ಆ್ಯಪ್ನಗರ

ಸೋತರೂ ಕಾಂಗ್ರೆಸ್‌, ಜೆಡಿಎಸ್‌ಗೆ ಬುದ್ಧಿ ಬಂದಿಲ್ಲ

ರಾಜ್ಯದ ಮತದಾರರು ಚುನಾವಣೆಯಲ್ಲಿ ಧೂಳಿಪಟ ಮಾಡಿದರೂ ಕಾಂಗ್ರೆಸ್‌, ಜೆಡಿಎಸ್‌ನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಹೇಳಿದರು.

Vijaya Karnataka 31 May 2018, 5:00 am
ಶಿವಮೊಗ್ಗ : ರಾಜ್ಯದ ಮತದಾರರು ಚುನಾವಣೆಯಲ್ಲಿ ಧೂಳಿಪಟ ಮಾಡಿದರೂ ಕಾಂಗ್ರೆಸ್‌, ಜೆಡಿಎಸ್‌ನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಹೇಳಿದರು.
Vijaya Karnataka Web eshwarappas strike against alliance government
ಸೋತರೂ ಕಾಂಗ್ರೆಸ್‌, ಜೆಡಿಎಸ್‌ಗೆ ಬುದ್ಧಿ ಬಂದಿಲ್ಲ


ನಗರದ ಶ್ರೀ ಬೆಕ್ಕಿನ ಕಲ್ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ 462ನೇ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಚುನಾವಣೆಯಲ್ಲಿ ಸೋತ ಪಕ್ಷಗಳೆರಡು ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದು, ಇದುವರೆಗೂ ಸಚಿವ ಸಂಪುಟ ವಿಸ್ತರಣೆ ನಡೆದಿಲ್ಲ. ಬೇಷರತ್‌ ಬೆಂಬಲ ಘೋಷಿಸಿದ ಕಾಂಗ್ರೆಸ್‌ ಆರಂಭದಲ್ಲಿ ಹೇಳಿದಂತೆ ನಡೆದುಕೊಳ್ಳದೇ 30-30 ತಿಂಗಳು ಅಧಿಕಾರ ಎನ್ನುವಂತಹ ಷರತ್ತು ಹಾಕುತ್ತಿದ್ದು, ಜಾತಿಗೊಂದು, ಪ್ರಾಂತ್ಯಕ್ಕೊಂದು, ಉತ್ತರ ಕರ್ನಾಟಕಕ್ಕೊಂದು ಉಪ ಮುಖ್ಯಮಂತ್ರಿ ಬೇಕು. ಜತೆಗೆ ಹಣಕಾಸು ಸೇರಿದಂತೆ ಪ್ರಮುಖ ಸಚಿವ ಸ್ಥಾನಗಳು ಬೇಕು ಎನ್ನುತ್ತಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಏನೆಲ್ಲಾ ತೊಂದರೆ ಕೊಡಬೇಕೋ ಎಲ್ಲವನ್ನೂ ಕೊಡುತ್ತಿದೆ' ಎಂದು ದೂರಿದರು.

ಸಂಸ್ಕಾರ ಇಲ್ಲದವ ಪ್ರಾಣಿಗಳಿಂತ ಕಡೆ
ಜೀವನದಲ್ಲಿ ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತಿಯೇ ಮುಖ್ಯವಲ್ಲ. ಎಲ್ಲವೂ ಇದ್ದು ಉತ್ತಮ ಸಂಸ್ಕಾರ ಇಲ್ಲದವ ಪ್ರಾಣಿಗಿಂತ ಕಡೆ. ಸಂಸ್ಕಾರ ಪಡೆದ ವ್ಯಕ್ತಿ ಸಮಾಜದ ಉತ್ತುಂಗಕ್ಕೇರಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಉತ್ತಮ ಸಂಸ್ಕಾರದ ಜತೆಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭದ್ರಾವತಿ ಸರ್‌.ಎಂ.ವಿ.ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಡಾ. ಶೈಲಜ ಹೊಸಳ್ಳೇರ 'ವಚನಕಾರರ ಜೀವನ ದೃಷ್ಟಿ' ಕುರಿತು ಉಪನ್ಯಾಸ ನೀಡಿದರು. ನಾಗಭೂಷಣ ಹೆಗಡೆ ವಚನ ಸಂಗೀತ ನೀಡಿದರು. ಕರಿಬಸವಯ್ಯ ನಿರೂಪಿಸಿದರು.

------
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ತಿಳಿಸಿ ನಾನು ಕೋರ್‌ ಕಮಿಟಿಗೆ ಭಾಗವಹಿಸಿಲ್ಲ. ಈ ಬಗ್ಗೆ ಯಾವುದೇ ತಪ್ಪು ಭಾವನೆ ಬೇಡ. ರುದ್ರೇಗೌಡರನ್ನು ಎಂಎಲ್‌ಸಿ ಮಾಡಬೇಕು ಎಂದು ನಾನೂ ಕೂಡ ಹೇಳಿದ್ದೆ. ಪಕ್ಷ ದ ಪ್ರಮುಖರು ಕುಳಿತು ಚರ್ಚೆ ಮಾಡುತ್ತಾರೆ.

- ಕೆ.ಎಸ್‌. ಈಶ್ವರಪ್ಪ, ಶಾಸಕ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ