ಆ್ಯಪ್ನಗರ

‘ಮಹಿಳೆಗೂ ಸಮಾನ ಅವಕಾಶ’

ಶತ ಶತಮಾನಗಳ ಕಾಲದಿಂದಲೂ ಮಹಿಳೆಯರು ಸಹ ವಚನ ರಚಿಸುವಲ್ಲಿಸಮರ್ಥರಿದ್ದಾರೆ. ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿಸಮಾನ ಅವಕಾಶ ನೀಡುವ ಮೂಲಕ ಇದನ್ನು ಜಗತ್ತಿಗೆ ತೋರಿಸಿಕೊಟ್ಟರು ಎಂದು ಅಧ್ಯಾಪಕ ಡಾ.ಬಿ.ಎಸ್‌.ತಂಬೂಳಿ ಹೇಳಿದರು.

Vijaya Karnataka 24 Nov 2019, 5:00 am
ಭದ್ರಾವತಿ: ಶತ ಶತಮಾನಗಳ ಕಾಲದಿಂದಲೂ ಮಹಿಳೆಯರು ಸಹ ವಚನ ರಚಿಸುವಲ್ಲಿಸಮರ್ಥರಿದ್ದಾರೆ. ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿಸಮಾನ ಅವಕಾಶ ನೀಡುವ ಮೂಲಕ ಇದನ್ನು ಜಗತ್ತಿಗೆ ತೋರಿಸಿಕೊಟ್ಟರು ಎಂದು ಅಧ್ಯಾಪಕ ಡಾ.ಬಿ.ಎಸ್‌.ತಂಬೂಳಿ ಹೇಳಿದರು.
Vijaya Karnataka Web equal opportunity for woman
‘ಮಹಿಳೆಗೂ ಸಮಾನ ಅವಕಾಶ’


ಅವರು ಗುರುವಾರ ಸಂಜೆ ಶ್ರೀಅಕ್ಕಮಹಾದೇವಿ ಬಳಗ, ಬಸವ ಕೇಂದ್ರ ಮತ್ತು ಶರಣ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿಹಳೇನಗರದ ಶ್ರೀಅಕ್ಕಮಹಾದೇವಿ ಸಮಯದಾಯ ಭವನದಲ್ಲಿಏರ್ಪಡಿಸಿದ್ದ 209ನೇ ಶರಣ ಸಂಗಮದಲ್ಲಿಉಪನ್ಯಾಸ ನೀಡಿದರು.

ವಚನಗಳು ಆತ್ಮ ಸಾಕ್ಷಿಯ ಮಾತುಗಳು. ಇಂತಹ ಕಾರ್ಯದಲ್ಲಿದೇವಸ್ಥಾನ ಮತ್ತು ದೇವರ ನಡುವೆ ಪೂಜಾರಿಗಳಿಲ್ಲಎಂದು ಮಾರ್ಮಿಕವಾಗಿ ನುಡಿದರು.

ಬೀರೂರಿನ ಇನ್ನರ್‌ ವೀಲ್‌ ಕ್ಲಬ್‌ ಅಧ್ಯಕ್ಷೆ ಹಾಗೂ ಬಸವಪರ ಚಿಂತಕಿ ಗೌರಿ ಪ್ರಸನ್ನ ಮಾತನಾಡಿದರು.

ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮಿಗಳವರು ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿದರು. ಸುವರ್ಣಮ್ಮ ಹಿರೇಮಠ್‌ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಅನುಭವ ಮಂಟಪದ ನಿವೃತ್ತ ಶಿಕ್ಷಕ ಎಂ.ಕುಮಾರಪ್ಪ ಇತರರು ಇದ್ದರು. ಬಳಗದ ಸದಸ್ಯರು ಪ್ರಾರ್ಥಿಸಿ, ಎಂ.ವಿರುಪಾಕ್ಷಪ್ಪ ಸ್ವಾಗತಿಸಿದರು. ಟಿ.ಜಿ.ಬಸವರಾಜಯ್ಯ ನಿರೂಪಿಸಿದರು.

======
ಅಂತರಂಗದ ಜಾಗೃತ ಅರಿವಿನ ಪ್ರಾರ್ಥನೆ ಶರಣರದ್ದಾಗಿತ್ತು. ಪ್ರಾರ್ಥನೆ ಮೂಲಕ ಭಗವಂತನಿಗೆ ನಮ್ಮ ಭಾಷೆ ಅರ್ಪಿಸುವುದೇ ಭಕ್ತಿ.
-ಗೌರಿ ಪ್ರಸನ್ನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ