ಆ್ಯಪ್ನಗರ

ಪಿಟಿ ಮಾಸ್ಟರ್‌ಗೆ ಬೀಳ್ಕೊಡುಗೆ

ಇಲ್ಲಿಗೆ ಸಮೀಪದ ಮುರುಘಾಮಠದ ಎಸ್‌ಜೆಜಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷ ಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗದಿಗೆಯ್ಯ ಅವರಿಗೆ ಬುಧವಾರ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು. 33 ವರ್ಷ ಕಾಲ ದೈಹಿಕ ಶಿಕ್ಷ ಕರಾಗಿ ಸೇವೆ ಸಲ್ಲಿಸಿದ ಅವರು ಜಿಲ್ಲೆ ಮತ್ತು ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು.

Vijaya Karnataka 4 Aug 2019, 5:00 am
ಆನಂದಪುರಂ: ಇಲ್ಲಿಗೆ ಸಮೀಪದ ಮುರುಘಾಮಠದ ಎಸ್‌ಜೆಜಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷ ಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗದಿಗೆಯ್ಯ ಅವರಿಗೆ ಬುಧವಾರ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು. 33 ವರ್ಷ ಕಾಲ ದೈಹಿಕ ಶಿಕ್ಷ ಕರಾಗಿ ಸೇವೆ ಸಲ್ಲಿಸಿದ ಅವರು ಜಿಲ್ಲೆ ಮತ್ತು ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು.
Vijaya Karnataka Web SMR-3ANPP1

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಕಬಡ್ಡಿ, ವಾಲಿಬಾಲ್‌ ಮತ್ತು ಥ್ರೋಬಾಲ್‌, ಎತ್ತರ ಜಿಗಿತ, ಉದ್ದ ಜಿಗಿತ ಇತ್ಯಾದಿಗಳಲ್ಲಿ ಶಿಸ್ತು ಬದ್ಧ ತರಬೇತಿ ನೀಡಿ ರಾಜ್ಯಮಟ್ಟದವರೆಗೂ ಕೊಂಡೊಯ್ದಿದ್ದರು. ಸಮಯ ಪಾಲನೆ, ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಶಿಸ್ತು, ಶಾಂತಿಯುತ ವರ್ತನೆ ಇತ್ಯಾದಿಗಳನ್ನು ರೂಢಿಸಿದ್ದ ಇವರು ಎಸ್‌ಜೆಜಿ ವಿದ್ಯಾಪೀಠದ ಆಡಳಿತ ಸಮಿತಿಯಿಂದ ಶಿಸ್ತಿನ ಸಿಪಾಯಿ ಎಂದೇ ಗುರುತಿಸಲ್ಪಟ್ಟಿದ್ದರು. ಶಾಲೆ ಮುಖ್ಯ ಶಿಕ್ಷ ಕರು, ಸಹ ಶಿಕ್ಷ ಕರು ಮತ್ತು ವಿದ್ಯಾರ್ಥಿಗಳು ಇವರನ್ನು ಸನ್ಮಾನಿಸಿ ಗೌರವಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ