌ ಕಾರ‍್ಯದರ್ಶಿ ಶಕುಂತಲಾ, ವಿದ್ಯಾಶ್ರೀಧರ್‌, ಶಿಕ್ಷಕಿಯರಾದ ವಾಣಿಶ್ರೀ, ಸೌಮ್ಯ, ಜಯಲಕ್ಷ್ಮೇ, ಶಿಕ್ಷಕ ರಮೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ