ಆ್ಯಪ್ನಗರ

ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ

ವಿದ್ಯಾರ್ಥಿ ಜೀವನದಲ್ಲಿ , ಕ್ರೀಡಾ ಜೀವನದಲ್ಲಿ ಸೋತಾಗ ಅಳಬಾರದು. ಗೆದ್ದಾಗ ಬೀಗಬಾರದು. ಈ ಎರಡನ್ನೂ ಸಮನಾಗಿ ಸ್ವೀಕಾರಿಸಬೇಕು ಎಂದು ಅಥ್ಲೆಟಿಕ್ಸ್‌ ಆಟಗಾರ ಸಲೀಂ ಶೇಖ್‌ ಸಲಹೆ ನೀಡಿದರು.

Vijaya Karnataka 21 Dec 2018, 5:00 am
ಶಿವಮೊಗ್ಗ : ವಿದ್ಯಾರ್ಥಿ ಜೀವನದಲ್ಲಿ , ಕ್ರೀಡಾ ಜೀವನದಲ್ಲಿ ಸೋತಾಗ ಅಳಬಾರದು. ಗೆದ್ದಾಗ ಬೀಗಬಾರದು. ಈ ಎರಡನ್ನೂ ಸಮನಾಗಿ ಸ್ವೀಕಾರಿಸಬೇಕು ಎಂದು ಅಥ್ಲೆಟಿಕ್ಸ್‌ ಆಟಗಾರ ಸಲೀಂ ಶೇಖ್‌ ಸಲಹೆ ನೀಡಿದರು.
Vijaya Karnataka Web 20SMG9


ತಾಲೂಕಿನ ಜಾವಳ್ಳಿಯ ಜ್ಞಾನದೀಪ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸೋಲಿನ ಬಗ್ಗೆ ಪರಾಮರ್ಶೆ ಮಾಡುವ ಮೂಲಕ ತಿದ್ದಿಕೊಳ್ಳಬೇಕು. ಗುರುಗಳು ಹೇಳಿದ್ದನ್ನು ನಿತ್ಯ ಪರಿಪಾಲಿಸಬೇಕು. ಮಾರ್ಗದರ್ಶನದೊಂದಿಗೆ ಮುಂದುವರಿದರೆ ಖಂಡಿತ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.

ದೂರದರ್ಶನ ಕಲಾವಿದೆ ದೀಪಾ ರವಿಶಂಕರ್‌ ಮಾತನಾಡಿ, ಇಂದಿನ ಪೀಳಿಗೆಗೆ ಕ್ರೀಡಾ ಅವಕಾಶಗಳಿಗೇನೂ ಕೊರತೆ ಇಲ್ಲ. ಶಾಲಾ ಹಂತದಿಂದಲೇ ಅವಕಾಶಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಶ್ರೀಕಾಂತ ಎಂ.ಹೆಗಡೆ ಅಧ್ಯಕ್ಷ ತೆ ವಹಿಸಿದ್ದರು. ಜ್ಞಾನದೀಪ ಸಂಸ್ಥೆಯ ಆಡಳಿತಾಧಿಕಾರಿ ಮಧು, ಸಂಪನ್ಮೂಲ ವ್ಯಕ್ತಿ ಗುರುಮೂರ್ತಿ ಇತರರಿದ್ದರು. ಅಶ್ವಿನಿ ಕುಲಕರ್ಣಿ ನಿರೂಪಿಸಿದರು. ಉಪ ಪ್ರಾಚಾರ್ಯ ರೆಜಿ ಜೋಸೆಫ್‌ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ವಾಣಿ ಕೃಷ್ಣಪ್ರಸಾದ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ